IND vs AUS: ಏಕದಿನ ವಿಶ್ವಕಪ್‌ನಲ್ಲಿ ದಿಗ್ಗಜರನ್ನು ಹಿಂದಿಕ್ಕಿ ದಾಖಲೆ ನಿರ್ಮಿಸಿದ ಮಿಚೆಲ್ ಸ್ಟಾರ್ಕ್
ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಭಾರತ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಾರಕ ವೇಗಿ ಮಿಚೆಲ್ ಸ್ಟಾರ್ಕ್ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ಭಾರತದ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ಅವರ ವಿಕೆಟ್ ಪಡೆಯುತ್ತಿದ್ದಂತೆಯೇ ಮಿಚೆಲ್ ಸ್ಟಾರ್ಕ್ ಏಕದಿನ ವಿಶ್ವಕಪ್‌ನ 19 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಈ ಹಿಂದಿನ ದಾಖಲೆ ಶ್ರೀಲಂಕಾದ ಲಸಿತ್ ಮಾಲಿಂಗ ಅವರ 25 ಇನ್ನಿಂಗ್ಸ್‌ಗಳಲ್ಲಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದರು.
ಲಸಿತ್ ಮಾಲಿಂಗ, ಗ್ಲೆನ್ ಮೆಕ್‌ಗ್ರಾತ್, ವಾಸಿಂ ಅಕ್ರಮ್ ಮತ್ತು ಮುತ್ತಯ್ಯ ಮುರಳೀಧರನ್ ನಂತರ ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ ವಿಶ್ವದ ಐದನೇ ಬೌಲರ್ ಎನಿಸಿದರು.
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಒಟ್ಟಾರೆ ಪಟ್ಟಿಯಲ್ಲಿ ಮಿಚೆಲ್ ಸ್ಟಾರ್ಕ್ ಐದನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯಕ್ಕೂ ಮುನ್ನ 18 ಇನ್ನಿಂಗ್ಸ್‌ಗಳಲ್ಲಿ 14.81ರ ಸರಾಸರಿಯಲ್ಲಿ 49 ವಿಕೆಟ್‌ಗಳೊಂದಿಗೆ ವಿಶ್ವಕಪ್ ಪ್ರಾರಂಭಿಸಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್‌ಗಳು (ಇನ್ನಿಂಗ್ಸ್‌ಗಳಿಂದ)
19 - ಮಿಚೆಲ್ ಸ್ಟಾರ್ಕ್ - ಆಸ್ಟ್ರೇಲಿಯಾ
25 - ಲಸಿತ್ ಮಾಲಿಂಗ - ಶ್ರೀಲಂಕಾ
30 - ಗ್ಲೆನ್ ಮೆಕ್‌ಗ್ರಾತ್ - ಆಸ್ಟ್ರೇಲಿಯಾ
31 - ಮುತ್ತಯ್ಯ ಮುರಳೀಧರನ್ - ಶ್ರೀಲಂಕಾ
33 - ವಾಸಿಂ ಅಕ್ರಮ್ - ಪಾಕಿಸ್ತಾನ
ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
ಗ್ಲೆನ್ ಮೆಕ್‌ಗ್ರಾತ್ - ಆಸ್ಟ್ರೇಲಿಯಾ - 71
ಮುತ್ತಯ್ಯ ಮುರಳೀಧರನ್ - ಶ್ರೀಲಂಕಾ - 68
ಲಸಿತ್ ಮಾಲಿಂಗ - ಶ್ರೀಲಂಕಾ - 56
ವಾಸಿಂ ಅಕ್ರಮ್ - ಪಾಕಿಸ್ತಾನ - 55
ಮಿಚೆಲ್ ಸ್ಟಾರ್ಕ್ - ಆಸ್ಟ್ರೇಲಿಯಾ - 50
ಇದಕ್ಕೂ ಮುನ್ನ ಮಿಚೆಲ್ ಸ್ಟಾರ್ಕ್ 35 ಎಸೆತಗಳಲ್ಲಿ 28 ರನ್‌ಗಳ ನಿರ್ಣಾಯಕ ಬ್ಯಾಟಿಂಗ್‌ನೊಂದಿಗೆ ತಮ್ಮ ತಂಡದ ಮೊತ್ತವನ್ನು 200 ರನ್‌ಗಳ ಗಡಿಗೆ ಎಳೆಯಲು ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications