Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ವಿಶಿಷ್ಟ ದಾಖಲೆಗೆ ಸಾಕ್ಷಿಯಾದ ಚೆಪಾಕ್‌ ಸ್ಟೇಡಿಯಂ

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಚೆನ್ನೈ ಟೆಸ್ಟ್ ಪಂದ್ಯದ ಎರಡನೇ ದಿನ ರೋಚಕವಾಗಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 376 ರನ್‌ಗಳಿಗೆ ಸರ್ವಪತನವಾಯಿತು. ಇದಾದ ನಂತರ ಪ್ರವಾಸಿ ಬಾಂಗ್ಲಾದೇಶ ತಂಡ ಕೇವಲ 149 ರನ್‌ಗಳಿಗೆ ಕುಸಿಯಿತು.

ಟೆಸ್ಟ್ ಪಂದ್ಯದ ಎರಡನೇ ದಿನ ಉಭಯ ತಂಡಗಳ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಇದರಿಂದ ಎರಡನೇ ದಿನವೇ ಹಲವು ವಿಕೆಟ್‌ಗಳು ಪತನವಾಗಿದ್ದು, ಚೆಪಾಕ್‌ನಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಲಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 308 ರನ್‌ಗಳ ಮುನ್ನಡೆ ಸಾಧಿಸಿದೆ.

IND vs BAN 1st Innings unique record at Chepauk Stadium

ಭಾರತ ಸ್ಟಂಪ್‌ಗೆ 3 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ರೋಹಿತ್ ಶರ್ಮಾ (5), ಯಶಸ್ವಿ ಜೈಸ್ವಾಲ್ (10) ಮತ್ತು ವಿರಾಟ್ ಕೊಹ್ಲಿ (17) ವಿಕೆಟ್ ಕಳೆದುಕೊಂಡರೆ, ರಿಷಬ್ ಪಂತ್ (12*) ಮತ್ತು ಶುಭಮನ್ ಗಿಲ್ (33*) ಅಜೇಯರಾಗಿ ಮರಳಿದ್ದಾರೆ.

ದಾಖಲೆಗೆ ಸಾಕ್ಷಿಯಾದ ಚೆಪಾಕ್

ಪಂದ್ಯದ ಎರಡನೇ ದಿನದಲ್ಲಿ ಒಟ್ಟು 17 ವಿಕೆಟ್‌ಗಳು ಪತನಗೊಂಡವು. ಈ ಮೂಲಕ ಚೆಪಾಕ್ ಮೈದಾನದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ವಿಕೆಟ್ ಪತನಗೊಂಡ ಹೊಸ ದಾಖಲೆ ಸೃಷ್ಟಿಯಾಯಿತು. ಟೀಮ್ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಬ್ಯಾಟಿಂಗ್‌ನಿಂದ ದಿನದಾಟ ಆರಂಭವಾಯಿತು. ಮೊದಲ ದಿನ ಭಾರತದ 6 ವಿಕೆಟ್‌ಗಳು ಬಿದ್ದಿದ್ದವು.

ಎರಡನೇ ದಿನದ ಮೊದಲ ಸೆಷನ್‌ನಲ್ಲಿ ಬಾಂಗ್ಲಾದೇಶ ತಂಡ ಭಾರತವನ್ನು ಆಲೌಟ್ ಮಾಡಿತು. ಇದಾದ ನಂತರ ಭಾರತದ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶವನ್ನು ಆಲೌಟ್ ಮಾಡುವ ಮೂಲಕ ಪ್ರಾಬಲ್ಯ ಸಾಧಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಪ್ರಮುಖ ಮೂರು ವಿಕೆಟ್‌ಗಳನ್ನು ಬಾಂಗ್ಲಾದೇಶ ಉರುಳಿಸುವಲ್ಲಿ ಯಶಸ್ವಿಯಾಗುವುದರ ಜೊತೆಗೆ ದಿನದ ಆಟವು ಕೊನೆಗೊಂಡಿತು.

ಇಂಗ್ಲೆಂಡ್‌ನ ಲಾರ್ಡ್ಸ್‌ ಅಂಗಳವೂ ಟೆಸ್ಟ್ ಪಂದ್ಯವೊಂದರ ಒಂದೇ ದಿನದಲ್ಲಿ ಅತಿ ಹೆಚ್ಚು ವಿಕೆಟ್‌ಗಳು ಬಿದ್ದ ದಾಖಲೆಯನ್ನು ಹೊಂದಿದೆ. 1888 ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಎರಡನೇ ದಿನದಂದು ಈ ದಾಖಲೆ ಆಗಿದೆ. ಈ ದಿನ 27 ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್ ನಡಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನ 28ನೇ ಪಂದ್ಯವಾಗಿತ್ತು. ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಬಂದಿದ್ದು, ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯವನ್ನು ಆಸ್ಟ್ರೇಲಿಯಾ 61 ರನ್‌ಗಳಿಂದ ಗೆದ್ದಿತ್ತು.

ಚೆಪಾಕ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಒಂದು ದಿನದಲ್ಲಿ ಬಿದ್ದ ಅತಿ ಹೆಚ್ಚು ವಿಕೆಟ್‌ಗಳು

ಭಾರತ vs ಬಾಂಗ್ಲಾದೇಶ- 17 ವಿಕೆಟ್‌ಗಳು - 2024 (2ನೇ ದಿನ)
ಭಾರತ vs ವೆಸ್ಟ್ ಇಂಡೀಸ್- 15 ವಿಕೆಟ್‌ಗಳು - 1979 (3ನೇ ದಿನ)
ಭಾರತ vs ಇಂಗ್ಲೆಂಡ್- 15 ವಿಕೆಟ್‌ಗಳು - 2021 (4ನೇ ದಿನ)
ಭಾರತ vs ಇಂಗ್ಲೆಂಡ್- 15 ವಿಕೆಟ್‌ಗಳು - 2021 (2ನೇ ದಿನ)

Story first published: Friday, September 20, 2024, 23:44 [IST]
Other articles published on Sep 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+