ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನು ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಬುಮ್ರಾ ಪಡೆ ಆಲೌಟ್ ಆಯಿತು. ಕಡಿಮೆ ಸ್ಕೋರ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್‌ಗಳು ಅಬ್ಬರಿಸಿದರು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಕಡಿಮೆ ಮೊತ್ತ ದಾಖಲಿಸಿದೆ.
ಟೀಮ್ ಇಂಡಿಯಾದ ಮೊದಲಾದಟದ ಎರಡೂ ಅವಧಿಯಲ್ಲಿ ಹಿನ್ನಡೆ ಅನುಭವಿಸಿತು. ಆದರೆ ಮೂರನೇ ಅವಧಿಯಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಮೊನಚಾದ ದಾಳಿ ಸಂಘಟಿಸಿ ಅಬ್ಬರಿಸಿದರು. ಈ ಅವಧಿಯಲ್ಲಿ ಪಫೆಕ್ಟ್ ಲೈನ್ ಹಾಗೂ ಲೆಂಥ್‌ನಲ್ಲಿ ದಾಳಿ ಸಂಘಟಿಸಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು. ಪರ್ತ್‌ನ ಡ್ರಾಪ್ ಇನ್ ಪಿಚ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ಗಳು ಸಹ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳು ನೆಲಕಚ್ಚಿನಿಂತು ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 1981, ಫೆಬ್ರವರಿ 7ರಂದು ಮೆಲ್ಬೋರ್ನ್‌ನಲ್ಲಿ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿತ್ತು. ಆಗ ಆಸ್ಟ್ರೇಲಿಯಾದ ಮೊತ್ತ 83 ರನ್‌ಗಳಾಗಿತ್ತು. ಆಸ್ಟ್ರೇಲಿಯಾ 104 ರನ್‌ಗಳಿಗೆ ಪ್ರಸಕ್ತ ಸಾಲಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಇನಿಂಗ್ಸ್‌ನಲ್ಲಿ ಆಲೌಟ್ ಆಯಿತು. ಈ ಮೂಲಕ ಒಟ್ಟಾರೆ ಭಾರತದ ವಿರುದ್ಧ ನಾಲ್ಕನೇ ಕನಿಷ್ಠ ಮೊತ್ತ ಹಾಗೂ ಆಸ್ಟ್ರೇಲಿಯಾದಲ್ಲಿ ಎರಡನೇ ಕನಿಷ್ಠ ಮೊತ್ತ ದಾಖಲಿಸಿದ ಕಳಪೆ ದಾಖಲೆ ಬರೆಯಿತು.
ಪರ್ತ್ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾ 1947ರ ಡಿಸೆಂಬರ್ 12 ರಂದು ಭಾರತದ ವಿರುದ್ಧ 107 ರನ್‌ಗಳಿಗೆ ಆಲೌಟ್ ಆಗಿದ್ದೇ ಎರಡನೇ ಕನಿಷ್ಠ ಮೊತ್ತವಾಗಿತ್ತು. ಆದರೆ ಆ ದಾಖಲೆ ಈಗ ಕೆಳಗೆ ಸರಿಯಿತು. ಭಾರತ ತಂಡದ ಪ್ರದರ್ಶನ ನೀಜಕ್ಕೂ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದೆ.
ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಬೌಲರ್‌ಗಳು ಅದ್ಭುತ ಫಾರ್ಮ್ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಐದು ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದರು. ಬುಮ್ರಾ ಹೊರತುಪಡಿಸಿ, ಹರ್ಷಿತ್ ರಾಣಾ ಮೂರು ಮತ್ತು ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದರು. ಇದು ಹರ್ಷಿತ್ ರಾಣಾ ಅವರ ಚೊಚ್ಚಲ ಪಂದ್ಯ. ಪದಾರ್ಪಣೆ ಪಂದ್ಯವನ್ನು ಆಡಿದ ಟ್ರಾವಿಸ್ ಹೆಡ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಈ ಮೂವರು ಬೌಲರ್‌ಗಳ ನೆರವಿನಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಕಡಿಮೆ ಸ್ಕೋರ್‌ಗೆ ಕಟ್ಟಿಹಾಕಲು ಸಾಧ್ಯವಾಯಿತು.
| ಕ್ರಮ ಸಂಖ್ಯೆ | ರನ್ | ಸ್ಥಳ | ದಿನ |
| 1 | 83 | ಮೆಲ್ಬೋರ್ನ್ | ಫೆ.7, 1981 |
| 2 | 91 | ನಾಗ್ಪುರ್ | ಫೆ.9, 2023 |
| 3 | 93 | ವಾಂಖೇಡೆ | ನ.3, 2004 |
| 4 | 105 | ಕಾನ್ಪುರ್ | ಡಿ.19, 1959, |
| 5 | 107 | ಸಿಡ್ನಿ | ಡಿ.12, 1947 |