IND vs AUS: ಪರ್ತ್ ಟೆಸ್ಟ್‌ನಲ್ಲಿ ಐಪಿಎಲ್ ಹರಾಜಿನ ಬಗ್ಗೆ ಚರ್ಚೆ; ಪಂತ್‌ಗೆ ಲಿಯಾನ್ ಕೇಳಿದ ಪ್ರಶ್ನೆ ಏನು?
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಆರಂಭವಾಗಿದೆ. ಈ ಬಹು ನಿರೀಕ್ಷಿತ ಸರಣಿಯ ಮೇಲೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಕಣ್ಣು ನೆಟ್ಟಿದೆ. ಈ ಸರಣಿ ಗೆಲ್ಲಲೇಬೇಕಾದ ಒತ್ತಡ ಉಭಯ ತಂಡಗಳ ಆಟಗಾರರ ಮೇಲಿದೆ. ಆದರೆ, ನವೆಂಬರ್ 24 ಮತ್ತು 25ರಂದು ನಡೆಯಲಿರುವ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ಮೇಲೂ ಆಟಗಾರರು ಕಣ್ಣಿಟ್ಟಿರುವುದು ಇಂದು ಪರ್ತ್ ಮೈದಾನದಲ್ಲಿ ಕಂಡು ಬಂದಿದೆ.
ಐಪಿಎಲ್ ಮೆಗಾ ಹರಾಜಿನ ಬಗ್ಗೆ ಆಸ್ಟ್ರೇಲಿಯಾದ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ಅವರು ಟೀಮ್ ಇಂಡಿಯಾ ಸ್ಟಾರ್ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ರಿಷಬ್ ಪಂತ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ನಾಥನ್ ಲಿಯಾನ್ ಮತ್ತು ರಿಷಬ್ ಪಂತ್ ನಡುವೆ ಮೈದಾನದಲ್ಲಿ ಪ್ರಬಲ ಪೈಪೋಟಿ ಕಂಡು ಬಂದಿದೆ. ಈ ಇಬ್ಬರೂ ಆಟಗಾರರು ಪರ್ತ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ರೋಚಕ ಪಂದ್ಯದಲ್ಲಿ ಮುಖಾಮುಖಿಯಾಗಿರುವುದು ವಿಶೇಷ.

ಪರ್ತ್ ಟೆಸ್ಟ್ ವೇಳೆ ಲಿಯಾನ್ ಮತ್ತು ಪಂತ್ ನಡುವೆ ತಮಾಷೆಯ ಸಂಭಾಷಣೆ ನಡೆದಿದ್ದು, ಸ್ಟಂಪ್ ಮೈಕ್ ನಲ್ಲಿ ಅವರ ಸಂಭಾಷಣೆ ರೆಕಾರ್ಡ್ ಆಗಿದೆ. ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೊದಲ ದಿನದ ಮೊದಲ ಸೆಷನ್‌ನಲ್ಲಿ, ನಾಥನ್ ಲಿಯಾನ್ ಅವರು ರಿಷಬ್ ಪಂತ್ ಬಳಿ ಹೋಗಿ, 'ನೀವು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವ ತಂಡಕ್ಕೆ ಹೋಗುತ್ತೀರಾ' ಎಂದು ಪ್ರಶ್ನೆ ಕೇಳಿದ್ದಾರೆ.
ಪಂತ್ ಉತ್ತರ ವೈರಲ್
ನಾಥನ್ ಲಿಯಾನ್ ಅವರ ಪ್ರಶ್ನೆಗೆ ರಿಷಬ್ ಪಂತ್ ನೀಡಿದ ಉತ್ತರ ವೈರಲ್ ಆಗಿದೆ. 'ನನಗೆ ಯಾವುದೆ ಐಡಿಯಾ ಇಲ್ಲ ಎಂದು ಪಂತ್ ನಗುತ್ತಾ ಉತ್ತರಿಸಿದ್ದಾರೆ. ಈ ಸಂಭಾಷಣೆಯ ನಂತರ, ಇಬ್ಬರೂ ಆಟಗಾರರು ಪರಸ್ಪರ ನಕ್ಕಿದ್ದಾರೆ. ಇದಾದ ಬಳಿಕ ಪಂತ್ ತಕ್ಷಣವೇ ತಮ್ಮ ಬ್ಯಾಟಿಂಗ್ ಆರಂಭಿಸಿದರು. ಇಬ್ಬರೂ ಆಟಗಾರರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications