For Quick Alerts
ALLOW NOTIFICATIONS  
For Daily Alerts
 

Adelaide Test: ಟೀಮ್ ಇಂಡಿಯಾ ಬೌಲಿಂಗ್ ಬಗ್ಗೆ ಚೇತೇಶ್ವರ ಪೂಜಾರ ಹೇಳಿದ್ದೇನು?

ಅಡಿಲೇಡ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಟ್ರಾವಿಸ್ ಹೆಡ್ 141 ಎಸೆತಗಳಲ್ಲಿ 140 ರನ್‌ಗಳ ಅದ್ಭುತ ಶತಕವನ್ನು ಬಾರಿಸಿದ್ದಾರೆ. ಈ ಕಾರಣದಿಂದಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 157 ರನ್‌ಗಳ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತರವಾಗಿ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 128 ರನ್ ಗಳಿಸಿದ್ದು, ಆಸ್ಟ್ರೇಲಿಯಾಕ್ಕಿಂತ ಇನ್ನೂ 29 ರನ್‌ಗಳಷ್ಟು ಹಿಂದಿದೆ. ಆದರೆ, ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಚೇತೇಶ್ವರ ಪೂಜಾರ ಕೂಡ ಮೌನ ಮುರಿದ್ದಾರೆ.

ಚೇತೇಶ್ವರ ಪೂಜಾರ ಅವರು ಟ್ರಾವಿಸ್ ಹೆಡ್‌ಗೆ ಶಾರ್ಟ್ ಪಿಚ್ ಎಸೆತಗಳನ್ನು ಬೌಲ್ ಮಾಡಲು ವಿಫಲರಾದ ಟೀಮ್ ಇಂಡಿಯಾ ಬೌಲರ್‌ಗಳನ್ನು ಟೀಕಿಸಿದ್ದಾರೆ. ಹೆಡ್‌ನ ನೆಚ್ಚಿನ ಆಫ್‌ಸೈಡ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ರನ್ ಗಳಿಸುವ ಅವಕಾಶವನ್ನು ನೀಡಿದ್ದಾರೆ ಎಂದು ಬೌಲರ್‌ಗಳನ್ನು ಪೂಜಾರ ತರಾಟೆಗೆ ತೆಗೆದುಕೊಂಡಿದ್ದಾರೆ. ದಿನದಾಟದ ಅಂತ್ಯದ ನಂತರ, ಪೂಜಾರ ಅವರು ಹೆಡ್ ದೌರ್ಬಲ್ಯದ ಬಗ್ಗೆ ತಂಡಕ್ಕೆ ತಿಳಿದಿತ್ತು. ಆದರೆ ಅಲ್ಲಿ ಯಾವುದೇ ಬೌಲಿಂಗ್ ಇರಲಿಲ್ಲ ಎಂದು ಹೇಳಿದ್ದಾರೆ.

IND vs AUS What did Cheteshwar Pujara say about Team India s bowling

ಹೆಡ್ ದೌರ್ಬಲ್ಯ ಗೊತ್ತು

ಹೆಡ್‌ನ ದೌರ್ಬಲ್ಯವು ಶಾರ್ಟ್-ಪಿಚ್‌ಡ್ ಬಾಲ್‌ಗಳು, ಇದು ಎದುರಾಳಿ ಭಾರತ ತಂಡಕ್ಕೆ ಚೆನ್ನಾಗಿ ತಿಳಿದಿದೆ. ಟೀಮ್ ಇಂಡಿಯಾ ಬೌಲರ್‌ಗಳು ಕೇವಲ ಎರಡು-ಮೂರು ಶಾರ್ಟ್ ಪಿಚ್ ಬಾಲ್‌ಗಳನ್ನು ಎಸೆದಿರುವುದನ್ನು ನಾವು ನೋಡಿದ್ದೇವೆ. ಅವರು ಇದನ್ನು ಉತ್ತಮವಾಗಿ ಬಳಸಬಹುದಿತ್ತು. ಹೆಡ್ ಆಫ್‌ಸೈಡ್‌ನಲ್ಲಿ ಅದ್ಭುತವಾಗಿ ಆಡುತ್ತಾರೆ. ನಾವು ಅವರನ್ನು ನಿಯಂತ್ರಿಸಬೇಕಾಗಿದೆ. ಆರು ಮಂದಿ ಫೀಲ್ಡರ್‌ಗಳ ಬದಲಿಗೆ ಐವರು ಫೀಲ್ಡರ್‌ಗಳನ್ನು ಆಫ್‌ಸೈಡ್‌ನಲ್ಲಿ ಹಾಕುವುದು ಅವರ ಮೇಲೆ ಒತ್ತಡ ಏರುವ ಮತ್ತೊಂದು ಉತ್ತಮ ತಂತ್ರವಾಗಿತ್ತು. ಆದರೆ ಇದನ್ನು ಟೀಮ್ ಇಂಡಿಯಾ ಮಾಡಿಲ್ಲ ಎಂದು ಪೂಜಾರ ಹೇಳಿದ್ದಾರೆ.

ಬೌಲಿಂಗ್ ಕೋಚ್ ಹೇಳಿದ್ದೇನು?

ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಅವರು ತಮ್ಮ ತಂಡದ ಬೌಲರ್‌ಗಳು ತಂತ್ರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದು ಹೆಡ್ ಅವರಿ‌ಗೆ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿತು. ಅವರು ಕೇವಲ ರನ್ ಗಳಿಸಲು ಬಯಸುವ ಆಟಗಾರ. ಒಬ್ಬ ಬೌಲರ್ ಆಗಿ ನಿಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತಾರೆ. ಆದ್ದರಿಂದ ಪ್ರತಿ ಚೆಂಡಿನಲ್ಲೂ ನಿಮ್ಮ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗುತ್ತದೆ. ಅವರು ಆರಂಭದಲ್ಲಿ ಕಷ್ಟಪಡಬೇಕಾಯಿತು. ಆದರೆ ನಂತರ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿ ನಮ್ಮ ಮೇಲೆ ಒತ್ತಡ ಹೇರಿದರು. ನಾವು ಬಹುಶಃ ಪ್ಲಾನ್ ಎ ನಿಂದ ಪ್ಲಾನ್ ಬಿಗೆ ಹೋಗುತ್ತಿದ್ದೇವೆ. ಬೌಲಿಂಗ್ ಕ್ಷೇತ್ರದಲ್ಲಿ ನಾವು ಉತ್ತಮವಾಗಬೇಕು ಎಂದಿದ್ದಾರೆ.

Story first published: Sunday, December 8, 2024, 7:10 [IST]
Other articles published on Dec 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+