For Quick Alerts
ALLOW NOTIFICATIONS  
For Daily Alerts
 

Ind Vs Aus T20: ಭುವನೇಶ್ವರ್ ಕುಮಾರ್‌ಗೆ 19ನೇ ಓವರ್‌ ನೀಡಿದ್ಯಾಕೆ ಎಂದ ಅಭಿಮಾನಿಗಳು

ಮಹತ್ವದ ಏಷ್ಯಾಕಪ್ ಪಂದ್ಯಗಳ 19ನೇ ಓವರ್‌ಗಳಲ್ಲಿ ಪಾಕಿಸ್ತಾನ ವಿರುದ್ಧ 19 ರನ್ ಮತ್ತು ಶ್ರೀಲಂಕಾ ವಿರುದ್ಧ 14 ರನ್ ನೀಡಿದ ನಂತರ, ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಮತ್ತೊಂದು ನಿರಾಶಾದಾಯಕ 19 ನೇ ಓವರ್ ಅನ್ನು ಬೌಲಿಂಗ್‌ ಮಾಡಿದರು. ಭಾರತ ನೀಡಿದ 209 ರನ್ ಗುರಿಯನ್ನು ಆಸೀಸ್ ಬೆನ್ನಟ್ಟಿದ ಸಂದರ್ಭದಲ್ಲಿ ಭುವನೇಶ್ವರ್ 19ನೇ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟರು.

ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಕೇವಲ 2 ರನ್ ಮಾತ್ರ ಬೇಕಿತ್ತು. 20ನೇ ಓವರ್ ಮಾಡಿದ ಚಹಾಲ್ ಮೊದಲನೇ ಎಸೆತದಲ್ಲೇ ವಿಕೆಟ್ ಪಡೆದುಕೊಂಡರು, ನಂತರ ಕ್ರೀಸ್‌ಗೆ ಬಂದ ಪಾಟ್ ಕಮ್ಮಿನ್ಸ್‌ ಓವರ್‌ನ ಎರಡನೇ ಎಸೆತವನ್ನು ಬೌಂಡರಿಗೆ ಕಳಿಸುವ ಮೂಲಕ ಆಸ್ಟ್ರೇಲಿಯಾಗೆ 4 ವಿಕೆಟ್‌ಗಳ ಜಯ ತಂದುಕೊಟ್ಟರು.

ಟಿ20 ಪಂದ್ಯಗಳಿಗೆ ಬಂದಾಗ, 19 ನೇ ಓವರ್‌ಗೆ ಹೆಚ್ಚು ಮಹತ್ವವಿದೆ. ಹೆಚ್ಚಿನ ಬಿಗಿಯಾದ ಪಂದ್ಯಗಳು 20 ನೇ ಓವರ್‌ನಲ್ಲಿ ರೋಚಕ ಹಣಹಣಿಯಲ್ಲಿ ಕೊನೆಗೊಂಡರೂ, ಅಂತಿಮ ಓವರ್‌ನಲ್ಲಿ ಅದೃಷ್ಟವು ಹೆಚ್ಚು ಕಡಿಮೆ ನಿರ್ಧಾರವಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ 4 ಓವರ್ ಗಳಲ್ಲಿ 52 ರನ್ ಬಿಟ್ಟುಕೊಟ್ಟ ಭುವನೇಶ್ವರ್ ಕುಮಾರ್ ವಿಕೆಟ್ ಪಡೆಯುವಲ್ಲಿ ವಿಫಲಾದರು.

ಮೂರು ಪಂದ್ಯಗಳಲ್ಲಿ ವಿಫಲವಾದ ಭುವನೇಶ್ವರ್

19ನೇ ಓವರ್ ನಿರ್ಣಾಯಕವಾಗಿದ್ದರೂ, ಭಾರತದ ನಾಯಕ ರೋಹಿತ್ ಶರ್ಮಾ ಕಳೆದ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್‌ಗೆ 19ನೇ ಓವರ್‌ನಲ್ಲಿ ಬೌಲಿಂಗ್ ನೀಡಿದ್ದಾರೆ, ಆದರೆ ಮೂರು ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

Ind vs Aus T20: Bhuvneshwar 19th Over Disappointment Continues, Netizens Shared A Variety Of Memes

3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ, ಭುವನೇಶ್ವರ್ ಕುಮಾರ್‌ಗೆ ಮತ್ತೊಮ್ಮೆ 19ನೇ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಲಾಯಿತು. ಆದರೆ ಕುಸಿತವನ್ನು ಅಲುಗಾಡಿಸಲು ಸಾಧ್ಯವಾಗುವ ಬದಲು, 19 ನೇ ಓವರ್‌ನ ಶಾಪ ಮುಂದುವರೆಯಿತು. ನೆಟಿಜನ್‌ಗಳು ಈಬಗ್ಗೆ ತ್ವರಿತವಾಗಿ ಪ್ರತಿಕ್ರಿಯೆ ನೀಡಿದರು. ಹಲವಾರು ಕ್ರಿಕೆಟ್ ಅಭಿಮಾನಿಗಳು ತಮ್ಮ ಭಾವನೆಯನ್ನು ವ್ಯಕ್ತಪಡಿಸುವ ವಿವಿಧ ಮೀಮ್‌ಗಳು ಮತ್ತು ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್ ಶರ್ಮಾ ವಿರುದ್ಧ ಟೀಕೆ

ಭುವನೇಶ್ವರ್ ಕುಮಾರ್ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಮತ್ತು ಭಾರತಕ್ಕೆ ಇದು ದುಬಾರಿಯಾಗಿದೆ ಎಂದು ಕೆಲವರು ನಿರಾಸೆ ವ್ಯಕ್ತಪಡಿಸಿದರು. "ಈ ವ್ಯಕ್ತಿ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುತ್ತಿರುವುದರಿಂದ ಬೇಸರಗೊಂಡಿದ್ದೇನೆ" ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

ಇತ್ತೀಚಿನ ವೈಫಲ್ಯಗಳ ಹೊರತಾಗಿಯೂ ಆಯ್ಕೆಯನ್ನು ಪುನರಾವರ್ತಿಸುವ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. "ರೋಹಿತ್ ಶರ್ಮಾ ಅಂತಿಮ ಓವರ್ ಸಮಯದಲ್ಲಿ ಭುವನೇಶ್ವರ್ ಬಳಿ ಏಕೆ ಬೌಲಿಂಗ್ ಮಾಡಿಸುತ್ತಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ.

ಭುವನೇಶ್ವರ್ ಕುಮಾರ್ ಅವರ 19 ನೇ ಓವರ್ ಶಾಪದ ಬಗ್ಗೆ ಅವರು ಹೊಂದಿದ್ದ ಭಾವನೆಯನ್ನು ಚಿತ್ರಿಸುವ ಹಲವಾರು ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ.

Story first published: Wednesday, September 21, 2022, 8:50 [IST]
Other articles published on Sep 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+