Virat Kohli: ಅಡಿಲೇಡ್‌ನಲ್ಲಿ ಲಾರಾ-ರಿಚರ್ಡ್ಸ್ ಹಿಂದಿಕ್ಕಲು ವಿರಾಟ್ ಕೊಹ್ಲಿ ಸಜ್ಜು!
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳು ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಉತ್ತಮ ಆರಂಭವನ್ನು ಪಡೆದಿದೆ. ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ 295 ರನ್‌ಗಳಿಂದ ಸೋಲಿಸಿದ್ದು, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯವಾಗಿದ್ದು, ಡಿಸೆಂಬರ್ 6 ರಿಂದ ಅಡಿಲೇಡ್ ಮೈದಾನದಲ್ಲಿ ನಡೆಯಲಿದೆ. ಈ ಮೈದಾನ ವಿರಾಟ್ ಕೊಹ್ಲಿ ಅವರ ನೆಚ್ಚಿನ ಮೈದಾನಗಳಲ್ಲಿ ಒಂದಾಗಿದೆ. ಈ ಮೈದಾನದಲ್ಲಿ ಅವರು ವಿಶೇಷ ದಾಖಲೆ ಬರೆಯುವ ಅವಕಾಶವನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ ಅಡಿಲೇಡ್ ಮೈದಾನದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡುವ ಮೂಲಕ ರನ್ ಹೊಳೆ ಹರಿಸಿದ್ದಾರೆ. ಇದೀಗ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದ್ದು, ವಿರಾಟ್ ಕೊಹ್ಲಿ ಅವರಿಂದ ಮತ್ತೊಂದು ಶತಕದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರಿಂದ ಬಿಗ್ ಇನ್ನಿಂಗ್ಸ್ ಬಂದರೆ ಬ್ರಿಯಾನ್ ಲಾರಾ ಮತ್ತು ವಿವ್ ರಿಚರ್ಡ್ ಸೇರಿದಂತೆ ಹಲವು ದಿಗ್ಗಜರ ದಾಖಲೆಯನ್ನು ಮುರಿಯಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ತಮ್ಮ ಲಯವನ್ನು ಕಂಡುಕೊಂಡಿರುವ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಪರ್ತ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ 30ನೇ ಶತಕವನ್ನು ಪೂರೈಸಿದ್ದಾರೆ. ಪರ್ತ್‌ನಲ್ಲಿ ಗಳಿಸಿದ ಅವರ ಅಜೇಯ ಶತಕವು ಆಸ್ಟ್ರೇಲಿಯಾಕ್ಕೆ ನಡುಕ ಹುಟ್ಟಿಸಿದೆ. ಅಲ್ಲದೆ, ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಬೃಹತ್ ದಾಖಲೆಯನ್ನೂ ಮುರಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಗರಿಷ್ಠ 7 ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದುವರೆಗೆ ಸಚಿನ್ ತೆಂಡೂಲ್ಕರ್ 6 ಶತಕ ಮಾತ್ರ ಗಳಿಸಿದ್ದಾರೆ.
ದಿಗ್ಗಜರ ದಾಖಲೆ ಮೇಲೆ ಚಿತ್ತ
ಪರ್ತ್ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದಂತೆ ವಿರಾಟ್ ಕೊಹ್ಲಿ ಅವರು ಅಡಿಲೇಡ್‌ನಲ್ಲಿ ತಮ್ಮ ಫಾರ್ಮ್ ಮುಂದುವರೆಸಿದರೆ, ವಿವ್ ರಿಚರ್ಡ್ಸ್, ಬ್ರಿಯಾನ್ ಲಾರಾ ಅವರಂತಹ ದಿಗ್ಗಜರನ್ನು ಹಿಂದಿಕ್ಕಿಲಿದ್ದಾರೆ. ಅಡಿಲೇಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸುವ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಮಾಡಿಕೊಳ್ಳುವ ಸನಿಹದಲ್ಲಿದ್ದಾರೆ. ಇದುವರೆಗೆ ರಿಚರ್ಡ್ಸ್ 552 ರನ್ ಕಲೆ ಹಾಕಿದ್ದರೆ, ಲಾರಾ 610 ರನ್ ಗಳಿಸಿದ್ದಾರೆ. ಈ ಇಬ್ಬರನ್ನು ಹಿಂದಿಕ್ಕಲು ವಿರಾಟ್ ಕೊಹ್ಲಿ ಅವರಿಗೆ ಕ್ರಮವಾಗಿ 44 ಮತ್ತು 102 ರನ್‌ಗಳ ಅಗತ್ಯವಿದೆ.
ಅಡಿಲೇಡ್‌ನಲ್ಲಿ ವಿರಾಟ್ ದಾಖಲೆ
ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ವಿರಾಟ್ ಕೊಹ್ಲಿ ಬೊಂಬಾಟ್ ರೆಕಾರ್ಡ್‌ಗಳನ್ನು ಹೊಂದಿದ್ದಾರೆ. ಈ ಮೈದಾನದಲ್ಲಿ ವಿರಾಟ್ ರನ್ ಹೊಳೆ ಹರಿಸಿದ್ದಾರೆ. ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 509 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ. ಅವರ ಉತ್ತಮ ಸ್ಕೋರ್ 141 ರನ್. ವಿರಾಟ್ ಈ ಮೈದಾನದಲ್ಲಿ 2020ರಲ್ಲಿ ಕೊನೆಯದಾಗಿ ಆಡಿದ್ದಾರೆ. ಇದೀಗ ಈ ಮೈದಾನದಲ್ಲಿ ಹೊಸ ಮೈಲಿಗಲ್ಲು ಸಾಧಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications