Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Aus: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್‌ ಧರ್ಮಶಾಲಾದಿಂದ ಇಂದೋರ್​​ಗೆ ಸ್ಥಳಾಂತರ

Ind vs Aus Test: The BCCI has shifted the India vs Australia 3rd Test from Dharamshala to Indore

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಧರ್ಮಶಾಲಾದಿಂದ ಇಂದೋರ್​​ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಕ್ರೀಡಾಂಗಣಕ್ಕೆ ಹಾನಿಯಾಗಿದ್ದರಿಂದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಪಿಚ್‌ ಮತ್ತು ಔಟ್‌ಫೀಲ್ಡ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಔಟ್‌ಫೀಲ್ಡ್ ಸಿದ್ಧವಾಗಲು ಕನಿಷ್ಠ ಒಂದು ತಿಂಗಳು ಬೇಕು ಎನ್ನಲಾಗಿದೆ. ಮಾರ್ಚ್‌ 1ಕ್ಕೆ ಮುನ್ನ ಔಟ್‌ಫೀಲ್ಡ್ ಅಂತರಾಷ್ಟ್ರೀಯ ಪಂದ್ಯದ ಮಾನದಂಡಕ್ಕೆ ತಕ್ಕಂತೆ ಸಿದ್ಧವಾಗದ ಕಾರಣ ಅನಿವಾರ್ಯವಾಗಿ ಪಂದ್ಯವನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಮೊಹಾಲಿ, ವಿಶಾಖಪಟ್ಟಣ, ಇಂದೋರ್ ಕ್ರೀಡಾಂಗಣಗಳು ಬಿಸಿಸಿಐ ಆಯ್ಕೆಯ ಪಟ್ಟಿಯಲ್ಲಿದ್ದವು ಆದರೆ ಅಂತಿಮವಾಗಿ 3ನೇ ಟೆಸ್ಟ್ ಆತಿಥ್ಯ ವಹಿಸುವ ಅವಕಾಶ ಇಂದೋರ್​​ನ ಹೋಲ್ಕರ್ ಸ್ಟೇಡಿಯಂ ಪಾಲಾಗಿದೆ.

"ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ-ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಮಾರ್ಚ್ 1ರಿಂದ 5ರವರೆಗೆ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಬೇಕಾಗಿತ್ತು. ಧರ್ಮಶಾಲಾದಲ್ಲಿ ಹೆಚ್ಚಿನ ಚಳಿ ಇರುವ ಕಾರಣ ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಾನದಂಡಕ್ಕೆ ತಕ್ಕಂತಿಲ್ಲ, ಹುಲ್ಲಿನ ಸಾಂದ್ರತೆ ಕಡಿಮೆ ಇದೆ. ಸಂಪೂರ್ಣವಾಗಿ ಸಿದ್ಧವಾಗಲು ಇನ್ನು ಸಮಯ ಬೇಕಾಗಿರುವುದರಿಂದ ಅನಿವಾರ್ಯವಾಗಿ ಮೂರನೇ ಟೆಸ್ಟ್ ಪಂದ್ಯವನ್ನು ಇಂದೋರ್‌ನ ಹೋಲ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ" ಎಂದು ಬಿಸಿಸಿಐ ಸೋಮವಾರ ಅಧಿಕೃತವಾಗಿ ಹೇಳಿಕೆ ನೀಡಿದೆ.

ಹೋಳ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ

ಹೋಳ್ಕರ್ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ

ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇದುವರೆಗೂ ಕೇವಲ ಎರಡು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಷ್ಟೇ ನಡೆದಿರುವುದು. 2016 ಅಕ್ಟೋಬರ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿತ್ತು, ಈ ಪಂದ್ಯದಲ್ಲಿ ಭಾರತ 321 ರನ್‌ಗಳಿಂದ ಗೆಲುವು ಸಾಧಿಸಿತ್ತು.

ಭಾರತ ಇಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ನವೆಂಬರ್ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಿತ್ತು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 130 ರನ್‌ಗಳಿಂದ ಗೆದ್ದುಕೊಂಡಿತ್ತು. ಭಾರತ ತಂಡ ಇಲ್ಲಿ ಆರು ಏಕದಿನ ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳನ್ನು ಗೆದ್ದಕೊಂಡಿದೆ. ಮೂರು ಟಿ20 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಒಂದು ಪಂದ್ಯದಲ್ಲಿ ಮಾತ್ರ ಸೋಲು ಕಂಡಿದೆ.

ಎರಡೇ ಪಂದ್ಯದಲ್ಲಿ 18 ವಿಕೆಟ್ ಕಿತ್ತಿರುವ ಅಶ್ವಿನ್

ಎರಡೇ ಪಂದ್ಯದಲ್ಲಿ 18 ವಿಕೆಟ್ ಕಿತ್ತಿರುವ ಅಶ್ವಿನ್

ರವಿಚಂದ್ರನ್ ಅಶ್ವಿನ್ ಈ ಸ್ಟೇಡಿಯಂನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ ಎರಡೇ ಪಂದ್ಯಗಳಲ್ಲಿ 18 ವಿಕೆಟ್ ಪಡೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮೊದನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 6 ವಿಕೆಟ್ ಪಡೆದುಕೊಂಡಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಸೋಲಿಗೆ ಕಾರಣವಾಗಿದ್ದರು.

ಜಡೇಜಾ ಕೂಡ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು. ಎರಡನೇ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ ಪಡೆದುಕೊಂಡಿದ್ದರು. ಮೊಹಮ್ಮದ್ ಶಮಿ ಕೂಡ ಈ ಕ್ರೀಡಾಂಗಣದಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.

ಬ್ಯಾಟಿಂಗ್‌ಗೆ ಸಹಕಾರಿಯಾದ ಪಿಚ್

ಬ್ಯಾಟಿಂಗ್‌ಗೆ ಸಹಕಾರಿಯಾದ ಪಿಚ್

ಹೋಳ್ಕರ್ ಸ್ಟೇಡಿಯಂನ ಪಿಚ್‌ ಬ್ಯಾಟರ್ ಗಳಿಗೆ ಹೆಚ್ಚಿನ ಸಹಕಾರಿಯಾಗಿದೆ. ಬೌಂಡರಿ ಕೂಡ ಚಿಕ್ಕದಾಗಿರುವುದರಿಂದ ಬ್ಯಾಟರ್ ಗಳು ಸುಲಭವಾಗಿ ಬೌಂಡರಿಗಳನ್ನು ಹೊಡೆಯಬಹುದಾಗಿದೆ. ಇಲ್ಲಿ ನಡೆದಿರುವ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 557 ರನ್ ಕಲೆಹಾಕಿತ್ತು. ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರೆ, ಅಜಿಂಕ್ಯ ರಹಾನೆ 188 ರನ್ ಗಳಿಸಿದ್ದರು.

Story first published: Monday, February 13, 2023, 12:19 [IST]
Other articles published on Feb 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+