Rishabh Pant: ಪರ್ತ್ ಟೆಸ್ಟ್‌ನ ಮೊದಲ ದಿನವೇ ರೋಹಿತ್-ಕೊಹ್ಲಿ ಕ್ಲಬ್ ಸೇರಿದ ಪಂತ್
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯವು ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನವೇ ಭಾರತದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ತಮ್ಮ ಹೆಸರಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 37 ರನ್ ಗಳಿಸಿದರು. ಇದರೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ಲಬ್ ಸೇರಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಂತ್ ಈ ದಾಖಲೆ ಮಾಡಿರುವುದು ವಿಶೇಷವಾಗಿದೆ.
ಪರ್ತ್ ಟೆಸ್ಟ್‌ನಲ್ಲಿ ಭಾರತ ತಂಡ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 150 ರನ್‌ಗಳಿಗೆ ಸೀಮಿತವಾಗಿತ್ತು. ಈ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ ಅವರ 37 ರನ್‌ಗಳೂ ಸೇರಿವೆ. ಈ ಇನ್ನಿಂಗ್ಸ್‌ನೊಂದಿಗೆ ಪಂತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ)ನಲ್ಲಿ 2000 ರನ್ ಪೂರೈಸಿದರು. ಈ ಮೂಲಕ ಪಂತ್ ಅವರು ಡಬ್ಲ್ಯೂಟಿಸಿಯಲ್ಲಿ 2000 ಪೂರೈಸಿದ ಬ್ಯಾಟರ್‌ಗಳ ಕ್ಲಬ್‌ಗೆ ಸೇರಿದರು.

ರೋಹಿತ್-ಕೊಹ್ಲಿ ಕ್ಲಬ್
ರಿಷಬ್ ಪಂತ್ 37 ರನ್‌ಗಳನ್ನು ಕಲೆ ಹಾಕುತ್ತಿದ್ದಂತೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶೇಷ ಕ್ಲಬ್‌ಗೆ ಕಾಲಿಟ್ಟರು. ಡಬ್ಲ್ಯೂಟಿಸಿಯಲ್ಲಿ 2000 ರನ್ ಪೂರೈಸಿದ ಮೂರನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಪಂತ್ ಪಾತ್ರರಾದರು. ಅವರಿಗಿಂತ ಮೊದಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ರೋಹಿತ್ ಶರ್ಮಾ 2685 ರನ್ ಮತ್ತು ಕೊಹ್ಲಿ 2432 ರನ್ ಗಳಿಸಿದ್ದಾರೆ. ಈಗ ರಿಷಬ್ ಪಂತ್ 2034 ಬಾರಿಸಿದ್ದಾರೆ.
ಭಾರತದ ಟಾಪ್-5 ಬ್ಯಾಟರ್
ರೋಹಿತ್ ಶರ್ಮಾ - 2685 ರನ್
ವಿರಾಟ್ ಕೊಹ್ಲಿ - 2432 ರನ್
ರಿಷಬ್ ಪಂತ್ - 2034 ರನ್
ಶುಭಮನ್ ಗಿಲ್ - 1800 ರನ್
ಚೇತೇಶ್ವರ ಪೂಜಾರ - 1769 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications