For Quick Alerts
ALLOW NOTIFICATIONS  
For Daily Alerts
 

IND vs AUS: ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾರ ಈ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 200 ರನ್ ಚೇಸ್‌ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಣಾಯಕ ಅರ್ಧಶತಕ ಬಾರಿಸುವ ಮೂಲಕ ವಿಶ್ವಕಪ್ ಪಂದ್ಯದಲ್ಲಿ ಮತ್ತೊಮ್ಮೆ ಭಾರತದ ಆಪತ್ಬಾಂಧವ ಎಂದು ಸಾಬೀತುಪಡಿಸಿದರು.

ಚೆಪಾಕ್‌ನಲ್ಲಿ ಬ್ಯಾಟರ್‌ಗಳಿಗೆ ಕಷ್ಟಕರವಾದ ಪಿಚ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಭಾರತದ ಆರಂಭಿಕ ಹಿನ್ನಡೆಯ ನಂತರ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅಮೂಲ್ಯ 166 ರನ್‌ಗಳ ಜೊತೆಯಾಟ ನಿರ್ಮಿಸುವ ಮೂಲಕ ಆಟವನ್ನು ಹಳಿಗೆ ತಂದರು.

ಭಾರತವು 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿದಾಗ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಮರಳಿ ಇನ್ನಿಂಗ್ಸ್ ಕಟ್ಟಿದರು ಮತ್ತು ಭಾರತವನ್ನು ಗೆಲುವಿನ ಗುರಿ ತಲುಪಲು ನೆರವಾದರು.

IND vs AUS: Virat Kohli Equals Rohit Sharmas World Cup Record

ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಮತ್ತು 4ನೇ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸೊನ್ನೆಗೆ ನಿರ್ಗಮಿಸಿದ ಕಾರಣ, ಭಾರತ ಎರಡು ರನ್‌ಗಳಿಗೆ ತನ್ನ ಅಗ್ರ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಅವರು 200 ರನ್‌ಗಳ ರಕ್ಷಣೆಯಲ್ಲಿ ಎಂಎ ಚಿದಂಬರಂ ಪ್ರೇಕ್ಷಕರನ್ನು ಸ್ತಬ್ಧಗೊಳಿಸಿದರು.

ವಿರಾಟ್ ಕೊಹ್ಲಿ 75 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು. ಈ ವೇಳೆ ಮಾಜಿ ನಾಯಕ ಭಾರತ ತಂಡವನ್ನು ತೊಂದರೆಯಿಂದ ಕಾಪಾಡಲು ಸಮಯ ತೆಗೆದುಕೊಂಡರು.

2019ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 66 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯದಲ್ಲಿ ಚೇಸಿಂಗ್‌ನಲ್ಲಿ ಅರ್ಧಶತಕ ಗಳಿಸಿದ್ದಾಗ ಎರಡನೇ ಬಾರಿಗೆ ಸೋತಿದ್ದರು.

IND vs AUS: Virat Kohli Equals Rohit Sharmas World Cup Record

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 9ನೇ ಅರ್ಧಶತಕ್ಕೂ ಅಧಿಕ ರನ್ ಗಳಿಸುವ ಮೂಲಕ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 21 ಫಿಫ್ಟಿ ಪ್ಲಸ್ ಸ್ಕೋರ್ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ವಿಶ್ವಕಪ್‌ಗಳಲ್ಲಿ ಭಾರತದ ಪರ ಹೆಚ್ಚು ಫಿಫ್ಟಿ-ಪ್ಲಸ್ ಸ್ಕೋರ್‌ಗಳು

ಸಚಿನ್ ತೆಂಡೂಲ್ಕರ್ - 45 ಪಂದ್ಯಗಳಲ್ಲಿ 21
ವಿರಾಟ್ ಕೊಹ್ಲಿ - 27 ಪಂದ್ಯಗಳಲ್ಲಿ 9
ರೋಹಿತ್ ಶರ್ಮಾ - 18 ಪಂದ್ಯಗಳಲ್ಲಿ 9
ಮೊಹಮ್ಮದ್ ಅಜರುದ್ದೀನ್ - 30 ಪಂದ್ಯಗಳಲ್ಲಿ 8
ರಾಹುಲ್ ದ್ರಾವಿಡ್ - 22 ಪಂದ್ಯಗಳಲ್ಲಿ 8

ವಿರಾಟ್ ಕೊಹ್ಲಿ ತಮ್ಮ ಎಲ್ಲಾ ಅನುಭವವನ್ನು ಬಳಸಿಕೊಂಡು ಆಸ್ಟ್ರೇಲಿಯಾ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಆಸ್ಟ್ರೇಲಿಯನ್ ಬೌಲರ್‌ಗಳ ಮೇಲೆ ಒತ್ತಡ ಹೇರಲು ಬಿಗ್ ಶಾಟ್‌ಗಳನ್ನು ಆಡುವ ಮೊದಲು ಮಾಜಿ ನಾಯಕ ನಿಧಾನಗತಿಯ ಆಟಕ್ಕೆ ಮೊರೆ ಹೋದರು.

ವಿರಾಟ್ ಕೊಹ್ಲಿ 12 ರನ್ ಗಳಿಸಿದ್ದಾಗ ಜೋಶ್ ಹೇಜಲ್‌ವುಡ್‌ ಬೌಲಿಂಗ್‌ನಲ್ಲಿ ಬೌನ್ಸರ್‌ಗೆ ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು ಮತ್ತು ಬಾಲ್ ಮೇಲಕ್ಕೆ ಚಿಮ್ಮಿತು. ಡೀಪ್‌ನಿಂದ ಸ್ಕ್ವೇರ್ ಲೆಗ್ ಸ್ಥಾನಕ್ಕೆ ಓಡಿ ಬಂದ ಮಿಚೆಲ್ ಮಾರ್ಷ್ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು.

15ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ವಿರುದ್ಧ ಸತತ 2 ಬೌಂಡರಿಗಳ ಮೂಲಕ ದಾಳಿ ಮಾಡಿದ ವಿರಾಟ್ ಕೊಹ್ಲಿ ಆ ಬಳಿಕ ಆಟಕ್ಕೆ ಹೊಂದಿಕೊಂಡರು.

ಲೆಗ್ ಸ್ಪಿನ್ನರ್ ಆಡಮ್ ಝಂಪಾ ದಾಳಿಗಿಳಿದಾಗ ವಿರಾಟ್ ಕೊಹ್ಲಿ ನಾನ್ ಸ್ಟ್ರೈಕರ್‌ನಲ್ಲಿರುವುದಕ್ಕೆ ಬಯಸಿದರು. ಕೆಎಲ್ ರಾಹುಲ್ ಅವರು ಝಂಪಾರ ಮೊದಲ ಓವರ್‌ನಲ್ಲಿ 3 ಬೌಂಡರಿಗಳನ್ನು ಬಾರಿಸಿ ಸ್ಪಿನ್ನರ್ ಮೇಲೆ ಒತ್ತಡವನ್ನು ಹೇರಿದರು.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಆಸ್ಟ್ರೇಲಿಯಾದ ಬೌಲಿಂಗ್ ಬೆದರಿಕೆಯನ್ನು ದೂರವಿರಿಸಲು ಮತ್ತು ಚೆಪಾಕ್‌ನಲ್ಲಿನ ಅಭಿಮಾನಿಗಳ ಮುಖದಲ್ಲಿ ನಗುವನ್ನು ತರಲು ತಮ್ಮ ಎಲ್ಲಾ ಅನುಭವವನ್ನು ಬಳಸಿದರು. ಇವರಿಬ್ಬರು 4ನೇ ವಿಕೆಟ್‌ಗೆ 166 ರನ್ ಗಳಿಸುವ ಮೂಲಕ ಚೇಸಿಂಗ್‌ನಲ್ಲಿ ಭಾರತಕ್ಕೆ ಯಶಸ್ಸು ತಂದರು.

ಶತಕದ ಸನಿಹದಲ್ಲಿದ್ದ ವಿರಾಟ್ ಕೊಹ್ಲಿ 116 ಎಸೆತಗಳಲ್ಲಿ 6 ಬೌಂಡರಿ ಸಮೇತ ಅಮೂಲ್ಯ 85 ರನ್ ಬಾರಿಸಿದರು. ಈ ವೇಳೆ ದೊಡ್ಡ ಶಾಟ್ ಬಾರಿಸಲು ಹೋಗಿ ಔಟಾಗಬೇಕಾಯಿತು.

ಮತ್ತೊಂದೆಡೆ, ಕೆಎಲ್ ರಾಹುಲ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಮೂಲಕ 97 ರನ್ ಬಾರಿಸಿದರು. ವಿರಾಟ್ ಕೊಹ್ಲಿ ಔಟಾದ ನಂತರ ಬಂದ ಹಾರ್ದಿಕ್ ಪಾಂಡ್ಯ 8 ಎಸೆತಗಳಲ್ಲಿ 1 ಸಿಕ್ಸರ್ ಸಮೇತ 11 ರನ್ ಗಳಿಸಿದರು. ಕೆಎಲ್ ರಾಹುಲ್ ಸಿಕ್ಸರ್ ಮೂಲಕ ತಂಡವನ್ನು ಗೆಲ್ಲಿಸಿದ್ದು ಸೊಗಸಾಗಿತ್ತು.

Story first published: Monday, October 9, 2023, 7:35 [IST]
Other articles published on Oct 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+