IND vs AUS: ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಡೇರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಬೃಹತ್ ಮೊತ್ತ ಕಲೆಹಾಕಿತು.
ಇದೇ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ 200ಕ್ಕೂ ಅಧಿಕ ಸಿಕ್ಸರ್‌ಗಳ ವಿಶ್ವದಾಖಲೆ ನಿರ್ಮಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದರು.

ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ರೋಹಿತ್ ಶರ್ಮಾ ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 50 ರನ್ ಗಳಿಸಿದ ಆಟಗಾರನಾದರು. ಇದಕ್ಕೂ ಮೊದಲು ಯುಎಸ್ಎ ತಂಡದ ಆರೋನ್ ಜೋನ್ಸ್ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
- ರೋಹಿತ್ ಶರ್ಮಾ (ಭಾರತ) - 203
- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 173
- ಜೋಸ್ ಬಟ್ಲರ್ (ಇಂಗ್ಲೆಂಡ್) - 137
- ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) - 133
- ನಿಕೋಲಸ್ ಪೂರನ್ (ವೆಸ್ಟ್ ಇಂಡೀಸ್) - 132
ರೋಹಿತ್ ಶರ್ಮಾ ಅವರ 19 ಎಸೆತಗಳ ಅರ್ಧಶತಕವು ಟಿ20 ವಿಶ್ವಕಪ್‌ನ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧದ ವೇಗದ ಅರ್ಧಶತಕವಾಗಿದೆ. ಅಲ್ಲದೆ, ಇದು ಟಿ20 ವಿಶ್ವಕಪ್‌ನ ಎಲ್ಲಾ ಆವೃತ್ತಿಗಳಲ್ಲಿ ಭಾರತದ ಮೂರನೇ ವೇಗದ ಅರ್ಧಶತಕವಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ
- ಯುವರಾಜ್ ಸಿಂಗ್ - 12 ಎಸೆತಗಳು - vs ಇಂಗ್ಲೆಂಡ್, 2007
- ಕೆಎಲ್ ರಾಹುಲ್ - 18 ಎಸೆತಗಳು - vs ಸ್ಕಾಟ್ಲೆಂಡ್, 2021
- ರೋಹಿತ್ ಶರ್ಮಾ - 19 ಎಸೆತಗಳು - vs ಆಸ್ಟ್ರೇಲಿಯಾ, 2024
- ಯುವರಾಜ್ ಸಿಂಗ್ - 20 ಎಸೆತಗಳು - vs ಆಸ್ಟ್ರೇಲಿಯಾ, 2007
- ಸೂರ್ಯಕುಮಾರ್ ಯಾದವ್ - 23 ಎಸೆತಗಳು - vs ಜಿಂಬಾಬ್ವೆ, 2022

2024ರ ಟಿ20 ವಿಶ್ವಕಪ್‌ನಲ್ಲಿ ವೇಗವಾಗಿ ಅರ್ಧಶತಕ ಗಳಿಸಿದ ಆಟಗಾರರು
- ರೋಹಿತ್ ಶರ್ಮಾ (ಭಾರತ) - vs ಆಸ್ಟ್ರೇಲಿಯಾ, 19 ಎಸೆತಗಳು
- ಆರೋನ್ ಜೋನ್ಸ್ (ಯುಎಸ್ಎ) - vs ಕೆನಡಾ, 22 ಎಸೆತಗಳು
- ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯಾ) - vs ಸ್ಕಾಟ್ಲೆಂಡ್, 25 ಎಸೆತಗಳು
- ಶಾಯ್ ಹೋಪ್ (ವೆಸ್ಟ್ ಇಂಡೀಸ್) - vs ಯುಎಸ್ಎ, 26 ಎಸೆತಗಳು
ಇದೇ ವೇಳೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದರೆ, ಆನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇದ್ದಾರೆ.
ನಂತರದ ಸ್ಥಾನದಲ್ಲಿ ಶೇನ್ ವ್ಯಾಟ್ಸನ್, ಜೋಸ್ ಬಟ್ಲರ್, ಯುವರಾಜ್ ಸಿಂಗ್ ಮತ್ತು ಡೇವಿಡ್ ವಾರ್ನರ್ ಅವರಂತಹವರು ಸಹ ಟಾಪ್ 5ರ ಪಟ್ಟಿಯಲ್ಲಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್‌ಗಳು
- ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 63 ಸಿಕ್ಸರ್
- ರೋಹಿತ್ ಶರ್ಮಾ (ಭಾರತ) 47 - ಸಿಕ್ಸರ್
- ಜೋಸ್ ಬಟ್ಲರ್ (ಇಂಗ್ಲೆಂಡ್) - ಸಿಕ್ಸರ್
- ಯುವರಾಜ್ ಸಿಂಗ್ (ಭಾರತ) 33 - ಸಿಕ್ಸರ್
- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 31 - ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications