Ind vs Aus Test: ಪಠಾಣ್ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ: ಜೊತೆಯಾಗಿ ಹೆಜ್ಜೆ ಹಾಕಿದ ಜಡೇಜಾ

ಮೈದಾನದಲ್ಲಿದ್ದರೂ ಹೊರಗಡೆ ಇದ್ದರೂ ಏನೂ ಮಾಡಿದರೂ ಸದಾ ಸುದ್ದಿಯಲ್ಲಿರೋದೆ ವಿರಾಟ್ ಕೊಹ್ಲಿ ವಿಶೇಷತೆ. ಮೈದಾನದಲ್ಲಿ ಕೊಹ್ಲಿಯನ್ನು ಕೆಣಕಿ ಉಳಿದವರಿಲ್ಲ ಎನ್ನುವ ಮಾತಿದೆ. ತಂಡದ ಆಟಗಾರರನ್ನು ಹುರಿದುಂಬಿಸುವುದರಲ್ಲಿ, ಕೆಣಕಿದ ಎದುರಾಳಿಗಳಿಗೆ ತಿರುಗೇಟು ನೀಡುವುದರಲ್ಲಿ ಕೊಹ್ಲಿಗೆ ಕೊಹ್ಲಿಯೇ ಸಾಟಿ.
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರ ನಡುವೆ ಹೆಚ್ಚಿನ ವಾಕ್ಸಮರ ಕಾಣಲಿಲ್ಲ. ಆದರೆ ಟೀಂ ಇಂಡಿಯಾ ಆಟಗಾರರು ಮಾತ್ರ ಜಾಲಿ ಮೂಡ್‌ನಲ್ಲಿದ್ದರು. ಯಾವುದೇ ಒತ್ತಡ ಇಲ್ಲದೆ ಆಡಿದ ಭಾರತ ತಂಡ ಮೂರನೇ ದಿನದಲ್ಲೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.
ಪಂದ್ಯದ ವೇಳೆ ವಿರಾಟ್ ಕೊಹ್ಲಿ ಸಖತ್ ಜಾಲಿ ಮೂಡ್‌ನಲ್ಲಿದ್ದರು, ವಿಶ್ರಾಂತಿ ಸಮಯದಲ್ಲಿ ಕೊಹ್ಲಿ ಬಾಲಿವುಡ್‌ನ ಜನಪ್ರಿಯ ಚಿತ್ರ ಶಾರೂಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ 'ಜೂಮ್ ಜೋ ಪಠಾಣ್' ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
ವಿರಾಟ್ ಕೊಹ್ಲಿಗೆ ಜೊತೆಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಹೆಜ್ಜೆ ಹಾಕಿ ಖುಷಿಪಟ್ಟರು. ಕೊಹ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ತಂಡಕ್ಕೆ ಉತ್ಸಾಹ ತುಂಬಿದ ಕೊಹ್ಲಿ
ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ 233 ರನ್‌ಗಳ ಮುನ್ನಡೆಯೊಂದಿಗೆ 400 ರನ್‌ಗಳಿಗೆ ಆಲೌಟ್ ಆಯಿತು. ಈ ಸಂದರ್ಭದಲ್ಲಿ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲು ತಂಡದ ಆಟಗಾರರು ಮೈದಾನಕ್ಕೆ ತೆರಳಲು ಸಿದ್ಧವಾಗಿದ್ದರು. ಎಲ್ಲರೂ ನಾಯಕ ರೋಹಿತ್ ಶರ್ಮಾ ಆಗಮನಕ್ಕಾಗಿ ಕಾಯುವಾಗ ಕೊಹ್ಲಿ ತಂಡದ ಆಟಗಾರರ ಜೊತೆ ಮಾತನಾಡುತ್ತಿದ್ದರು, ನಂತರ ಹೆಜ್ಜೆ ಹಾಕಿ ಸಂಭ್ರಮಿಸಿದರು. ಆಲ್‌ರೌಂಡರ್ ರವೀಂದ್ರ ಜಡೇಜಾ ಉತ್ಸಾಹಗೊಂಡು ತಾವು ಎರಡು ಹೆಜ್ಜೆ ಹಾಕಿ ಖುಷಿಪಟ್ಟರು.

ವಿವಾದ ಸೃಷ್ಟಿಸಿದ್ದ ಚಿತ್ರ
ಹಲವು ಕಾರಣಗಳಿಂದಾಗಿ ಪಠಾಣ್ ಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಬೇಷರಮ್ ಸಾಂಗ್ ಸೃಷ್ಟಿಸಿದ್ದ ವಿವಾದ ಚಿತ್ರದ ಬಿಡುಗಡೆ ನಂತರ ತಣ್ಣಗಾಯಿತು. ಪಠಾಣ್ ಚಿತ್ರ ಸಾಕಷ್ಟು ಜನಪ್ರಿಯ ಚಿತ್ರವಾಗಿದ್ದು, ಹಾಡುಗಳಿಗೆ ಅಭಿಮಾನಿಗಳು ಥಿಯೇಟರ್ ನಲ್ಲಿ ಕುಣಿದು ಕುಪ್ಪಳಿದ್ದರು.
ಇನ್‌ಸ್ಟಾಗ್ರಾಂನಲ್ಲಿ ಕೂಡ 'ಜೂಮ್ ಜೋ ಪಠಾನ್' ಹಾಡಿಗೆ ನೃತ್ಯ ಮಾಡಿ ರೀಲ್ಸ್ ಮಾಡುತ್ತಿದ್ದಾರೆ. ಕೊಹ್ಲಿ ಕೂಡ ಹಾಡನ್ನು ಮೆಚ್ಚಿಕೊಂಡಿದ್ದು, ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications