Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind VS Aus: ವಿದ್ಯುತ್ ಬಿಲ್ ಕಟ್ಟದ ಕ್ರಿಕೆಟ್ ಮಂಡಳಿ, ಮೈದಾನಕ್ಕೆ ಕರೆಂಟ್ ಕಟ್!

ಕ್ರಿಕೆಟ್ ಶ್ರೀಮಂತರ ಕ್ರೀಡೆ, ಕ್ರಿಕೆಟ್ ಆಟಗಾರನಾದರೆ ಕೋಟಿ, ಕೋಟಿ ದುಡಿಯಬಹುದೆಂಬ ಕಲ್ಪನೆ ಜಗತ್ತಿನಾದ್ಯಂತ ಇದೆ. ಹೀಗಿದ್ದಾಗ ಕ್ರಿಕೆಟ್ ಮೈದಾನ ಒಂದು ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದೆ. ಭಾರತ VS ಆಸ್ಟ್ರೇಲಿಯಾ ಕ್ರಿಕೆಟ್ ಮ್ಯಾಚ್‌ಗೆ ಈಗ ಕತ್ತಲೆ ಭಯ ಆವರಿಸಿದೆ. ಹಾಗಾದರೆ ಈ ನಗೆಪಾಟಲಿನ ಎಡವಟ್ಟು ನಡೆದಿರೋದು ಎಲ್ಲಿ?

ಭಾರತ & ಆಸ್ಟ್ರೇಲಿಯಾ ತಂಡಗಳ ನಡುವಿನ 4ನೇ ಟಿ20 ಕ್ರಿಕೆಟ್ ಪಂದ್ಯ ಇಂದು ನಡೆಯಲಿದೆ. ರಾಯಪುರ್ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ ಸಿದ್ಧತೆ ನಡೆಸಿದ್ದು, ಹೀಗಿದ್ದಾಗ ಕ್ರಿಕೆಟ್ ಮೈದಾನಕ್ಕೆ ಕರೆಂಟ್ ಶಾಕ್ ಸಿಕ್ಕಿದೆ. ಮಹತ್ವದ ಪಂದ್ಯ ನಡೆಯಲು ಕೆಲ ಗಂಟೆಗಳು ಬಾಕಿಯಿದ್ದರೂ, ಕ್ರೀಡಾಂಗಣದಲ್ಲಿ ವಿದ್ಯುತ್ ಪೂರೈಕೆ ಬಂದ್ ಆಗೋಗಿದೆ. ಇದಕ್ಕೆ ಕಾರಣ ಆಗಿದ್ದು ವಿದ್ಯುತ್ ಬಿಲ್ ಬಾಕಿ. ಕೋಟಿ ಕೋಟಿ ವಿದ್ಯುತ್ ಬಿಲ್ ಕಟ್ಟದ ಕಾರಣಕ್ಕೆ ಇದೀಗ ರಾಯಪುರ್ ಕ್ರಿಕೆಟ್ ಮೈದಾನ ಸಂಕಷ್ಟಕ್ಕೆ ಸಿಲುಕಿದೆ.

IND vs AUS T20: No Electricity in Raipur Stadium Due to Unpaid Electricity Bills Spanning 5 Years

2009ರಿಂದ ಕರೆಂಟ್ ಬಿಲ್ ಕಟ್ಟಿಲ್ಲ

ಸಾಮಾನ್ಯ ಜನ ವಿದ್ಯುತ್ ಬಿಲ್ ಕಟ್ಟದೇ ಇದ್ರೆ ಎಷ್ಟು ತಿಂಗಳು ಸುಮ್ಮನೆ ಇರ್ತಾರೆ ಹೇಳಿ? ಒಂದು ತಿಂಗಳು ಅಥವಾ ಅಬ್ಬಬ್ಬಾ ಅಂದ್ರೆ ಎರಡು ತಿಂಗಳು ಸೈಲೆಂಟ್ ಆಗಿ ಇರಬಹುದು. ಆದರೆ ರಾಯಪುರ್ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಮೈದಾನದ ವಿದ್ಯುತ್ ಬಿಲ್ 2009 ರಿಂದ ಕಟ್ಟೇ ಇಲ್ಲವಂತೆ. ಹೀಗೆ ಸುಮಾರು 14 ವರ್ಷದಿಂದ ಬಿಲ್ ಕಟ್ಟೇ ಇಲ್ಲವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ರಾಯಪುರ್ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರಿಕೆಟ್ ಮೈದಾನ ಕರೆಂಟ್ ಕಟ್ ಆಗಿದೆ. ಈ ಬಗ್ಗೆ ಎನ್‌ಡಿಟಿವಿ ವರದಿ ಪ್ರಕಟಿಸಿದ್ದು, ಸಂಚಲನ ಸೃಷ್ಟಿಯಾಗಿದೆ.

ಬಾಕಿ ಬಿಲ್ ಕೇಳಿದ್ರೆ ತಲೆ ತಿರುಗುತ್ತೆ!

ಒಂದು ಸಾವಿರ ಅಲ್ಲ ಎರಡು ಸಾವಿರ ಅಲ್ಲ ಬರೋಬ್ಬರಿ 3.16 ಕೋಟಿ ರೂಪಾಯಿಯನ್ನ ವಿದ್ಯುತ್ ಬಾಕಿಯಾಗಿ ಉಳಿಸಿಕೊಂಡಿದೆ ರಾಯಪುರ್ ಕ್ರಿಕೆಟ್ ಮೈದಾನ. 5 ವರ್ಷದ ಹಿಂದೆ ಈ ಕ್ರೀಡಾಂಗಣಕ್ಕೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ. ಛತ್ತೀಸ್‌ಗಢದ ರಾಜ್ಯ ಕ್ರಿಕೆಟ್ ಒಕ್ಕೂಟದ ಮನವಿ ಹಿನ್ನೆಲೆ ಕ್ರೀಡಾಂಗಣಕ್ಕೆ ತಾತ್ಕಾಲಿಕ ವಿದ್ಯುತ್ ಪೂರೈಕೆ ಒದಗಿಸಲಾಗಿದೆ. ಆದರೆ ಈ ವಿದ್ಯುತ್, ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗೆ ಸಾಕಾಗಲಿದೆ. ಇಂದು ನಡೆಯಲಿರುವ ಪಂದ್ಯದ ವೇಳೆ ಜನರೇಟರ್ ನೆರವಿನಿಂದ ಹೊನಲು ಬೆಳಕಿನ ವ್ಯವಸ್ಥೆ ಮಾಡಬೇಕಾಗುತ್ತದೆ.

IND vs AUS T20: No Electricity in Raipur Stadium Due to Unpaid Electricity Bills Spanning 5 Years

ಮುಂದಿನ ಕಥೆ ಏನು ಗುರೂ?

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಯಪುರ್ ಅಧಿಕಾರಿ ಅಶೋಕ್ ಖಂಡೇಲ್ ವಾಲ್, ಕ್ರಿಕೆಟ್ ಒಕ್ಕೂಟ ಕಾರ್ಯದರ್ಶಿ ಕ್ರೀಡಾಂಗಣಕ್ಕೆ ಒದಗಿಸಿದ ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯ ಹೆಚ್ಚಳ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ. ತಾತ್ಕಾಲಿಕ ಸಂಪರ್ಕದ ಸಾಮರ್ಥ್ಯವು 200 ಕೆವಿ ಇದ್ದು, 1000 ಕೆವಿಗೆ ಏರಿಕೆ ಮಾಡಬೇಕು ಅಂತ ಮನವಿ ಮಾಡಲಾಗಿದೆ. ಆದರೂ ಕೆಲಸ ನಡೆದಿಲ್ಲ, ಹೀಗಾಗಿ ಸಮಸ್ಯೆ ಪಕ್ಕಾ ಅನ್ನೋ ಭಯ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗ ಆವರಿಸಿದೆ.

ಇದೇ ಮೊದಲಲ್ಲ ಈ ಗೋಳು!

2018ರಲ್ಲಿ ಮ್ಯಾರಥಾನ್ ವೇಳೆ ಅಥ್ಲೀಟ್ಸ್ ಭಾಗವಹಿಸಿದ್ದಾಗ ಇದೇ ಕ್ರೀಡಾಂಗಣದಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಆಗಲೂ ಭಾರಿ ಕಿರಿಕ್ ನಡೆದಿತ್ತು. ನಂತರ, ವಿದ್ಯುತ್ ಶುಲ್ಕವನ್ನು 2009ರಿಂದ ಪಾವತಿಸಲಾಗಿಲ್ಲ ಎಂದು ಪ್ರಕಟಿಸಲಾಗಿತ್ತು. ಆ ವೇಳೆಗೆ ವಿದ್ಯುತ್ ಶುಲ್ಕ ಬಾಕಿ ಮೊತ್ತ ಬರೋಬ್ಬರಿ 3.16 ಕೋಟಿ ರೂಪಾಯಿಗೂ ಹೆಚ್ಚಾಗಿತ್ತು. ಹೀಗೆ 2018ರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ನಂತರ ಈವರೆಗೆ ಈ ಕ್ರೀಡಾಂಗಣದಲ್ಲಿ ಒಟ್ಟು 3 ಇಂಟರ್ನ್ಯಾಷನಲ್ ಕ್ರಿಕೆಟ್ ಮ್ಯಾಚ್ ನಡೆದಿವೆ.

Story first published: Friday, December 1, 2023, 14:57 [IST]
Other articles published on Dec 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+