For Quick Alerts
ALLOW NOTIFICATIONS  
For Daily Alerts
 

ಮುಕೇಶ್ ಕುಮಾರ್ ಆಸೀಸ್ ವಿರುದ್ಧ 3ನೇ ಟಿ20 ಆಡದಿರಲು ಕಾರಣವೇನು?; ವರ್ಷದ ಬಳಿಕ ದೀಪಕ್ ಚಹಾರ್ ವಾಪಸ್!

By ನಾಗೇಶ್

ಭಾರತ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಟೀಮ್ ಇಂಡಿಯಾಗೆ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ನಾಲ್ಕು ಮತ್ತು ಐದನೇ ಪಂದ್ಯಗಳಿಗೆ ಮುಕೇಶ್ ಕುಮಾರ್ ಬದಲಾಗಿ ದೀಪಕ್ ಚಹಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಹು ದಿನಗಳ ಬಳಿಕ ಬೌಲಿಂಗ್ ಆಲ್‌ರೌಂಡರ್ ದೀಪಕ್ ಚಹಾರ್ ಭಾರತ ತಂಡಕ್ಕೆ ಮರಳಿದ್ದಾರೆ. ಮುಕೇಶ್ ಕುಮಾರ್ ವಿವಾಹವಾಗುತ್ತಿರುವ ಹಿನ್ನೆಲೆ, ಮೂರನೇ ಟಿ20 ಪಂದ್ಯದಿಂದ ವಿಶ್ರಾಂತಿ ನೀಡುವಂತೆ ಮನವಿ ಮಾಡಿದ್ದರು ಎಂದು ಬಿಸಿಸಿಐ ತಿಳಿಸಿದೆ.

IND vs AUS: Mukesh Kumars Marriage; Deepak Chahar Returns to the Team India After A Year

ಮುಕೇಶ್ ಕುಮಾರ್ ಅವರ ಮೆಹಂದಿ ಕಾರ್ಯಕ್ರಮದ ವಿಡಿಯೋ ಕೂಡ ಹೊರಬಿದ್ದಿದ್ದು, ಇದರಲ್ಲಿ ಅವರು ಭೋಜ್‌ಪುರಿ ಹಾಡಿನಲ್ಲಿ ನೃತ್ಯ ಮಾಡುತ್ತಿರುವುದು ಸಖತ್ ವೈರಲ್ ಆಗಿದೆ. ಅವರು ರಾಯ್‌ಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮುಕೇಶ್ ಕುಮಾರ್ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಆದರೆ ಅವರು ಡೆತ್ ಓವರ್‌ಗಳಲ್ಲಿ ಪ್ರಭಾವಶಾಲಿಯಾಗಿದ್ದರು. ಈ ಟಿ20 ಸರಣಿ ಮೂಲಕ ಮುಕೇಶ್ ಕುಮಾರ್ ಅವರು ಭಾರತ ತಂಡಕ್ಕೆ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿದ್ದಾರೆ.

ನಾಲ್ಕನೇ ಟಿ20 ಪಂದ್ಯದಲ್ಲಿ ದೀಪಕ್ ಚಹಾರ್ ಭಾರತದ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 2022ರ ಅಕ್ಟೋಬರ್ 4ರಂದು ಇಂದೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಪರ ದೀಪಕ್ ಚಹಾರ್ ತನ್ನ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಈವರೆಗೆ ಟಿ20 ಕ್ರಿಕೆಟ್‌ನಲ್ಲಿ ದೀಪಕ್ ಚಹಾರ್ 27 ವಿಕೆಟ್ ಪಡೆದಿದ್ದಾರೆ.

IND vs AUS: Mukesh Kumars Marriage; Deepak Chahar Returns to the Team India After A Year

ಚಹಾರ್ ಅವರ ಬೌಲಿಂಗ್‌ನಲ್ಲಿ ಹೆಚ್ಚಿನ ವೇಗವನ್ನು ಹೊಂದಿಲ್ಲದಿದ್ದರೂ, ಚೆಂಡನ್ನು ಎರಡೂ ದಿಕ್ಕುಗಳಲ್ಲಿ ಸ್ವಿಂಗ್ ಮಾಡುವ ಅವರ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ನ ಹೊರತಾಗಿ, ದೀಪಕ್ ಚಹಾರ್ ಬ್ಯಾಟ್ ಕೂಡ ಮಾಡುತ್ತಾರೆ. ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ಅವರು ಅರ್ಧಶತಕವನ್ನು ಸಹ ಬಾರಿಸಿದ್ದಾರೆ.

ಜನವರಿ 2022ರಲ್ಲಿ ದೀಪಕ್ ಚಹಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 34 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ಮಿಂಚಿದ್ದರು. ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಚಹಾರ್‌ಗೆ ಆಡುವ ಅವಕಾಶ ಸಿಗಲಿಲ್ಲ, ಅವರ ಬದಲಿಗೆ ಅವೇಶ್ ಖಾನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಇದೇ ವೇಳೆ ಗುವಾಹಟಿಯಲ್ಲಿ ನಡೆದ ಮೂರನೇ ಟಿ20 ಪಂದ್ಯಕ್ಕೂ ಮುನ್ನವೇ ಸ್ಟೀವನ್ ಸ್ಮಿತ್ ಮತ್ತು ಆಡಮ್ ಝಂಪಾ ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. 2023ರ ವಿಶ್ವಕಪ್‌ನ ಆಸ್ಟ್ರೇಲಿಯಾದ ವಿಜೇತ ತಂಡದ ಭಾಗವಾಗಿದ್ದ ಆರು ಆಟಗಾರರಿಗೆ ಕಳೆದ ಮೂರು ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ.

ಇವರಲ್ಲದೆ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಇಂಗ್ಲಿಸ್ ಮತ್ತು ಶಾನ್ ಅಬಾಟ್ ಮೂರನೇ ಪಂದ್ಯದ ನಂತರ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ.

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾದ ಜೋಶ್ ಫಿಲಿಪ್ ಮತ್ತು ಬೆನ್ ಮೆಕ್ಡರ್ಮಾಟ್ ಆಸೀಸ್ ಟಿ20 ತಂಡವನ್ನು ಸೇರಿಕೊಂಡಿದ್ದಾರೆ. ರಾಯ್‌ಪುರದಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯಕ್ಕೂ ಮುನ್ನ ಬೆನ್ ದ್ವಾರಶೂಯಿಸ್ ಮತ್ತು ಸ್ಪಿನ್ನರ್ ಕ್ರಿಸ್ ಗ್ರೀನ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

Story first published: Wednesday, November 29, 2023, 13:17 [IST]
Other articles published on Nov 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+