IND vs AUS Test: ಮೊದಲ ಇನಿಂಗ್ಸ್‌ನಲ್ಲಿ ಆಸೀಸ್ ಬ್ಯಾಟರ್‌ಗಳನ್ನು ಕಾಡಿದ ಭಾರತದ ವೇಗಿಗಳು: 27 ಓವರ್‌ಗಳಲ್ಲಿ 7 ವಿಕೆಟ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದ ಎರಡು ಸೆಷನ್ ಆಸ್ಟ್ರೇಲಿಯಾ ತನ್ನ ಹೆಸರಿಗೆ ಮಾಡಿಕೊಂಡಿತು. ಆದರೆ ಭಾರತ, ಮೂರನೇ ಅವಧಿಯಲ್ಲಿ ಮನಮೋಹಕ ಬೌಲಿಂಗ್ ನಡೆಸಿ, ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದರು. ಟೀಮ್ ಇಂಡಿಯಾ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಕಟ್ಟಿ ಹಾಕಿದ ಆಸೀಸ್ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ದಿನದಾಟದ ಕೊನೆಯಲ್ಲಿ ಜಸ್ಪ್ರಿತ್ ಪಡೆ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸುವ ಹೊಸ್ತಿಲಲ್ಲಿ ನಿಂತಿದೆ.
ಶುಕ್ರವಾರದಿಂದ ಆರಂಭವಾದ ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಿ, ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ಆರಂಭಿಸಿದ್ದು, ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 67 ರನ್ ಕಲೆ ಹಾಕಿದ್ದು, ಇನ್ನು 83 ರನ್‌ಗಳ ಹಿನ್ನಡೆ ಅನುಭವಿಸುತ್ತಿದೆ. ಎರಡನೇ ದಿನಕ್ಕೆ ಅಲೆಕ್ಸ್ ಕ್ಯಾರಿ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕಳಪೆ ಬ್ಯಾಟಿಂಗ್
ಮೊದಲ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಯಾವೊಬ್ಬ ಬ್ಯಾಟರ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿಲಿಲ್ಲ. ಭರವಸೆಯ ಟಾಪ್ ಆರ್ಡರ್ ಬ್ಯಾಟರ್‌ಗಳು ಜವಾಬ್ದಾರಿ ಮರೆತರು. ಕೆಎಲ್ ರಾಹುಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶವನ್ನು ಪಡೆದ ದೇವದತ್ ಪಡಿಕ್ಕಲ್ ಸೊನ್ನೆ ಸುತ್ತಿದರು. ವಿರಾಟ್ ಕೊಹ್ಲಿ 5 ರನ್‌ಗಳಿಗೆ ಆಟ ಮುಗಿಸಿದರು. ಟೀಮ್ ಇಂಡಿಯಾ ಪರ ರಿಷಭ್ ಪಂತ್ ಹಾಗೂ ಪದಾರ್ಪಣಾ ಪಂದ್ಯವನ್ನು ಆಡಿದಿ ನಿತೀಶ್ ಕುಮಾರ್ ರೆಡ್ಡಿ ಜೋಡಿ 7ನೇ ವಿಕೆಟ್‌ಗೆ 85 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಪಂತ್ 37 ರನ್‌ಗಳಿಗೆ ಆಟ ಮುಗಿಸಿದರೆ, ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ನಿತೀಶ್ ಕುಮಾರ್ 41 ರನ್ ಸಿಡಿಸಿದರು.
ಆಸ್ಟ್ರೇಲಿಯಾದ ಪರ ಜೋಶ್ ಹ್ಯಾಜಲ್‌ವುಡ್ 4, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ ಉರುಳಿಸಿದರು.
ಟೀಮ್ ಇಂಡಿಯಾ ಬೌಲರ್‌ಗಳ ಆರ್ಭಟ
ಟೀಮ್ ಇಂಡಿಯಾದ ಅನುಭವಿ ಬೌಲರ್‌ಗಳು ಮೊದಲ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು ತಮ್ಮ ಅನುಭವದ ಲಾಭ ಪಡೆದು ದಾಳಿ ನಡೆಸಿ ತಂಡಕ್ಕೆ ಆಧಾರವಾದರು. ಇವರ ಬಿಗುವಿನ ದಾಳಿಯ ಪರಿಣಾಮ ಆಸೀಸ್ ತಂಡದ ಯಾವೊಬ್ಬ ಬ್ಯಾಟರ್ 20 ರನ್‌ಗಳ ಗಡಿ ದಾಟಲಿಲ್ಲ. ಟಾಪ್ ಆರ್ಡರ್ ಆಟಗಾರರು, ಮಧ್ಯಮ ಕ್ರಮಾಂಕದ ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ರನ್ ಕಲೆ ಹಾಕುವಲ್ಲಿ ವಿಫಲರಾದರು.
ಮೂರನೇ ಅವಧಿಯ ಆಟದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಕೇವಲ 27 ಓವರ್ ಬೌಲಿಂಗ್ ದಾಳಿ ನಡೆಸಿ 7 ವಿಕೆಟ್ ಪಡೆದು, 67 ರನ್ ನೀಡಿದರು. ಈ ವೇಳೆ ಟೀಮ್ ಇಂಡಿಯಾದ ಪರ ನಾಯಕ ಜಸ್ಪ್ರಿತ್ ಬುಮ್ರಾ 17 ರನ್ ನೀಡಿ 4, ಮೊಹಮ್ಮದ್ ಸಿರಾಜ್ 2, ಹರ್ಷಿತ್ ರಾಣಾ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications