For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ವಿರಾಟ್‌, ರಾಹುಲ್ ದಾಖಲೆ ಧ್ವಂಸ ಮಾಡಿದ ರುತುರಾಜ್ ಗಾಯಕ್ವಾಡ್

ಶುಕ್ರವಾರ, ಡಿಸೆಂಬರ್ 1ರಂದು ರಾಯ್‌ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ತಮ್ಮ ಹೆಸರಿನ ಮುಂದೆ ದೊಡ್ಡ ದಾಖಲೆಯನ್ನು ಬರೆದುಕೊಂಡಿದ್ದಾರೆ.

ರುತುರಾಜ್ ಗಾಯಕ್ವಾಡ್ ಅವರು ಭಾರತದ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ದಾಖಲೆಯನ್ನು ಹಿಂದಿಕ್ಕಿ ಅಬ್ಬರಿಸಿದ್ದಾರೆ. ರುತುರಾಜ್ ನಾಲ್ಕನೇ ಟಿ20 ಪಂದ್ಯದಲ್ಲಿ 28 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 32 ರನ್ ಬಾರಿಸಿದರು.

ಈ ಮೂಲಕ ಭಾರತ ಪಂದ್ಯವನ್ನು ಗೆದ್ದು, ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಟಿ20 ಸರಣಿಯನ್ನು 3-1 ಅಂತರದಲ್ಲಿ ಮಡಿಲಿಗೆ ಹಾಕಿಕೊಂಡಿದೆ.

 IND vs AUS: Ruturaj Gaikwad Broke KL Rahul, Virat kohlis T20 cricket Record

ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 9 ವಿಕೆಟ್‌ಗೆ 174 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗೆ 154 ರನ್ ಗಳಿಸಿ 20 ರನ್‌ಗಳ ಸೋಲು ಕಂಡಿತು.

ಭರ್ಜರಿ ಫಾರ್ಮ್‌ನಲ್ಲಿರುವ ರುತುರಾಜ್ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿದ್ದಾರೆ. 26 ವರ್ಷದ ಬಲಗೈ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ ಇದೀಗ ಟಿ20 ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದರು.

ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ನಾಲ್ಕು ಸಾವಿರ ರನ್ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ರುತುರಾಜ್ ಅವರು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ದಾಖಲೆಯನ್ನು ಹಿಂದಿಕ್ಕಿದರು.

ರುತುರಾಜ್ ಗಾಯಕ್ವಾಡ್ ಆಡಿದ 116 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೆಎಲ್ ರಾಹುಲ್ 117 ಇನ್ನಿಂಗ್ಸ್‌ಗಳಲ್ಲಿ 4 ಸಾವಿರದ ಗಡಿ ದಾಟಿದ್ದರೆ, ವಿರಾಟ್ ಕೊಹ್ಲಿ 138 ಇನ್ನಿಂಗ್ಸ್‌ಗಳಲ್ಲಿ 4 ಸಾವಿರದ ಗಡಿ ಮುಟ್ಟಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆ ವೇಗವಾಗಿ 4000 ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನವನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಲೆಜೆಂಡ್ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.

ಕ್ರಿಸ್ ಗೇಲ್ 107 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರಿಗಿಂತ ಮುಂದೆ ಶಾನ್ ಮಾರ್ಷ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಇದ್ದಾರೆ. ಆಸ್ಟ್ರೇಲಿಯಾದ ಶಾನ್ ಮಾರ್ಷ್ 113 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದರೆ, ಬಾಬರ್ ಅಜಂ 115 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ತಲುಪಿದರು.

ರುತುರಾಜ್ ಗಾಯಕ್ವಾಡ್ 121 ಟಿ20 ಪಂದ್ಯಗಳಲ್ಲಿ 4025 ರನ್ ಗಳಿಸಿದ್ದಾರೆ. 18 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 490 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ಅವರು ಆಡಿದ ಅಜೇಯ 123 ರನ್ ಅವರ ಅತ್ಯುತ್ತಮ ಸ್ಕೋರ್.

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಸರಣಿಯ ಮೊದಲ 4 ಪಂದ್ಯಗಳಲ್ಲಿ ರುತುರಾಜ್ ಗಾಯಕ್ವಾಡ್ 71ರ ಸರಾಸರಿಯಲ್ಲಿ 213 ರನ್ ಗಳಿಸಿದ್ದಾರೆ.

Story first published: Saturday, December 2, 2023, 16:40 [IST]
Other articles published on Dec 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+