Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs AUS WTC Final: ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕನ್ನಡ ಸೇರಿದಂತೆ ಇತರ ಭಾಷೆಗಳ ವೀಕ್ಷಕ ವಿವರಣೆಗಾರರ ಪಟ್ಟಿ

ಇಂಗ್ಲೆಂಡ್‌ನ ಓವಲ್‌ನಲ್ಲಿ ಜೂನ್ 7ರಿಂದ 11ರವರೆಗೆ ನಡೆಯಲಿರುವ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಮತ್ತು ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಈಗಾಗಲೇ ಭಾರತ ತಂಡದ ಆಟಗಾರರು ಇಂಗ್ಲೆಂಡ್ ತಲುಪಿ, ಅಭ್ಯಾಸದಲ್ಲಿ ನಿರತರಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಗೆದ್ದು, ಒಂದು ದಶಕದ ಐಸಿಸಿ ಪ್ರಶಸ್ತಿ ನೀಗಿಸಿಕೊಳ್ಳುವ ತವಕದಲ್ಲಿದೆ.

IND vs AUS WTC Final: Commentators List Of 5 Languages ​​Including Kannada on Star Sports

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ಅಧಿಕೃತ ಟಿವಿ ಮತ್ತು ಡಿಜಿಟಲ್ ಬ್ರಾಡ್‌ಕಾಸ್ಟರ್‌ಗಳಾದ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವೀಕ್ಷಕ ವಿವರಣೆಗಾರ (ಕಾಮೆಂಟೇಟರ್)ಗಳ ಪಟ್ಟಿಯನ್ನು ಪ್ರಕಟಿಸಿದೆ.

ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್‌ನಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಲೈವ್ ಆಗಿ ಪ್ರದರ್ಶಿಸಲಾಗುತ್ತದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಮತ್ತು ಪ್ರಸಿದ್ಧ ಕಾಮೆಂಟೇಟರ್ ರವಿಶಾಸ್ತ್ರಿ ಮತ್ತು ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ಇಂಗ್ಲಿಷ್ ಮತ್ತು ವಿಶ್ವ ಕಾಮೆಂಟರಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

IND vs AUS WTC Final: Commentators List Of 5 Languages ​​Including Kannada on Star Sports

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಕೂಡ ಇಂಗ್ಲೀಷ್ ಕಾಮೆಂಟರಿ ವಿಭಾಗವನ್ನು ಸೇರಿಕೊಳ್ಳಲಿದ್ದಾರೆ.

ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ದೀಪ್ ದಾಸ್‌ಗುಪ್ತಾ ಮತ್ತು ಇತ್ತೀಚೆಗೆ ಕ್ರಿಕೆಟ್‌ನಿಂದ ನಿವೃತ್ತರಾದ ವೇಗಿ ಎಸ್. ಶ್ರೀಶಾಂತ್ ಅವರು ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಹಿಂದಿ ಕಾಮೆಂಟರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಮಾಜಿ ಆಟಗಾರರಾದ ಲಕ್ಷ್ಮಿಪತಿ ಬಾಲಾಜಿ, ಎಸ್ ರಮೇಶ್, ಮತ್ತು ಎಸ್ ಶ್ರೀರಾಮ್ ಮತ್ತು ಹಿಂದಿನ ತಮಿಳುನಾಡು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ಯೋ ಮಹೇಶ್ ಅವರು ತಮಿಳು ಭಾಷೆಯ ವೀಕ್ಷಣೆ ವಿವರಣೆಗಾರರಾಗಿದ್ದಾರೆ.

IND vs AUS WTC Final: Commentators List Of 5 Languages ​​Including Kannada on Star Sports

ತೆಲುಗಿನಲ್ಲಿ ಕೌಶಿಕ್ ಎನ್‌ಸಿ, ಆಶಿಶ್ ರೆಡ್ಡಿ, ಟಿ ಸುಮನ್ ಮತ್ತು ಕಲ್ಯಾಣ್ ಕೆ ಪರಿಣಿತ ಕಾಮೆಂಟೇಟರ್‌ಗಳಾಗಿದ್ದಾರೆ. ಇನ್ನು ವಿಜಯ್ ಭಾರದ್ವಾಜ್, ಶ್ರೀನಿವಾಸ ಮೂರ್ತಿ, ಭರತ್ ಚಿಪ್ಲಿ, ಪವನ್ ದೇಶಪಾಂಡೆ, ಮತ್ತು ಸುನೀಲ್ ಜೋಷಿ ಕನ್ನಡ ಭಾಷೆಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಎರಡು ತಿಂಗಳುಗಳ ಕಾಲ ಸುದೀರ್ಘವಾಗಿ ನಡೆದ ಐಪಿಎಲ್ 2023ರ ಪಂದ್ಯಾವಳಿ ನಂತರ ಭಾರತೀಯ ತಂಡದ ಆಟಗಾರರು ಬ್ಯಾಚ್‌ಗಳಲ್ಲಿ ಲಂಡನ್ ತಲುಪಿದ್ದಾರೆ. ಪ್ರಸ್ತುತ ವೆಸ್ಟ್ ಸಸೆಕ್ಸ್‌ನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಪ್ರಮುಖ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಫೈನಲ್ ಟೆಸ್ಟ್ ಪಂದ್ಯ ಜೂನ್ 7ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಲಿದೆ.

ಭಾರತ vs ಆಸ್ಟ್ರೇಲಿಯಾ ಡಬ್ಲ್ಯುಟಿಸಿ ಫೈನಲ್‌ಗೆ ವೀಕ್ಷಕ ವಿವರಣೆಗಾರರ ​​ಸಂಪೂರ್ಣ ಪಟ್ಟಿ:

ಇಂಗ್ಲೀಷ್ (ವರ್ಲ್ಡ್ ಫೀಡ್) : ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ನಾಸಿರ್ ಹುಸೇನ್

ಹಿಂದಿ : ಹರ್ಭಜನ್ ಸಿಂಗ್, ಸೌರವ್ ಗಂಗೂಲಿ, ದೀಪ್ ದಾಸ್‌ಗುಪ್ತಾ, ಎಸ್. ಶ್ರೀಶಾಂತ್

ತಮಿಳು : ಯೋ ಮಹೇಶ್, ಎಸ್. ರಮೇಶ್, ಎಲ್. ಬಾಲಾಜಿ, ಎಸ್. ಶ್ರೀರಾಮ್

ತೆಲುಗು : ಕೌಶಿಕ್ ಎನ್‌ಸಿ, ಆಶಿಶ್ ರೆಡ್ಡಿ, ಟಿ. ಸುಮನ್, ಕಲ್ಯಾಣ್ ಕೆ

ಕನ್ನಡ : ವಿಜಯ್ ಭಾರದ್ವಾಜ್, ಶ್ರೀನಿವಾಸ ಮೂರ್ತಿ, ಭರತ್ ಚಿಪ್ಲಿ, ಪವನ್ ದೇಶಪಾಂಡೆ, ಸುನಿಲ್ ಜೋಷಿ

Story first published: Saturday, June 3, 2023, 10:54 [IST]
Other articles published on Jun 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+