Ind vs Aus Test: "ಹೇಗೆ ಮುಗುಸ್ತೀವಿ ಅನ್ನೋದೆ ಮುಖ್ಯ": ಕೆಣಕಿದ ಕ್ರಿಕೆಟ್ ಆಸ್ಟ್ರೇಲಿಯಾಗೆ ಅಭಿಮಾನಿಗಳ ತರಾಟೆ

ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿ ದಿನೇ ದಿನೇ ಹೆಚ್ಚಿನ ಕಾವು ಪಡೆದುಕೊಳ್ಳುತ್ತಿದೆ. ಪಂದ್ಯದ ಆರಂಭಕ್ಕೂ ಮೊದಲನೇ ಆಸ್ಟ್ರೇಲಿಯಾ ಆಟಗಾರರು ಮೈಂಡ್‌ಗೇಮ್ ಶುರು ಮಾಡಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಭಾರತ ತಂಡವನ್ನು ಕೆಣಕಲು ಬಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಅಭಿಮಾನಿಗಳು ಹಿಗ್ಗಾ-ಮಗ್ಗಾ ಜಾಡಿಸಿದ್ದಾರೆ. ಕಳೆದ ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡ 36 ರನ್‌ಗಳಿಗೆ ಆಲೌಟ್ ವಿಡಿಯೋವನ್ನು ಹಂಚಿಕೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾಗೆ ಚಳಿ ಬಿಡಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಫೆಬ್ರವರಿ 6ರಂದು ಸೋಮವಾರ, ಟೀಂ ಇಂಡಿಯಾ 36 ರನ್‌ಗಳಿಗೆ ಆಲೌಟ್ ಆದ ವಿಡಿಯೋವನ್ನು ಹಂಚಿಕೊಂಡಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ಕ್ರಿಕೆಟ್ ಆಸ್ಟ್ರೇಲಿಯಾ, "36ಕ್ಕೆ ಆಲೌಟ್. ಬಾರ್ಡರ್-ಗವಾಸ್ಕರ್ ಟ್ರೋಫಿ ಗುರುವಾರ ಆರಂಭ" ಎಂದು ಬರೆದುಕೊಂಡಿದೆ.
2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸರಣಿಯ ಮೊದಲನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಎಲ್ಲಾ ಬ್ಯಾಟರ್‌ಗಳು ರನ್ ಗಳಿಸಲು ವಿಫಲವಾದ ಕಾರಣ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು.

ಇತಿಹಾಸ ಸೃಷ್ಟಿಸಿದ್ದ ಭಾರತ
ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಔಟಾಗುವ ಮೂಲಕ ಸೋಲನುಭವಿಸಿದ್ದ ಭಾರತ ತಂಡ ನಂತರ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಗಬ್ಬಾದಲ್ಲಿ 32 ವರ್ಷಗಳಿಂದ ಸೋಲನ್ನೇ ಕಾಣದ ಕಾಂಗರೂ ಪಡೆಗೆ ಮಣ್ಣು ಮುಕ್ಕಿಸಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಗಬ್ಬಾದಲ್ಲಿನ ಸೋಲು ಆಸ್ಟ್ರೇಲಿಯಾ ತಂಡವನ್ನು ಇಂದಿಗೂ ಕಾಡುತ್ತಿರುವಂತಿದೆ.
ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯಗಳೆಂದರೆ ಅಲ್ಲಿ ಸ್ಲೆಡ್ಜಿಂಗ್, ಮೈಂಡ್‌ಗೇಮ್, ವಾಗ್ವಾದ ಸಾಮನ್ಯ. ಉಳಿದ ಆಟಗಾರರು ಸುಮ್ಮನಿದ್ದರೂ ವಿರಾಟ್ ಕೊಹ್ಲಿ ಮಾತ್ರ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ತಿರುಗೇಟು ನೀಡುತ್ತಾರೆ.
ತಿರುಗಿಬಿದ್ದ ಅಭಿಮಾನಿಗಳು
ಟೀಂ ಇಂಡಿಯಾ 36 ರನ್‌ಗಳಿಗೆ ಆಲೌಟ್ ಆದ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಯಾ (ಸಿಎ) ಹಂಚಿಕೊಂಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾಗೆ ಸರಿಯಾಗಿಯೇ ಉತ್ತರ ನೀಡಿದ್ದಾರೆ.
ಸಿಎ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಅಭಿಮಾನಿಯೊಬ್ಬರು. "ಹೆಂಗೆ ಆರಂಭಿಸಿದ್ವಿ ಅನ್ನೋದು ಮುಖ್ಯ ಅಲ್ಲ ಹೆಂಗೆ ಮುಗಿಸ್ತಿವಿ ಅನ್ನೋದು ಮುಖ್ಯ" ಎನ್ನುವ ಮೂಲಕ ಆಸ್ಟ್ರೇಲಿಯಾ ಸರಣಿಯನ್ನು ಸೋತಿದೆ ಎನ್ನುವುದನ್ನು ನೆನಪಿಸಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ ಈಗಷ್ಟೆ ಪರಿಶೀಲನೆ ಮಾಡಿದೆ, ಆಸ್ಟ್ರೇಲಿಯಾ ಕೂಡ 36, 42, 44, 47 ರನ್‌ಗಳಿಗೆ ಆಲೌಟ್ ಆಗಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, ಆದರೂ ನೀವು ತವರಿನಲ್ಲಿ ಸರಣಿಯನ್ನು ಸೋತಿರಿ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾಲೆಳೆದಿದ್ದಾರೆ.
ಮತ್ತೊಬ್ಬರು ಖಾರವಾಗಿ ಪ್ರತಿಕ್ರಿಯೆ ನೀಡಿ, "ಲೂಸರ್ಸ್, ಆಮೇಲೆ ಏನಾಯ್ತು ಎನ್ನುವುದು ನೆನಪಿಲ್ಲವಾ, ಗಬ್ಬಾದ ಸೋಲನ್ನು ಆಗಲೆ ಮರೆತ್ರಾ" ಎಂದು ಕೇಳಿದ್ದಾರೆ. "ಇನ್ನೂ ಸರಣಿಯಲ್ಲಿ ಮೊದಲನೇ ಪಂದ್ಯ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯಾ ಭಯಗೊಂಡಿದೆ, ಅದಕ್ಕಾಗಿಯೇ ಈ ರೀತಿ ಮೈಂಡ್‌ಗೇಮ್‌ಗೆ ಮುಂದಾಗಿದೆ" ಎಂದು ಹೇಳಿದ್ದಾರೆ.

ಇನ್ನೂ ಮೂರು ದಿನಗಳಷ್ಟೇ ಬಾಕಿ
ಬಾರ್ಡರ್ ಗವಾಸ್ಕರ್ ಸರಣಿಗಾಗಿ ಉಭಯ ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿವೆ. ಆಸ್ಟ್ರೇಲಿಯಾ ತಂಡ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದರೆ, ರೋಹಿತ್ ಶರ್ಮಾ ಪಡೆ ನಾಗ್ಪುರದಲ್ಲಿ ತಯಾರಿ ನಡೆಸುತ್ತಿದೆ. ಫೆಬ್ರವರಿ 9ರಂದು ನಾಗ್ಪುರದಲ್ಲಿ ಸರಣಿಯ ಮೊದಲನೇ ಪಂದ್ಯ ಆರಂಭವಾಗಲಿದೆ.
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ (ಉಪನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಜೋಶ್ ಹ್ಯಾಜಲ್‌ವುಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications