Ind vs Aus Test: ಪಿಚ್‌ಗೆ ನೀರು ಸುರಿದ ಕ್ಯುರೇಟರ್: ಕಾಫಿ ಕುಡಿದು ದೆಹಲಿ ಹಾದಿ ಹಿಡಿದ ಆಸ್ಟ್ರೇಲಿಯಾ!

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 132 ರನ್‌ಗಳ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ನಿರಾಸೆಯಾಗಿದೆ. ಸೋತ ಪಿಚ್‌ನಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಬಯಸಿದ್ದ ಆಸ್ಟ್ರೇಲಿಯಾ ತಂಡದ ಆಸೆಗೆ ಪಿಚ್ ಕ್ಯುರೇಟರ್ ತಣ್ಣಿರು ಸುರಿದಿದ್ದಾರೆ.
ಎರಡನೇ ಪಂದ್ಯಕ್ಕೆ ದೆಹಲಿಗೆ ತೆರಳುವ ಮುನ್ನ ಆಸ್ಟ್ರೇಲಿಯಾ ಆಟಗಾರರು ನಾಗ್ಪುರ ಪಿಚ್‌ನಲ್ಲಿ ಅಭ್ಯಾಸ ಮಾಡುವ ಯೋಜನೆಯಲ್ಲಿದ್ದರು. 2ನೇ ಇನ್ನಿಂಗ್ಸ್‌ನಲ್ಲಿ 91 ರನ್‌ಗಳಿಗೆ ಆಲೌಟ್ ಆದ ನಂತರ ಆಸ್ಟ್ರೇಲಿಯಾ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಪಿಚ್ ಕ್ಯುರೇಟರ್‌ಗೆ ಪಿಚ್ ಅನ್ನು ಹಾಗೆಯೇ ಇರಿಸುವಂತೆ ಮನವಿ ಮಾಡಿದ್ದರು.
ಆದರೆ, ಪಿಚ್ ಕ್ಯುರೇಟರ್ ನಾಗ್ಪುರ ಪಿಚ್ ಮೇಲೆ ನೀರು ಹಾಕುವ ಮೂಲಕ ಆಸ್ಟ್ರೇಲಿಯಾ ತಂಡದ ಮನವಿಯನ್ನು ತಿರಸ್ಕರಿಸಿದ್ದಾರೆ. ಇನ್ನು ನಿಯಮಗಳ ಪ್ರಕಾರವೇ ಕ್ಯುರೇಟರ್ ಪಿಚ್‌ಗೆ ನೀರು ಹಾಕಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಪಿಚ್‌ಗೆ ನೀರು ಹಾಕುವುದು ನಿಯಮವಾಗಿದೆ.
ಮೂರು ದಿನಗಳಲ್ಲಿ ಪಂದ್ಯ ಮುಗಿದ ಬಳಿಕ ಮುಂದಿನ ಪಂದ್ಯಕ್ಕೆ ಸಿದ್ಧವಾಗಲು ಸ್ಪಿನ್‌ಗೆ ನೆರವಾಗಿದ್ದ ಪಿಚ್‌ನಲ್ಲಿ ಅಭ್ಯಾಸ ಮಾಡಲು ಕೋಚ್ ಮೆಕ್‌ಡೊನಾಲ್ಡ್ ತಂತ್ರ ರೂಪಿಸಿದ್ದರು. ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯಲಿದ್ದು ಅದು ಕೂಡ ಸ್ಪಿನ್‌ಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ.

ಕಾಫಿಗೆ ಕರೆದ ಲ್ಯಾಬುಸ್ಚಾಗ್ನೆ
ಇನ್ನು ಕ್ಯುರೇಟರ್ ಪಿಚ್‌ಗೆ ನೀರು ಹಾಕಿದ ಬಳಿಕ ನಿರಾಸೆ ಅನುಭವಿಸಿದ ಆಸ್ಟ್ರೇಲಿಯಾ ತಂಡವನ್ನು ಮಾರ್ನಸ್ ಲ್ಯಾಬುಸ್ಚಾಗ್ನೆ ಕಾಫಿ ಡೇಟ್‌ಗೆ ಕರೆದರು. ಲ್ಯಾಬುಸ್ಚಾಗ್ನೆ ಕಾಫಿಪ್ರಿಯ ಆಸ್ಟ್ರೇಲಿಯಾದಿಂದಲೇ ಅವರು ಕಾಫಿ ಕೆಜಿಗಟ್ಟಲೆ ಬೀಜಗಳನ್ನು ತಂದಿದ್ದಾರೆ. ಬೇಸರ ಕಡಿಮೆ ಮಾಡಲು ತಂಡದ ಆಟಗಾರರನ್ನು ಕಾಫಿಗೆ ಕರೆದರು.
ಟೀಮ್ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರಿಗೆ ಕಾಫಿ ಮಾಡಿಕೊಟ್ಟರು. ಅದರಲ್ಲೂ ಕಳಪೆ ಫಾರ್ಮ್‌ನಲ್ಲಿರುವ ಡೇವಿಡ್ ವಾರ್ನರ್ ಗೆ ತಾಜಾ ಕಾಫಿ ನೀಡುವ ಮೂಲಕ ಅವರಲ್ಲಿ ವಿಶ್ವಾಸವನ್ನು ತುಂಬಲು ಯತ್ನಿಸಿದರು.

ಎರಡನೇ ಟೆಸ್ಟ್‌ಗೆ ವಾರ್ನರ್ ಕೈಬಿಡಲು ನಿರ್ಧಾರ?
ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ದೆಹಲಿ ಪಿಚ್‌ಗೆ ಸ್ಪಿನ್‌ಗೆ ನೆರವು ನೀಡುವುದರಿಂದ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಲು ಆಸ್ಟ್ರೇಲಿಯಾ ಚಿಂತನೆ ನಡೆಸಿದೆ. ಎಡಗೈ ಸ್ಪಿನ್ನರ್ ಮ್ಯಾಟ್ ಕುಹ್ನೆಮನ್‌ರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿದ್ದು, ದೆಹಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಡೇವಿಡ್ ವಾರ್ನರ್ ರನ್ನು ಕೈಬಿಡಬೇಕು ಮ್ಯಾಥ್ಯೂ ರೆನ್‌ಶಾ ಆರಂಭಿಕರಾಗಿ ಆಡಲಿ, ಟ್ರಾವಿಸ್ ಹೆಡ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎಂದು ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಅಭಿಪ್ರಾಯಪಟ್ಟಿದ್ದಾರ.
ಟ್ರಾವಿಸ್ ಹೆಡ್ ಫಿಟ್ ಆಗಿದ್ದು ಎರಡನೇ ಪಂದ್ಯದಲ್ಲಿ ವಾರ್ನರ್ ಬದಲಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಫಿಟ್ ಆಗಿದ್ದಾರೆ. ಆಲ್‌ರೌಂಡರ್ ಕ್ಯಾಮೆರೂನ್ ಗ್ರೀನ್ ಕೂಡ ಫಿಟ್ ಆಗಿದ್ದು ಎರಡನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಗೆಲ್ಲುವ ವಿಶ್ವಾಸದಲ್ಲಿ ಕಾಂಗರೂ ಪಡೆ
ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಎರಡನೇ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ಶತಪ್ರಯತ್ನ ಮಾಡಲಿದೆ. ಮಿಚೆಲ್ ಸ್ಟಾರ್ಕ್, ಗ್ರೀನ್ ಫಿಟ್ ಆಗಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಕ್ಯಾಮೆರೂನ್ ಗ್ರೀನ್ ಬೌಲಿಂಗ್ ಮಾಡಲು ಫಿಟ್ ಆದರೆ ಆಸ್ಟ್ರೇಲಿಯಾಗೆ ಹೆಚ್ಚಿನ ಲಾಭವಾಗಲಿದೆ.
ಮ್ಯಾಟ್ ಕುಹ್ನೆಮನ್ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಆಡಲು ಸಿದ್ಧವಾಗಿದ್ದಾರೆ. ಟಾಡ್ ಮುರ್ಫಿ, ನಾಥನ್ ಲಿಯಾನ್ ಜೊತೆ ಕುಹ್ನೆಮನ್ ತಂಡದಲ್ಲಿ ಅವಕಾಶ ಪಡೆದರೆ ಆಸ್ಟ್ರೇಲಿಯಾ ಸ್ಪಿನ್ ದಾಳಿ ಕೂಡ ಮಾರಕವಾಗಲಿದೆ.
ಮೊದಲನೇ ಟೆಸ್ಟ್ ಗೆದ್ದ ಖುಷಿಯಲ್ಲಿರುವ ಭಾರತ ಸ್ವಲ್ಪ ಯಾಮಾರಿದರೂ ದೆಹಲಿ ಟೆಸ್ಟ್‌ನಲ್ಲಿ ಅಪಾಯ ಎದುರಾಗುವುದು ನಿಶ್ಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications