IND vs AUS WTC Final: ಫೈನಲ್‌ಗೆ ಮುನ್ನ ಭಾರತ ತಂಡಕ್ಕೆ ಈ 3 ಆಯ್ಕೆಗಳದ್ದೇ ದೊಡ್ಡ ಚಿಂತೆ!
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಜೂನ್ 7ರಿಂದ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯುವ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ ತಂಡಕ್ಕೆ ಇದು ಸತತ ಎರಡನೇ ಫೈನಲ್ ಆಗಿದೆ. ಈ ವರ್ಷ ಭಾರತ ತಂಡ ಒಂದು ಹೆಜ್ಜೆ ಮುಂದೆ ಹೋಗಿ ಚಾಂಪಿಯನ್‌ಶಿಪ್ ಗೆಲ್ಲುವ ಗುರಿ ಹೊಂದಿದ್ದಾರೆ.

ಭಾರತದ ದೃಷ್ಟಿಕೋನದಿಂದ ಒಳ್ಳೆಯ ಸುದ್ದಿಯೆಂದರೆ, ಪ್ರಮುಖ ಆಟಗಾರರು ಉತ್ತಮ ಫಾರ್ಮ್‌ನಲ್ಲಿರುವುದು. ಇತ್ತೀಚೆಗಷ್ಟೇ ಮುಕ್ತಾಯಗೊಂಡ 2023ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶುಭ್ಮನ್ ಗಿಲ್ ಆರೆಂಜ್ ಕ್ಯಾಪ್ ವಿಜೇತರಾದರೆ, ಮುಹಮ್ಮದ್ ಶಮಿ ಪರ್ಪಲ್ ಕ್ಯಾಪ್ ವಿಜೇತರಾಗಿದ್ದರು.
ಇನ್ನು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದರೆ, ರವೀಂದ್ರ ಜಡೇಜಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಐಪಿಎಲ್ ಋತುವನ್ನು ಮುಗಿಸಿದರು.
ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರ ಹೊರತಾಗಿಯೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪರಿಸ್ಥಿತಿಗಳನ್ನು ಪರಿಗಣಿಸಿದ ನಂತರ, ಸರಿಯಾದ ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು ಯಶಸ್ಸಿನ ಗುಟ್ಟಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುಂಚೆ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಎದುರು ತಲೆದೂರಿರುವ ಮೂರು ದೊಡ್ಡ ಪ್ರಶ್ನೆಗಳು ಇಲ್ಲಿವೆ.

1) ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಸ್ ಭರತ್ or ಇಶಾನ್ ಕಿಶನ್?
ಈ ವರ್ಷ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ರಿಷಭ್ ಪಂತ್ ಬದಲಿಗೆ ಕೆಎಸ್ ಭರತ್ ವಿಕೆಟ್ ಕೀಪರ್ ಆಗಿ ಆಡಿದರು. ಗ್ಲೌಸ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದರೂ, ಬ್ಯಾಟ್ಸ್‌ಮನ್ ಆಗಿ ಕೆಎಸ್ ಭರತ್ ಕಳಪೆಯಾಗಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.
ಭಾರತ ತಂಡದಲ್ಲಿರುವ ಇತರ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಎಂದರೆ ಅದು ಇಶಾನ್ ಕಿಶನ್. ಕೆಎಸ್ ಭರತ್‌ಗಿಂತ ಉತ್ತಮ ಬ್ಯಾಟರ್. ಆದರೆ ಇಶಾನ್ ಕಿಶನ್ ಯಾವುದೇ ಟೆಸ್ಟ್ ಪಂದ್ಯದ ಅನುಭವವನ್ನು ಹೊಂದಿಲ್ಲ. ಅವರನ್ನು ನೇರವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಆಡುವ 11ರ ಬಳಗದಲ್ಲಿ ಆಡಿಸುವುದು ದೊಡ್ಡ ಅಪಾಯವಾಗಿದೆ.
2) ಆಡುವ 11ರ ಬಳಗದಲ್ಲಿ ಮೂರನೇ ವೇಗಿ ಯಾರು?
ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವೇಗದ ಬೌಲಿಂಗ್ ನೇತೃತ್ವ ವಹಿಸಲಿದ್ದಾರೆ. ತಂಡದಲ್ಲಿ ಮೂರನೇ ವೇಗಿ ಯಾರು ಎಂಬ ಪ್ರಶ್ನೆ ಮೂಡಿದೆ. ಮೂರನೇ ವೇಗಿ ಸ್ಥಾನಕ್ಕಾಗಿ ಜಯದೇವ್ ಉನಾದ್ಕಟ್ ಮತ್ತು ಉಮೇಶ್ ಯಾದವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಉಮೇಶ್ ಯಾದವ್ ವೇಗ ಮತ್ತು ಸ್ವಿಂಗ್ ಮಾಡಲಿದ್ದಾರೆ. ಆದರೆ ಜಯದೇವ್ ಉನಾದ್ಕಟ್ ಎಡಗೈ ಬದಲಾವಣೆ ಆಗಿರಲಿದೆ. ಉಮೇಶ್ ಯಾದವ್ ಅವರು ಜಯದೇವ್ ಉನಾದ್ಕಟ್ ಅವರಿಗಿಂತ ಹೆಚ್ಚು ಅನುಭವಿ ಬೌಲರ್ ಆಗಿದ್ದಾರೆ. ಪ್ರಮುಖ ಪಂದ್ಯದಲ್ಲಿ ಯಾರನ್ನು ಕಣಕ್ಕಿಳಿಸಲಿದೆ ಎಂಬ ಪ್ರಶ್ನೆ ಮೂಡಿದೆ.
3) ವೇಗದ ಬೌಲಿಂಗ್ or ಸ್ಪಿನ್ ಬೌಲಿಂಗ್ ಆಲ್‌ರೌಂಡರ್?
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಆಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಉತ್ತರವಿಲ್ಲ. ಎಡಗೈ ಸ್ಪಿನ್ನರ್ ಆಗಿ ರವೀಂದ್ರ ಜಡೇಜಾ ಪಕ್ಕಾ ಆಯ್ಕೆಯಂತೆ ಕಾಣುತ್ತಾರೆ. ಆದರೆ ಇನ್ನೊಂದು ಸ್ಥಾನಕ್ಕೆ ರವಿಚಂದ್ರನ್ ಅಶ್ವಿನ್ ಅಥವಾ ಶಾರ್ದೂಲ್ ಠಾಕೂರ್ ನಡುವೆ ಸ್ಪರ್ಧೆ ಇದ್ದು, ಆಡುವ 11ರ ಬಳಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ರವಿಚಂದ್ರನ್ ಅಶ್ವಿನ್ ಅಗಾಧ ಅನುಭವವನ್ನು ಹೊಂದಿದ್ದು, ಶಾರ್ದೂಲ್ ಠಾಕೂರ್ ವೇಗಿಯಾಗಿದ್ದಾರೆ. ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಹವಾಮಾನ ಹೇಗೆ ಆಡುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ ಎಂದು ಹೇಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications