For Quick Alerts
ALLOW NOTIFICATIONS  
For Daily Alerts
 

Rohit Sharma: ರೋಹಿತ್‌ ಶರ್ಮಾ ಆಸೀಸ್‌ ಪ್ರವಾಸದಲ್ಲಿ ನಿರ್ಮಿಸಲಿರುವ 10 ದಾಖಲೆಗಳು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಭಾನುವಾರ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯ ಮೂಲಕ 7 ತಿಂಗಳು ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡಲಿದ್ದಾರೆ. ಈ ಸರಣಿ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ವಿಶೇಷವಾಗಿರಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಬರೆಯಬಹುದಾದ 10 ದಾಖಲೆಗಳ ಬಗ್ಗೆ ವರದಿ ಇಲ್ಲಿದೆ.

1- ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕೆ ಇಳಿಯುತ್ತಿದ್ದಂತೆ ರೋಹಿತ್ ಶರ್ಮಾ ವಿಶೇಷ ದಾಖಲೆ ಬರೆಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ಪಂದ್ಯಗಳನ್ನು ಆಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಐದನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

IND vs AUS ODI Series Rohit Sharma Set for International Comeback 10 Milestones Await

2- ರೋಹಿತ್ ಶರ್ಮಾ ಈಗಾಗಲೇ 273 ಏಕದಿನ ಪಂದ್ಯಗಳಲ್ಲಿ 11,168 ರನ್‌ ಕಲೆ ಹಾಕಿದ್ದಾರೆ. ಇವರು 54 ರನ್‌ ಬಾರಿಸುವಲ್ಲಿ ಸಫಲರಾದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಮೂರನೇ ಬ್ಯಾಟರ್ ಆಗಲಿದದಾರೆ. ಈ ಮೂಲಕ ಸೌರವ್ ಗಂಗೂಲಿ (11221 ರನ್) ದಾಖಲೆ ಅಳಿಸಿ ಹಾಕಲಿದ್ದಾರೆ.

3- ರೋಹಿತ್ ಶರ್ಮಾ ಒಟ್ಟಾರೆ ಏಕದಿನ ಕ್ರಿಕೆಟ್‌ನಲ್ಲಿ 344 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಸರಣಿಯಲ್ಲಿ ಇವರು 8 ಸಿಕ್ಸರ್ ಬಾರಿಸುವಲ್ಲಿ ಸಫಲರಾದಲ್ಲಿ, ಪಾಕ್ ಆಟಗಾರ ಶಾಹೀದ್ ಅಫ್ರಿದಿ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಅಫ್ರಿದಿ 398 ಏಕದಿನ ಪಂದ್ಯಗಳಲ್ಲಿ 351 ರನ್‌ ಸಿಡಿಸಿದ್ದಾರೆ.

ದಾಖಲೆಗಳತ್ತ ಚಿತ್ತ

4- ಒಂದು ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 12 ಸಿಕ್ಸರ್ ಬಾರಿಸುವಲ್ಲಿ ಸಫಲರಾದಲ್ಲಿ, ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

5- ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ 300 ರನ್‌ ಕಲೆ ಹಾಕುವಲ್ಲಿ ಸಫಲರಾದಲ್ಲಿ, ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರ ರನ್‌ ಕಲೆ ಹಾಕಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಳ್ಳಿದ್ದಾರೆ. ಈ ಮೊದಲು ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮಾಡಿದ್ದಾರೆ.

6- ಆಸ್ಟ್ರೇಲಿಯಾದಲ್ಲಿ 10 ರನ್‌ ಬಾರಿಸುತ್ತಿದ್ದಂತೆ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಕಾಂಗರೂ ನಾಡಿನಲ್ಲಿ 1 ಸಾವಿರ ರನ್‌ ಕಲೆ ಹಾಕಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಸದ್ಯ ಇವರು ಆಡಿದ 19 ಏಕದಿನ ಪಂದ್ಯಗಳಲ್ಲಿ 990 ರನ್‌ ಸಿಡಿಸಿದ್ದಾರೆ.

7- ಸದ್ಯ ರೋಹಿತ್ ಶರ್ಮಾ ಬುಟ್ಟಿಯಲ್ಲಿ ಒಟ್ಟಾರೆ 49 ಶತಕಗಳು (12 ಟೆಸ್ಟ್, 32 ಏಕದಿನ, 5 ಟಿ20) ಸೇರಿವೆ. ಈ ಸರಣಿಯಲ್ಲಿ ಇನ್ನೊಂದು ಶತಕ ಬಾರಿಸುವಲ್ಲಿ ಸಫಲರಾದಲ್ಲಿ ರೋಹಿತ್‌ ತಮ್ಮ ವೃತ್ತಿ ಜೀವನದಲ್ಲಿ 50 ಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

IND vs AUS ODI Series Rohit Sharma Set for International Comeback 10 Milestones Await

8- ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ಶತಕವನ್ನು ಬಾರಿಸುವಲ್ಲಿ ರೋಹಿತ್ ಶರ್ಮಾ ಯಶಸ್ವಿಯಾದಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿ ಗಟ್ಟಲಿದ್ದಾರೆ. ಸಚಿನ್ ತೆಂಡೂಲ್ಕರ್ ಆಸೀಸ್ ವಿರುದ್ಧ 9 ಶತಕ ಸಿಡಿಸಿದ್ದಾರೆ. ಇನ್ನು 2 ಶತಕ ಬಾರಿಸಿದ್ದೇ ಆದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ 6 ವಿಶ್ವಕಪ್‌ ಗೆದ್ದ ಆಸೀಸ್‌ ವಿರುದ್ಧ 10 ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

9- ರೋಹಿತ್ ಶರ್ಮಾ ಈ ಸರಣಿಯಲ್ಲಿ 174 ರನ್ ಬಾರಿಸುವಲ್ಲಿ ಸಫಲರಾದರೆ, ಭಾರತದ ಪರ ಆರಂಭಿಕರಾಗಿ ಅತಿ ಹೆಚ್ಚು ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ದಾಖಲೆ ಸದ್ಯ ವೀರೇಂದ್ರ ಸೆಹ್ವಾಗ್‌ ಅವರ ಹೆಸರಿನಲ್ಲಿದೆ. ಇವರು 321 ಪಂದ್ಯಗಳಲ್ಲಿ 15,758 ರನ್‌ ಕಲೆ ಹಾಕಿದ್ದಾರೆ.

10- ಆಸೀಸ್ ವಿರುದ್ಧದ ಸರಣಿಯಲ್ಲಿ ರೋಹಿತ್ 2 ಶತಕವನ್ನು ಬಾರಿಸುವಲ್ಲಿ ಸಫಲಾರದಲ್ಲಿ ದಿಗ್ಗಜ ಕ್ರಿಕೆಟ್‌ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಅಳಿಸಿ ಹಾಕಲಿದ್ದಾರೆ. ಸಚಿನ್ ಭಾರತದ ಪರ ಎಲ್ಲ ಫಾರ್ಮೆಟ್‌ಗಳಲ್ಲಿ 346 ಪಂದ್ಯಗಳಲ್ಲಿ 45 ಶತಕವನ್ನು ಬಾರಿಸಿದ್ದಾರೆ. ರೋಹಿತ್ ಶರ್ಮಾ 349 ಪಂದ್ಯಗಳಲ್ಲಿ 44 ಶತಕವನ್ನು ಸಿಡಿಸಿದ್ದಾರೆ.

Story first published: Saturday, October 18, 2025, 8:15 [IST]
Other articles published on Oct 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+