Ind vs Ban 1st Test : ಶತಕ ವಂಚಿತ ಪೂಜಾರ, ಮುಂದುವರಿದ ಐಯ್ಯರ್ ಹೋರಾಟ: ಮೊದಲ ದಿನದ ಹೈಲೈಟ್ಸ್

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ದಿನದಾಟ ಅಂತ್ಯವಾಗಿದೆ. ಮೊದಲ ದಿನದಾಟದಲ್ಲಿ ಎರಡು ತಂಡಗಳು ಕೂಡ ಸಮಬಲದ ಪ್ರದರ್ಶನ ನೀಡಿದೆ. ಆರಂಭದಲ್ಲಿ ಬಾಂಗ್ಲಾದೇಶ ತಂಡದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಟೀಮ್ ಇಂಡಿಯಾಗೆ ಆಘಾತ ನೀಡಿದರೆ ಬಳಿಕ ಟೀಮ್ ಇಂಡಿಯಾ ಕೂಡ ತಿರುಗು ಬೀಳುವಲ್ಲಿ ಯಶಸ್ವಿಯಾಯಿತು. ಅಂತಿಮ ಹಂತದಲ್ಲಿ ಮತ್ತೆ ಬಾಂಗ್ಲಾದೇಶ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಜೋಡಿಯಿಂದ ಸಾಧಾರಣ ಪ್ರದರ್ಶನ ವ್ಯಕ್ತವಾಯಿತು. ಬಳಿಕ ವಿರಾಟ್ ಕೊಹ್ಲಿ ಕೂಡ ಶೀಘ್ರವಾಗಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡರು. ಆದರೆ ಚೇತೇಶ್ವರ್ ಪೂಜಾರ, ರಿಷಬ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬಂದಿದ್ದು ಹೋರಾಟದ ಪ್ರದರ್ಶನ ನೀಡಿದೆ.

ಆಘಾತ ನೀಡಿದ ತೈಜುಲ್ ಇಸ್ಲಾಮ್
ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದ ಮೇಲೆ ಮೊದಲ ದಿನ ಯಶಸ್ಸು ಸಾಧಿಸಿದರು. ಮೊದಲಿಗೆ ಆರಂಭಿಕ ಜೋಡಿಯಾದ ಕೆಎಲ್ ರಾಹುಲ್ ಹಾಗೂ ಶುಬ್ಮನ್ ಗಿಲ್ ಅವರನ್ನು ಬೇರ್ಪಡಿಸುವ ಮೂಲಕ ಬಾಂಗ್ಲಾದೇಶ ತಂಡಕ್ಕೆ ಮೊದಲ ಯಶಸ್ಸು ನೀಡಿದರು. 20 ರನ್‌ಗಳಿಸಿದ ಶುಬ್ಮನ್ ಗಿಲ್ ತೈಜುಲ್ ಇಸ್ಲಾಮ್‌ಗೆ ವಿಕೆಟ್ ನೀಡುವ ಮೂಲಕ ಆಘಾತ ಅನುಭವಿಸಿರು. ಬಳಿಕ ವಿರಾಟ್ ಕೊಹ್ಲಿ ಕೂಡ ತೈಜುಲ್ ಎಸೆತದಲ್ಲಿ ಕೇವಲ 1 ರನ್‌ಗಳಿಸಿದ್ದಾಗ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ನಂತರ 90 ರನ್‌ಗಳಿಸಿ ಶತಕದತ್ತ ಹೆಚ್ಚೆ ಹಾಕುತ್ತಿದ್ದ ಚೇತೇಶ್ವರ್ ಪೂಜಾರ ಕೂಡ ಬೌಲ್ಡ್ ಆಗಿ ನಿರ್ಗಮಿಸುವ ಮೂಲಕ ತೈಜುಲ್ 3ನೇ ವಿಕೆಟ್ ಸಂಪಾದಿಸಿದರು.

ಚೇತರಿಕೆ ನೀಡಿದ ಪೂಜಾರ- ಶ್ರೇಯಸ್ ಆಟ
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಅದ್ಭುತ ಪ್ರದರ್ಶನ ನೀಡಿದ್ದು ಚೇತೇಶ್ವರ್ ಪೂಜಾರ ಹಾಗೂ ಶ್ರೇಯಸ್ ಐಯ್ಯರ್ ಜೋಡಿ. ಭರ್ಜರಿ ಶತಕದ ಜೊತೆಯಾಟ ನೀಡಿದ ಆ ಆಟಗಾರರು ತಂಡವನ್ನು ಕುಸಿತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು. ಪೂಜಾರ ಶತಕ ವಂಚಿತವಾದರೆ ಶ್ರೇಯಸ್ ಐಯ್ಯರ್ 82 ರನ್‌ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಅಕ್ಷರ್ ಪಟೇಲ್ ದಿನದಾಟದ ಅಂತಿಮ ಎಸೆತದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಇತ್ತಂಡಗಳ ಆಡುವ ಬಳಗ
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್,
ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications