IND vs AUS: 4ನೇ ಟೆಸ್ಟ್‌ಗೂ ಪ್ಯಾಟ್ ಕಮಿನ್ಸ್ ಅಲಭ್ಯತೆ: ನಾಯಕನಾಗಿ ಮುಂದುವರೆಯಲಿರುವ ಸ್ಟೀವ್ ಸ್ಮಿತ್

ಮೂರನೇ ಟೆಸ್ಟ್ ಪಂದ್ಯವನ್ನು ಗೆದ್ದು ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಾಪಸಾತಿ ಮಾಡಿರುವ ಆಸ್ಟ್ರೇಲಿಯಾ 4ನೇ ಟೆಸ್ಟ್‌ಗೆ ಸಜ್ಜಾಗುತ್ತಿದೆ. ನಾಲ್ಕನೇ ಟೆಸ್ಟ್‌ಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯರಾಗಿದ್ದು, ಸ್ಟೀವ್ ಸ್ಮಿತ್ ನಾಯಕರಾಗಿ ಮುಂದುವರೆಯಲಿದ್ದಾರೆ.
ಬಾರ್ಡರ್ ಗವಾಸ್ಕರ್ ಸರಣಿಯ 2ನೇ ಟೆಸ್ಟ್ ಮುಗಿದ ಬಳಿಕ ನಾಯಕ ಪ್ಯಾಟ್ ಕಮ್ಮಿನ್ಸ್ ತವರಿಗೆ ಮರಳಿದ್ದರು. ಕಮ್ಮಿನ್ಸ್ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕಾರಣ ಕಮಿನ್ಸ್ ತಾಯಿಯ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದರು.
ಮೂರನೇ ಟೆಸ್ಟ್ ಪಂದ್ಯಕ್ಕೆ ಮುನ್ನ ವಾಪಸಾಗುತ್ತಾರೆ ಎನ್ನಲಾಗಿತ್ತಾದರು ಕಮಿನ್ಸ್ ಕುಟುಂಬದ ಜೊತೆ ಉಳಿಯಲು ನಿರ್ಧರಿಸಿದರು. ತಾಯಿಯ ಆರೋಗ್ಯ ಇನ್ನೂ ಸುಧಾರಿಸದ ಕಾರಣ ಕಮಿನ್ಸ್ 4ನೇ ಟೆಸ್ಟ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ನಾಯಕನ ನಿರ್ಧಾರಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ತಂಡದ ಆಟಗಾರರು ಒಪ್ಪಿಗೆ ನೀಡಿದ್ದಾರೆ.
ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಅನುಭವಿ ಆಟಗಾರ ಸ್ಟೀವ್ ಸ್ಮಿತ್ 4ನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಡಿತ್ತು. ಮೂರನೇ ಟೆಸ್ಟ್‌ನಲ್ಲಿ 9 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ವೈಟ್‌ವಾಶ್ ಆಗುವುದರಿಂದ ತಪ್ಪಿಸಿಕೊಂಡಿದೆ.

ಪ್ಯಾಟ್ ಕಮಿನ್ಸ್ ನಿರ್ಧಾರಕ್ಕೆ ಬಿಟ್ಟ ಕ್ರಿಕೆಟ್ ಆಸ್ಟ್ರೇಲಿಯಾ
2ನೇ ಟೆಸ್ಟ್ ಮುಗಿದ ನಂತರ ತವರಿಗೆ ಮರಳಬೇಕಾ ಅಥವಾ ತಂಡದ ಜೊತೆ ಇರಬೇಕಾ ಎಂದು ನಿರ್ಧರಿಸಲು ಪ್ಯಾಟ್ ಕಮ್ಮಿನ್ಸ್ ಅವರಿಗೆ ತಿಳಿಸಲಾಗಿತ್ತು. ಸಹ ಆಟಗಾರರ ಜೊತೆ ಮಾತನಾಡಿದ ಪಾಟ್ ಕಮ್ಮಿನ್ಸ್ ಮನೆಗೆ ವಾಪಸ್ ತೆರಳಲು ನಿರ್ಧರಿಸಿದ್ದರು. ಕಮಿನ್ಸ್ ತಾಯಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅಲ್ಲೆ ಉಳಿಯಲು ನಿರ್ಧರಿಸಿದ್ದಾರೆ.
"ಪ್ಯಾಟ್ ಕಮಿನ್ಸ್ ತಂಡದ ಜೊತೆ ಇಲ್ಲದಿದ್ದರೂ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಇಲ್ಲಿಲ್ಲ ಆದರೆ 4ನೇ ಟೆಸ್ಟ್‌ಗೆ ಕೆಲವೇ ದಿನಗಳು ಇರುವುದರಿಂದ ಅವರ ಜೊತೆ ಪ್ರತಿ ದಿನ ಚರ್ಚೆ ಮಾಡಲಾಗುತ್ತಿದೆ" ಎಂದು ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿದರು.

ಕಮಿನ್ಸ್ ಅಲಭ್ಯತೆ ಕಾಡುತ್ತಿಲ್ಲ
ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಮತ್ತು ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ ಅವರ ಅಲಭ್ಯತೆ ತಂಡವನ್ನು ಹೆಚ್ಚಾಗಿ ಕಾಡಿಲ್ಲ. ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಸಮರ್ಪಕವಾಗಿ ತಂಡವನ್ನು ಮುನ್ನಡೆಸಿದ್ದಾರೆ, ಮೂರನೇ ಟೆಸ್ಟ್‌ನಲ್ಲಿ ಗೆಲ್ಲುವಲ್ಲಿ ಕೂಡ ಯಶಸ್ವಿಯಾಗಿದ್ದಾರೆ.
ಟೆಸ್ಟ್ ಸರಣಿಯ ನಂತರ ಆಸ್ಟ್ರೇಲಿಯಾ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆ ವೇಳೆಗೆ ಅವರು ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಬಿಡುವಿಲ್ಲದ ವೇಳಾಪಟ್ಟಿಯ ಕಾರಣದಿಂದ ಪ್ಯಾಟ್ ಕಮಿನ್ಸ್ ಈ ಬಾರಿಯ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications