Ind vs Aus 1st Test: 30,000 ಎಸೆತ ಬೌಲಿಂಗ್ ಮಾಡಿದರೂ ಒಮ್ಮೆಯೂ ನೋ ಬಾಲ್ ಮಾಡದ ಆಸ್ಟ್ರೇಲಿಯಾ ಬೌಲರ್!

ಬಾರ್ಡರ್ ಗವಾಸ್ಕರ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 132 ರನ್‌ಗಳ ಸೋಲನುಭವಿಸಿದೆ. ಈ ಸೋಲಿನ ನಡುವೆಯೂ ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 30 ಸಾವಿರ ಎಸೆತಗಳನ್ನು ಬೌಲಿಂಗ್ ಮಾಡಿದ್ದು, ಅವರು ಒಮ್ಮೆಯೂ ನೋ ಬಾಲ್ ಎನ್ನುವುದು ವಿಶೇಷ. ಟೆಸ್ಟ್ ಕ್ರಿಕೆಟ್‌ನಲ್ಲಿ 30 ಸಾವಿರ ಎಸೆತಗಳನ್ನ ಬೌಲ್ ಮಾಡಿದ ಬಳಿಕವೂ ಒಂದೂ ನೋ ಬಾಲ್ ಎಸೆಯದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ನಾಗ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಐತಿಹಾಸಿಕ ದಾಖಲೆ ನಿರ್ಮಿಸಿದರು. ಲಿಯಾನ್ ಆಡಿರುವ 116 ಟೆಸ್ಟ್ ಪಂದ್ಯಗಳಲ್ಲಿ 31.85 ಸರಾಸರಿಯೊಂದಿಗೆ 461 ವಿಕೆಟ್ ಪಡೆದುಕೊಂಡಿದ್ದಾರೆ. ಅದರಲ್ಲೂ ಅವರ ಬೌಲಿಂಗ್ ಶಿಸ್ತು ಸಾಕಷ್ಟು ಗಮನ ಸೆಳೆದಿದೆ.
ಕಳೆದ ಹತ್ತು ವರ್ಷದಿಂದ ಆಸ್ಟ್ರೇಲಿಯಾ ತಂಡಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ನಾಥನ್ ಲಿಯಾನ್ ತಂಡದ ಪ್ರಮುಖ ಸ್ಪಿನ್ ಶಕ್ತಿಯಾಗಿದ್ದಾರೆ. 21 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 3 ಬಾರಿ 10 ವಿಕೆಟ್ ಪಡೆದುಕೊಂಡಿದ್ದಾರೆ.

ವಿಕೆಟ್ ಪಡೆಯಲು ವಿಫಲ
ನಾಥನ್ ಲಿಯಾನ್ ಭಾರತದ ಬ್ಯಾಟರ್ ಗಳಿಗೆ ಪ್ರಮುಖ ಸಮಸ್ಯೆಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ನಾಗ್ಪುರದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ನಾಥನ್ ಲಿಯಾನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು.
49 ಓವರ್ ಬೌಲಿಂಗ್ ಮಾಡಿದ ನಾಥನ್ ಲಿಯಾನ್ 126 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಸ್ಪಿನ್ ಬೌಲಿಂಗ್‌ಗೆ ಅನುಕೂಲಕರವಾದ ಪಿಚ್‌ನಲ್ಲಿ ನಾಥನ್ ಲಿಯಾನ್ ವಿರುದ್ದ ಭಾರತದ ಬ್ಯಾಟರ್ ಗಳು ಉತ್ತಮವಾಗಿ ಆಡಿದರು.

ಟಾಡ್ ಮರ್ಫಿ ಉತ್ತಮ ಬೌಲಿಂಗ್
ಆಸ್ಟ್ರೇಲಿಯಾ ಪರವಾಗಿ ಪದರ್ಪಾಣ ಪಂದ್ಯವನ್ನಾಡಿದ ಟಾಡ್ ಮುರ್ಫಿ ಅತ್ಯುತ್ತಮ ಬೌಲಿಂಗ್ ಮಾಡಿದರು. 47 ಓವರ್ ಬೌಲಿಂಗ್ ಮಾಡಿದ ಮುರ್ಫಿ 124 ರನ್ ನೀಡಿ 7 ವಿಕೆಟ್ ಪಡೆದು ಮಿಂಚಿದರು.
ಭಾರತದ ಪರವಾಗಿ ಜಡೇಜಾ ಒಟ್ಟು 7 ವಿಕೆಟ್ ಪಡೆದರೆ, ರವಿಚಂದ್ರನ್ ಅಶ್ವಿನ್ 8 ವಿಕೆಟ್ ಪಡೆದರು. ಭಾರತ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಮುನ್ನಡೆ ಪಡೆದುಕೊಂಡಿದೆ. ಭಾರತ ಇನ್ನು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications