ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಅಕ್ಷರ್ ಅಟ್ಟಹಾಸ, ವೇಡ್ ಆರ್ಭಟ: ಭಾರತಕ್ಕೆ ಗೆಲ್ಲಲು 91 ರನ್ ಗುರಿ

Ind vs Aus: Team India need 91 runs to to win against Australia in 2nd t20I

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ನಾಗ್ಲುರದಲ್ಲಿ ನಡೆಯುತ್ತಿದೆ. ಈ ಪಮದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ ನಿಗದಿತ 8 ಓವರ್‌ಗಳಲ್ಲಿ 90 ರನ್‌ಗಳಿಸಿದ್ದು ಭಾರತಕ್ಕೆ ಗೆಲ್ಲಲು ಕಠಿಣ ಸವಾಲು ನೀಡಿದೆ. ಆಸ್ಟ್ರೇಲಿಯಾ ತಂಡದ ಪರವಾಗಿ ಮ್ಯಾಥ್ಯೂ ವೇಡ್ ಸ್ಪೋಟಕ ಪ್ರದರ್ಶನ ನಿಡಿ ಮಿಂಚಿದರೆ ಭಾರತದ ಪರವಾಗಿ ಅಕ್ಷರ್ ಪಟೇಲ್ ಅಮೋಘ ಬೌಲಿಂಗ್ ದಾಳಿಯ ಮೂಲಕ ಮಿಂಚಿದ್ದಾರೆ.

ಅಕ್ಷರ್ ಪಟೇಲ್ ಅಬ್ಬರದಾಟ: 8 ಓವರ್‌ಗಳ ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಕೇವಲ 13 ರನ್‌ಗಳನ್ನು ನೀಡಿದ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಆಸಿಸ್ ಪಡೆಗೆ ಭಾರೀ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಇನ್ನು ಈ ಪಂದ್ಯದ ಮೂಲಕ ಕಮ್‌ಬ್ಯಾಕ್ ಮಾಡಿರುವ ಜಸ್ಪ್ರೀತ್ ಬೂಮ್ರಾ ಕೂಡ ಅದ್ಭುತ ಯಾರ್ಕರ್ ಮೂಲಕ ಆರೋನ್ ಫಿಂಚ್ ವಿಕೆಟ್ ಪಡೆದುಕೊಂಡರು.

ಇನ್ನು ಆಸ್ಟ್ರೇಲಿಯಾ ತಂಡದ ಪರವಾಗಿ ಈ ಪಂದ್ಯದಲ್ಲಿಯೂ ಮಿಂಚಿದ್ದ ಮ್ಯಾಥ್ಯೂ ವೇಡ್. ಇತರ ಬ್ಯಾಟರ್‌ಗಳು ರನಬ್‌ಗಳಿಸಲು ಪರದಾಡುತ್ತಿದ್ದರೆ ಮ್ಯಾಥ್ಯೂ ವೇಡ್ ರನ್ ಮಳೆ ಹರಿಸಿದರು. ಕೇವಲ 20 ಎಸೆತ ಎದುರಿಸಿದ ವೇಡ್ 43 ರನ್ ಬಾರಿಸಿದ್ದಾರೆ. ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದೆ. 215ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 90 ರನ್‌ಗಳಿಸಲು ಸಾಧ್ಯವಾಯಿತು.

ಟೀಮ್ ಇಂಡಿಯಾ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್

ಬೆಂಚ್: ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ದೀಪಕ್ ಹೂಡಾ, ದೀಪಕ್ ಚಹಾರ್

ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಜೋಶ್ ಇಂಗ್ಲಿಸ್, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್, ಆಷ್ಟನ್ ಅಗರ್

Story first published: Friday, September 23, 2022, 22:30 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X