Rohit Sharma: ಟಿ20 ಕ್ರಿಕೆಟ್‌ನಲ್ಲಿ ಬಾಬರ್ ಅಜಂ, ವಿರಾಟ್ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ
ಸೋಮವಾರ, ಜೂನ್ 24ರಂದು ಸೇಂಟ್ ಲೂಸಿಯಾದ ಡೇರೆನ್ ಸ್ಯಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಇದೇ ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್ 8ರ ಪಂದ್ಯದ ವೇಳೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ಭಾರತದ ಸಹ ಆಟಗಾರ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.

ಕೇವಲ 19 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ರೋಹಿತ್ ಶರ್ಮಾ ಅವರು 2024ರ ಟಿ20 ವಿಶ್ವಕಪ್‌ನಲ್ಲಿ ಅತಿ ವೇಗವಾಗಿ 50 ರನ್ ಗಳಿಸಿದ ಆಟಗಾರನಾದರು. ಅಂತಿಮವಾಗಿ ರೋಹಿತ್ ಶರ್ಮಾ ಕೇವಲ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್‌ಗಳ ಸಮೇತ 92 ರನ್ ಬಾರಿಸಿ 8 ರನ್‌ಗಳಿಂದ ಶತಕ ವಂಚಿತರಾದರು.
ರೋಹಿತ್ ಶರ್ಮಾ ಇದೀಗ 149 ಟಿ20 ಇನ್ನಿಂಗ್ಸ್‌ಗಳಲ್ಲಿ 32.10ರ ಸರಾಸರಿ ಮತ್ತು ಪ್ರಭಾವಶಾಲಿ 140.64ರ ಸ್ಟ್ರೈಕ್ ರೇಟ್‌ನೊಂದಿಗೆ 4,165 ರನ್ ಗಳಿಸಿದ್ದಾರೆ. ಇನ್ನು 116 ಟಿ20 ಇನ್ನಿಂಗ್ಸ್‌ಗಳಲ್ಲಿ 41.03ರ ಸರಾಸರಿ ಮತ್ತು 129.08ರ ಸ್ಟ್ರೈಕ್ ರೇಟ್‌ನಲ್ಲಿ 4,145 ರನ್ ಗಳಿಸಿದ ಬಾಬರ್ ಅಜಂ ಅವರನ್ನು ಹಿಂದಿಕ್ಕಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು
- ರೋಹಿತ್ ಶರ್ಮಾ (ಭಾರತ) - 149 ಇನ್ನಿಂಗ್ಸ್‌ಗಳಲ್ಲಿ 4,165 ರನ್
- ಬಾಬರ್ ಅಜಂ (ಪಾಕಿಸ್ತಾನ) - 116 ಇನ್ನಿಂಗ್ಸ್‌ಗಳಲ್ಲಿ 4,145 ರನ್
- ವಿರಾಟ್ ಕೊಹ್ಲಿ (ಭಾರತ) - 115 ಇನ್ನಿಂಗ್ಸ್‌ಗಳಲ್ಲಿ 4,103 ರನ್
- ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) - 144 ಇನ್ನಿಂಗ್ಸ್‌ಗಳಲ್ಲಿ 3,601 ರನ್
- ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) - 118 ಇನ್ನಿಂಗ್ಸ್‌ಗಳಲ್ಲಿ 3,531 ರನ್
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿದರು ಮತ್ತು ಆಸೀಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಮೂಲಕ ಟಿ20 ಪಂದ್ಯಗಳಲ್ಲಿ 200ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅನುಭವಿ ಬಲಗೈ ಬ್ಯಾಟರ್ ರೋಹಿತ್ ಶರ್ಮಾ ಈ ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸಿದ ನಂತರ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಮೂಲಕ ಸಿಕ್ಸರ್‌ಗಳ ಮೊತ್ತವನ್ನು 203ಕ್ಕೆ ಕೊಂಡೊಯ್ದರು.
ಇದೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ (47) ಅವರು ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (40) ಮತ್ತು ಜೋಸ್ ಬಟ್ಲರ್ (43) ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಾದರು. ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ 63 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
1) ರೋಹಿತ್ ಶರ್ಮಾ - 150 ಇನ್ನಿಂಗ್ಸ್‌ಗಳಲ್ಲಿ 203 ಸಿಕ್ಸರ್
2) ಮಾರ್ಟಿನ್ ಗಪ್ಟಿಲ್ - 118 ಇನ್ನಿಂಗ್ಸ್‌ಗಳಲ್ಲಿ 173 ಸಿಕ್ಸರ್
3) ಜೋಸ್ ಬಟ್ಲರ್ - 113 ಇನ್ನಿಂಗ್ಸ್‌ಗಳಲ್ಲಿ 137 ಸಿಕ್ಸರ್
4) ಗ್ಲೆನ್ ಮ್ಯಾಕ್ಸ್‌ವೆಲ್ - 103 ಇನ್ನಿಂಗ್ಸ್‌ಗಳಲ್ಲಿ 133 ಸಿಕ್ಸರ್
5) ನಿಕೋಲಸ್ ಪೂರನ್ - 87 ಇನ್ನಿಂಗ್ಸ್‌ಗಳಲ್ಲಿ 132 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications