Gabba Test: ಕವರ್ ಡ್ರೈವ್ ಎಡವಟ್ಟು; ಕೊಹ್ಲಿಗೆ ಸುನಿಲ್ ಗವಾಸ್ಕರ್ ಕೊಟ್ಟ ಸಲಹೆ ಏನು?
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫ್ಲಾಪ್ ಶೋ ಮುಂದುವರಿದಿದೆ. ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರು ಆಫ್ ಸ್ಟಂಪ್‌ನ ಹೊರಗಿನ ಚೆಂಡುಗಳನ್ನು ಎದುರಿಸುವಲ್ಲಿ ವಿಫಲವಾಗಿದ್ದು, ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಸ್ಬೇನ್‌ನ ಗಬ್ಬಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ನ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಆಫ್ ಸ್ಟಂಪ್‌ನ ಹೊರಗಿನ ಚೆಂಡನ್ನು ಎದುರಿಸಲಿಉ ಹೋಗಿ ಔಟಾಗಿದ್ದಾರೆ. ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಕವರ್ ಡ್ರೈವ್ ಹೊಡೆಯಲು ಹೋಗಿ ಕೊಹ್ಲಿ 3 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿದ್ದಾರೆ. ಇದಾದ ಬಳಿಕ ಭಾರತ ತಂಡದ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿಗೆ ಸಲಹೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಅವರಿಗೆ ಆಫ್ ಸ್ಟಂಪ್‌ನ ಹೊರಗಿನ ಚೆಂಡಗಳಲ್ಲಿ ತಮ್ಮ ಸಮಸ್ಯೆಯನ್ನು ನಿವಾರಿಸಲು ಟೀಮ್ ಇಂಡಿಯಾ ಮಾಜಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರಿಂದ ಸ್ಪೂರ್ತಿ ಪಡೆಯಲು ಸುನಿಲ್ ಗವಾಸ್ಕರ್ ಹೇಳಿದ್ದಾರೆ. 2004 ರಲ್ಲಿ ಸಿಡ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಕಟ್ಟಿದ ಅದ್ಭುತ ಇನ್ನಿಂಗ್ಸ್‌ನಿಂದ ವಿರಾಟ್ ಸ್ಫೂರ್ತಿ ಪಡೆಯಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸಚಿನ್ ಕವರ್ ಡ್ರೈವ್ ಅನ್ನು ಹೊಡೆಯದೆ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು.
ಸಚಿನ್ ಇನ್ನಿಂಗ್ಸ್‌ನಿಂದ ಸ್ಫೂರ್ತಿ
ವಿರಾಟ್ ಕೊಹ್ಲಿ ಪರ್ತ್‌ನಲ್ಲಿ ಶತಕ ಬಾರಿಸಿದ ನಂತರ ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 15 ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆಫ್ ಸ್ಟಂಪ್ ಚೆಂಡಿನಲ್ಲಿ ಮಾತ್ರ ಕ್ಯಾಚ್ ಔಟ್ ಆಗಿದ್ದಾರೆ. 2003-04 ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ವೇಳೆ ಸಚಿನ್ ತೆಂಡೂಲ್ಕರ್ ಅವರು ಕೂಡ ಇಂತಹ ಸಂದರ್ಭವನ್ನು ಎದುರಿಸಿದ್ದರು. ಆಫ್ ಸ್ಟಂಪ್ ಚೆಂಡಿಗೆ ಕವರ್ ಡ್ರೈವ್ ಆಡಲು ಹೋಗಿ ಸಚಿನ್ ಔಟಾಗಿದ್ದರು. ನಂತರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಸಚಿನ್ ಅಜೇಯ 241 ರನ್‌ಗಳ ಅಮೋಘ ಇನ್ನಿಂಗ್ಸ್ ಅನ್ನು ಕವರ್ ಡ್ರೈವ್‌ಗೆ ಹೊಡೆಯದೆಯೇ ಆಡಿದ್ದರು.
ಇದೀಗ ವಿರಾಟ್ ಕೊಹ್ಲಿ ವಿಚಾರದಲ್ಲಿ ಸಚಿನ್ ಅವರ ಇನ್ನಿಂಗ್ಸ್ ಅನ್ನು ಗವಾಸ್ಕರ್ ನೆನಪಿಸಿಕೊಂಡಿದ್ದಾರೆ. ನನ್ನ ಪ್ರಕಾರ ಅಭ್ಯಾಸವೇ ಬೇರೆ, ಮೈದಾನದಲ್ಲಿ ನಡೆಯುವುದೇ ಬೇರೆ. ಮನಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಅಭ್ಯಾಸದಲ್ಲಿ ಏನಾಗುತ್ತದೆ ಎಂಬುದು ನಿಮಗೆ ತಿಳಿದಿದೆ. ನೀವು ಕೆಟ್ಟ ಹೊಡೆತಗಳನ್ನು ಆಡಿದರೆ, ನಂತರ ಸರಿ ಮಾಡಿಕೊಳ್ಳಬಹುದು. ಆದರೆ ಪಂದ್ಯದಲ್ಲಿ ಔಟಾದರೆ ಔಟ್. 2004 ರಲ್ಲಿ ಸಚಿನ್ ತೆಂಡೂಲ್ಕರ್ ಮಾಡಿದ್ದನ್ನು ಕೊಹ್ಲಿ ಬಹುಶಃ ಮಾಡಬಹುದು ಎಂಬ ಭರವಸೆಯಿದೆ. ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ, ಆಫ್-ಸ್ಟಂಪ್‌ನ ಹೊರಗಿನ ಲೈನ್‌ನಲ್ಲಿ ಆಡುವಾಗ ಅವರು ಔಟಾಗಿದ್ದಾರೆ. ಅದರಿಂದ ಸಚಿನ್ ಅವರಿಂದ ಕೊಹ್ಲಿ ಸ್ಫೂರ್ತಿ ಪಡೆಯಬೇಕೆಂದು ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications