IND vs AUS WTC Final: ಪ್ಯಾಟ್ ಕಮ್ಮಿನ್ಸ್ ಮಾಡಿದ ಈ ತಪ್ಪಿಗೆ ಜೀವದಾನ ಪಡೆದ ಅಜಿಂಕ್ಯ ರಹಾನೆ
ಗುರುವಾರ ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನ ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್‌ಗಳಿಗೆ ಸರ್ವಪತನ ಕಂಡಿತು.
ಇದಕ್ಕೆ ಪ್ರತ್ಯುತ್ತರವಾಗಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಅಗ್ರಕ್ರಮಾಂಕದ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 151 ರನ್ ಕಲೆಹಾಕಿದೆ. ಅಜಿಂಕ್ಯ ರಹಾನೆ ಮತ್ತು ಕೆಎಸ್ ಭರತ್ ಕ್ರಮವಾಗಿ 29 ಮತ್ತು 5 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಅಜಿಂಕ್ಯ ರಹಾನೆ ಸದ್ಯ ಮಧ್ಯಮ ಕ್ರಮಾಂಕದಲ್ಲಿ ಉಳಿದಿರುವ ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಫಾಲೋ-ಆನ್ ತಪ್ಪಿಸಲು ಭಾರತ ತಂಡಕ್ಕೆ ಇನ್ನೂ 119 ರನ್‌ಗಳ ಅಗತ್ಯವಿದೆ. ಮುಂಬೈಕರ್ ಅಜಿಂಕ್ಯ ರಹಾನೆ ಅವರು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಬೌಲಿಂಗ್‌ನಲ್ಲಿ ಲೆಗ್-ಬಿಫೋರ್ ಬಲೆಗೆ ಬಿದ್ದ ನಂತರ ನಂತರ ದೊಡ್ಡ ಜೀವದಾನ ಪಡೆದರು.
2ನೇ ದಿನದಾಟದ ಅಂತಿಮ ಸೆಷನ್‌ನಲ್ಲಿ ಭಾರತ ತಂಡದ ಮೊತ್ತ 22 ಓವರ್‌ಗಳಲ್ಲಿ 4 ವಿಕೆಟ್‌ಗೆ 88 ಆಗಿತ್ತು. ಆಗ ಪ್ಯಾಟ್ ಕಮ್ಮಿನ್ಸ್ ಅವರ ಬೌಲಿಂಗ್‌ನಲ್ಲಿ ಅಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯೂ ಆದರು. ಕೂಡಲೇ ಅಂಪೈರ್ ಬೆರಳನ್ನು ಎತ್ತಿದ್ದರು.
ಆದರೆ ಅಜಿಂಕ್ಯ ರಹಾನೆ ಅವರು ಅಂಪೈರ್ ನಿರ್ಧಾರವನ್ನು ಪರಿಶೀಲನೆಗೆ ಒಳಪಡಿಸಿದರು. ಅಜಿಂಕ್ಯ ರಹಾನೆ ಸಮಾಧಾನಗೊಳ್ಳುವ ಹಾಗೆ, ರಿಪ್ಲೇನಲ್ಲಿ ಪ್ಯಾಟ್ ಕಮ್ಮಿನ್ಸ್ ಓವರ್-ಸ್ಟೆಪ್ ಮಾಡಿರುವುದನ್ನು ಕಂಡುಬಂತು. ಆ ಎಸೆತವನ್ನು ನೋ-ಬಾಲ್ ಎಂದು ಪರಿಗಣಿಸಲಾಯಿತು. ಔಟಾಗಿದ್ದ ಅಜಿಂಕ್ಯ ರಹಾನೆ ಜೀವದಾನ ಪಡೆದು ಇನ್ನಿಂಗ್ಸ್ ಮುಂದುವರೆಸಿದರು.

ಇದೇ ವೇಳೆ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಪ್ಯಾಟ್ ಕಮ್ಮಿನ್ಸ್ ಅವರು ಅಜಿಂಕ್ಯ ರಹಾನೆ ಬೆರಳಿಗೆ ನೋವಿನ ಹೊಡೆತ ನೀಡಿದರು. ಭಾರತೀಯ ಫಿಸಿಯೋ ತಕ್ಷಣವೇ ಮೈದಾನಕ್ಕೆ ಧಾವಿಸಿ ಅಜಿಂಕ್ಯ ರಹಾನೆ ಅವರ ಬೆರಳಿಗೆ ಪಟ್ಟಿ ಸುತ್ತಿದರು. ಆದರೆ, ಕೈ ಬೆರಳಿನ ಗಾಯ ಅಜಿಂಕ್ಯ ರಹಾನೆ ಅವರ ಇನ್ನಿಂಗ್ಸ್‌ನ ಲಯದ ಮೇಲೆ ಪರಿಣಾಮ ಬೀರಿದೆ.
ಕೈ ಬೆರಳಿನ ಗಾಯ ಅಜಿಂಕ್ಯ ರಹಾನೆ ಬ್ಯಾಟಿಂಗ್ ಲಯದ ಮೇಲೆ ಪರಿಣಾಮ ಬೀರಿದೆ ಎಂದು ಕಾಮೆಂಟೇಟರ್ ಹರ್ಷಾ ಭೋಗ್ಲೆ ಅಭಿಪ್ರಾಯಪಟ್ಟಿದ್ದಾರೆ.
"ಮತ್ತೊಮ್ಮೆ ರವೀಂದ್ರ ಜಡೇಜಾ ಭಾರತದ ಅತ್ಯುತ್ತಮ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಈಗ ಅತ್ಯುತ್ತಮ ಟಾಪ್ 6 ಬ್ಯಾಟರ್ ಆಗಿದ್ದಾರೆ. ಕೈ ಬೆರಳಿಗೆ ಗಾಯವಾಗುವವರೆಗೂ ಅಜಿಂಕ್ಯ ರಹಾನೆ ತುಂಬಾ ಲಯದಲ್ಲಿ ಕಾಣುತ್ತಿದ್ದರು. ಇನ್ನು ಭಾರತದ ಅಗ್ರ ಕ್ರಮಾಂಕವು ಕಳವಳಕಾರಿಯಾಗಿದೆ. ಉತ್ತಮವಾಗಿ ಕಾಣುವ ಆರಂಭಿಕ ಬ್ಯಾಟರ್‌ಗಳು ದೊಡ್ಡ ಸ್ಕೋರ್ ಗಳಿಸಬೇಕು," ಎಂದು ಹರ್ಷಾ ಭೋಗ್ಲೆ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಆಸ್ಟ್ರೇಲಿಯಾದ ಎಲ್ಲಾ ಐವರು ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಪಡೆದರು. "ನಾವು 2 ದಿನಗಳ ನಂತರವೂ ಬಲಶಾಲಿಯಾಗಿದ್ದೇವೆ. ಪಿಚ್ ಸ್ವಲ್ಪ ಮೇಲೆ, ಕೆಳಗೆ ಆಗುತ್ತದೆ ಮತ್ತು ಶುಕ್ರವಾರ ಭಾರತಕ್ಕೆ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತದೆ," ಎಂದು ಆಸ್ಟ್ರೇಲಿಯಾ ವೇಗಿ ಸ್ಕಾಟ್ ಬೋಲ್ಯಾಂಡ್ 2ನೇ ದಿನದಾಟದ ನಂತರ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications