Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Rishabh Pant: ಚೆಂಡು ಬಡಿದು ಗಾಯಗಳಾಗಿರುವ ಬಗ್ಗೆ ರಿಷಬ್ ಪಂತ್ ಹೇಳಿದ್ದೇನು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಬ್ಯಾಟರ್ ರಿಷಬ್ ಪಂತ್ 98 ಎಸೆತಗಳಲ್ಲಿ 40 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್‌ಗಳನ್ನು ಆಡಿದರು. ಸಿಡ್ನಿ ಟೆಸ್ಟ್ ಪಂದ್ಯದ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ತಂಡಕ್ಕೆ ಆಸರೆಯಾದರು. ಈ ವೇಳೆ ಪಂತ್ ಅವರಿಗೆ ಚೆಂಡು ಬಡಿದು ಗಂಭೀರ ಗಾಯಗಳಾಗಿದ್ದು, ಈ ಬಗ್ಗೆ ಪಂದ್ಯದ ನಂತರ ಬಹಿರಂಗವಾಗಿ ಮಾತನಾಡಿದ್ದಾರೆ.

ಟೀಮ್ ಇಂಡಿಯಾದ ಬ್ಯಾಟರ್‌ಗಳು ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಒಂದೆಡೆ ವಿಕೆಟ್ ಬೀಳುತ್ತಿದ್ದರೆ, ರಿಷಬ್ ಪಂತ್ ಕ್ರೀಸ್‌ನಲ್ಲಿ ಕಚ್ಚಿ ನಿಂತು ಬ್ಯಾಟ್ ಬೀಸಿದರು. ಆದರೆ ಪಂತ್ ಸಾಕಷ್ಟು ಹೊಡೆತಗಳನ್ನು ಚೆಂಡಿನಿಂದ ತಿಂದರು.

Ind vs AUS Sydney Test What did Rishabh Pant say about being hit by the ball and getting injured

ರಿಷಬ್ ಪಂತ್ ಹೇಳಿದ್ದೇನು?

ಮೊದಲ ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಪಂತ್ ತಮ್ಮ ಇಂದಿನ ಆಟದ ಬಗ್ಗೆ ಮಾತನಾಡಿದರು. ಖಂಡಿತವಾಗಿಯೂ ಇಂದು ನೋವಿನಿಂದ ಕೂಡಿದೆ, ಆದರೆ ಕೆಲವೊಮ್ಮೆ ನೀವು ತಂಡಕ್ಕಾಗಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ, ಪರವಾಗಿಲ್ಲ. ನಾನು ಎಲ್ಲಿ ಗಾಯಗೊಂಡಿದ್ದೇನೆ ಎಂದು ನಾನು ಹೆಚ್ಚು ಯೋಚಿಸುವುದಿಲ್ಲ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಚೆಂಡನ್ನು ಆಡುತ್ತಿದ್ದೆ. ನನ್ನಿಂದ ಮಾಡಬಹುದಾದ ಏಕೈಕ ಕೆಲಸವನ್ನು ನಾನು ಮಾಡಿದ್ದೇನೆ. ನನ್ನ ದೇಹದ ಮೇಲೆ ಇಷ್ಟೊಂದು ಗಾಯಗಳಾಗಿದ್ದು ಇದೇ ಮೊದಲು. ನೀವು ಕ್ರಿಕೆಟ್‌ನಲ್ಲಿ ಏನನ್ನೂ ಯೋಜಿಸಲು ಸಾಧ್ಯವಿಲ್ಲ. ನಿಮ್ಮ ವೃತ್ತಿಜೀವನದ ಒಂದು ಹಂತದಲ್ಲಿ, ಎಲ್ಲವೂ ಮೊದಲ ಬಾರಿಗೆ ಸಂಭವಿಸುತ್ತದೆ. ಇಂದು ನಾನು ಕೂಡ ಹೀಗೆಯೇ ಇದ್ದೆ, ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ ಎಂದು ಪಂತ್ ಹೇಳಿದ್ದಾರೆ.

ಕ್ರಿಕೆಟಿಗನಾಗಿ ನೀವು ಪ್ರತಿಯೊಂದು ರೀತಿಯ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಅದರ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸಬೇಕು. 185 ಸ್ಕೋರ್ ತುಂಬಾ ಸ್ಪರ್ಧಾತ್ಮಕ ಸ್ಕೋರ್. ಏಕೆಂದರೆ ಸಿಡ್ನಿಯಲ್ಲಿ ಚೆಂಡನ್ನು ತಿರುಗಿಸುವ ವಿಧಾನವಾಗಿದೆ. ಬೌಲರ್‌ಗಳಿಗೆ ಸಾಕಷ್ಟು ಸಹಾಯವಿದೆ. ನಾವು ಅದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದು ಎರಡನೇ ದಿನ ಟೀಮ್ ಇಂಡಿಯಾ ಬೌಲರ್‌ಗಳು ಮೇಲುಗೈ ಸಾಧಿಸುವ ಭರವಸೆಯನ್ನು ಪಂತ್ ವ್ಯಕ್ತಪಡಿಸಿದ್ದಾರೆ.

ರೋಹಿತ್ ಬಗ್ಗೆ ಪಂತ್ ಮಾತು

ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗದಿಂದ ರೋಹಿತ್ ಶರ್ಮಾ ಹೊರಗುಳಿದಿರುವ ಬಗ್ಗೆ ರಿಷಬ್ ಪಂತ್ ಮಾತನಾಡಿದ್ದಾರೆ. ರೋಹಿತ್ ಶರ್ಮಾ ದೀರ್ಘಕಾಲದವರೆಗೆ ನಾಯಕನಾಗಿರುವ ಕಾರಣ ಇದೊಂದು ಭಾವನಾತ್ಮಕ ನಿರ್ಧಾರವಾಗಿತ್ತು. ನಾವು ಅವರನ್ನು ತಂಡದ ನಾಯಕನಾಗಿ ನೋಡುತ್ತೇವೆ. ನೀವು ಭಾಗಿಯಾಗಿರದ ಕೆಲವು ನಿರ್ಧಾರಗಳಿವೆ. ಇದು ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರ. ನಾನು ಆ ಸಂಭಾಷಣೆಯ ಭಾಗವಾಗಿರಲಿಲ್ಲ. ಆದ್ದರಿಂದ ನಾನು ಅದರ ಬಗ್ಗೆ ಹೆಚ್ಚು ಹೇಳಲಾರೆ ಎಂದಿದ್ದಾರೆ.

Story first published: Friday, January 3, 2025, 20:30 [IST]
Other articles published on Jan 3, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+