Border-Gavaskar Trophy: ಭಾರತದ ಸ್ಪಿನ್ ಜೋಡಿ ಎದುರಿಸುವುದು ಆಸ್ಟ್ರೇಲಿಯಾಕ್ಕೆ ಕಷ್ಟನಾ?
ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಟೆಸ್ಟ್ ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿ ನಡೆಯಲಿದೆ. ಭಾರತ ಎದುರು ತವರಿನಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ಸರಣಿ ಸೋಲು ಕಂಡಿದೆ. ಇತ್ತ ಟೀಮ್ ಇಂಡಿಯಾ ಸತತ ನಾಲ್ಕು ಬಾರಿ ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಸ್ಟ್ರೇಲಿಯಾವನ್ನು ಅವರದೇ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲಿಸಿದ ಏಷ್ಯಾದ ಏಕೈಕ ತಂಡ ಭಾರತ. 2018-19 ಮತ್ತು 2020-21 ರ ಆಸ್ಟ್ರೇಲಿಯಾದ ಪ್ರವಾಸಗಳಲ್ಲಿ ಭಾರತ ತಂಡವು ಐತಿಹಾಸಿಕ ಗೆಲುವುಗಳನ್ನು ದಾಖಲಿಸಿತ್ತು. ಇದೀಗ ಮತ್ತೊಮ್ಮೆ ಕಾಂಗರೂಗಳನ್ನು ಅವರದೇ ನೆಲದಲ್ಲಿ ಕಟ್ಟಿಹಾಕುವ ಮೂಲಕ ಟೀಮ್ ಇಂಡಿಯಾ ಹ್ಯಾಟ್ರಿಕ್ ಟೆಸ್ಟ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡದ ಆಟಗಾರರೊಬ್ಬರು ತಮ್ಮ ತಂಡಕ್ಕೆ ಭಾರತದ ಸ್ಪಿನ್ ಜೋಡಿಯಿಂದ ಬೆದರಿಕೆ ಎಂದು ಬಹಿರಂಗಪಡಿಸಿದ್ದಾರೆ.

ಭಯದಲ್ಲಿ ಕಾಂಗರೂ ಪಡೆ
ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವಶಪಡಿಸಿಕೊಳ್ಳಲು ಆಸ್ಟ್ರೇಲಿಯಾ ತಂಡ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ. ಆದರೆ, ಆಸ್ಟ್ರೇಲಿಯಾ ಬ್ಯಾಟರ್‌ಗಳು ಭಾರತದ ಸ್ಟಾರ್ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ ಅನ್ನು ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ಸರಣಿ ಗೆಲ್ಲುವುದು ಅವಲಂಬಿತವಾಗಿದೆ ಎಂದು ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅಶ್ವಿನ್ ಮತ್ತು ಜಡೇಜಾ ಆಧಾರಸ್ತಂಭವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಆಸ್ಟ್ರೇಲಿಯಾ ಆಟಗಾರರು ಕೂಡ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಜೋಡಿ ಅದ್ಭುತ ಮೋಡಿ ಮಾಡಿತ್ತು.
ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಶತಕ ಸಿಡಿಸಿ ಸಂಭ್ರಮಿಸಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಆರು ವಿಕೆಟ್ ಪಡೆಯುವ ಮೂಲಕ ಹಲವು ದಾಖಲೆಗಳನ್ನು ಮಾಡಿದ್ದರು. ಮತ್ತೊಂದೆಡೆ ಜಡೇಜಾ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ 86 ರನ್ ಗಳಿಸಿ ಸಂಕಷ್ಟ ಸ್ಥಿತಿಯಲ್ಲಿದ್ದ ಭಾರತಕ್ಕೆ ನೆರವಾಗಿದ್ದರು. ಜೊತೆಗೆ ಪ್ರಮುಖ ಮೂರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದರೊಂದಿಗೆ ಈ ಜೋಡಿ ಬಾಂಗ್ಲಾದೇಶ ಗೆಲುವಿಗೆ ಕಡಿವಾಣ ಹಾಕಿದ್ದರು.
ಈ ಪ್ರದರ್ಶನದ ನಂತರ ಕಾಂಗರೂ ಪಡೆಗೆ ಅಶ್ವಿನ್ ಮತ್ತು ಜಡೇಜಾ ಭಯ ಶುರುವಾಯಿತು. ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ರಿಷಬ್ ಪಂತ್ ಜೊತೆಗೆ ಅಶ್ವಿನ್ ಮತ್ತು ಜಡೇಜಾ ಜೋಡಿಯನ್ನು ಎದುರಿಸುವುದು ಸವಾಲಾಗಿದೆ. ಈ ಭಯವನ್ನು ಆಸ್ಟ್ರೇಲಿಯಾ ಮಾಜಿ ಮತ್ತು ಹಾಲಿ ಆಟಗಾರರು ವ್ಯಕ್ತಪಡಿಸುತ್ತಿದ್ದಾರೆ.
ಮ್ಯಾಕ್ಸ್‌ವೆಲ್ ಹೇಳಿದ್ದೇನು?
ಅಶ್ವಿನ್ ಮತ್ತು ಜಡೇಜಾ ಅವರಂತಹ ಬೌಲರ್‌ಗಳ ವಿರುದ್ಧ ದೀರ್ಘಕಾಲದಿಂದ ಆಡುತ್ತಿದ್ದೇನೆ. ಇಬ್ಬರ ಬೌಲಿಂಗ್ ಅನ್ನು ನಿರಂತರವಾಗಿ ಎದುರಿಸಿದ್ದೇನೆ. ಆಗಾಗ್ಗೆ ಅವರ ವಿರುದ್ಧದ ನಮ್ಮ ಪ್ರದರ್ಶನವು ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ. 2017 ರ ನಂತರ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ಭಾಗವಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications