Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS: ಆಸ್ಟ್ರೇಲಿಯಾಕ್ಕೆ 'ರೆಡ್ ಅಲರ್ಟ್'; ಕೊನೆಯ ಕ್ಷಣದಲ್ಲಿ ಭಾರತದ ಪ್ಲೇಯಿಂಗ್-11 ಬದಲಾಗುತ್ತಾ?

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆಲುವು ಭಾರತ ತಂಡಕ್ಕೆ ಮಹತ್ವದಾಗಿದೆ. ಆದರೆ ಒಂದಲ್ಲ ಒಂದು ಹೊಡೆತ ಭಾರತ ತಂಡಕ್ಕೆ ಬೀಳುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಪರ್ತ್‌ ಅಪ್ಟಸ್ ಸ್ಟೇಡಿಯಂನಲ್ಲಿ ನವೆಂಬರ್ 22 ರಂದು ಆರಂಭವಾಗಲಿದೆ. ಪರ್ತ್ ಟೆಸ್ಟ್‌ಗೆ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಟೀಮ್ ಇಂಡಿಯಾ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರ ಆಡುವ ಹನ್ನೊಂದರ ಬಳಗ ಸಿದ್ಧವಾಗಿದೆ ಎಂದಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಆಸ್ಟ್ರೇಲಿಯಾವನ್ನು ನಮ್ಮ ಪ್ಲೇಯಿಂಗ್ ಅಚ್ಚರಿಗೊಳಿಸಬಹುದು ಎಂದು ಅವರು ಹೇಳಿದ್ದಾರೆ.

ಪರ್ತ್ ಟೆಸ್ಟ್‌ಗೂ ಮುನ್ನ ಟೀಮ್ ಇಂಡಿಯಾ ಒಂದರ ಹಿಂದೆ ಒಂದರಂತೆ ಹಿನ್ನಡೆಯಾಗುತ್ತಿದೆ. ಹಲವು ಆಟಗಾರರು ಗಾಯಗೊಂಡಿದ್ದು, ಅದರಲ್ಲಿ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಒಬ್ಬರು. ಆದರೆ ಅವರು ಒಂದು ದಿನ ಮುಂಚಿತವಾಗಿ ಗಾಯದ ಚೇತರಿಸಿಕೊಂಡಂತೆ ಕಾಣುತ್ತಿದ್ದು, ಪರ್ತ್ ಟೆಸ್ಟ್ ಪಂದ್ಯ ಆಡುವ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಟೀಮ್ ಇಂಡಿಯಾ ಹಂಚಿಕೊಂಡಿಲ್ಲ.

IND vs AUS Team India playing-11 Will change in last minute of Perth Test

ಜಡೇಜಾ ಫಿಟ್ ಆಗಿದ್ದಾರಾ?

ಅಭ್ಯಾಸದ ವೇಳೆ ರವೀಂದ್ರ ಜಡೇಜಾ ಅವರ ಹೊಟ್ಟೆಯ ಕೆಳಭಾಗಕ್ಕೆ ಗಾಯವಾಗಿತ್ತು. ಇದು ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸಿದ್ದು, ಆಡುವ ಹನ್ನೊಂದರಲ್ಲಿ ರವಿಚಂದ್ರನ್ ಅಶ್ವಿನ್ ಮಾತ್ರ ಸ್ಪಿನ್ನರ್ ಆಗಿ ಆಡಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ಆದರೆ ನವೆಂಬರ್ 21 ರಂದು, ಜಡೇಜಾ ಗಾಯದಿಂದ ಚೇತರಿಸಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಈಗ ಪರ್ತ್ ಟೆಸ್ಟ್‌ನಲ್ಲಿ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಜಡ್ಡು ಆಡುವ ಸಾಧ್ಯತೆಯಿದೆ. ಒಂದು ವೇಳೆ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಟೀಮ್ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡಿದರು ಅಚ್ಚರಿಪಡಬೇಕಿಲ್ಲ.

ಮಾಧ್ಯಮ ವರದಿಗಳ ಪ್ರಕಾರ, ರವೀಂದ್ರ ಜಡೇಜಾ ಗುರುವಾರ ಟೀಮ್ ಇಂಡಿಯಾದ ಪೂರ್ಣ ಅಭ್ಯಾಸವಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಆಡುವ ಹನ್ನೊಂದರಲ್ಲಿ ಇರುವ ಎಲ್ಲ ಸಾಧ್ಯತೆಗಳಿವೆ. ಆದರೆ, ಬುಮ್ರಾ ಪತ್ರಿಕಾಗೋಷ್ಠಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತುಂಬಾ ಹೊಗಳಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ಪ್ರಸಿದ್ಧ್ ಕೃಷ್ಣ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಹರ್ಷಿತ್ ರಾಣಾ, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.

Story first published: Thursday, November 21, 2024, 23:16 [IST]
Other articles published on Nov 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+