Ind vs Ban 1st Test: ಭಾರತದ ಗೆಲುವಿಗೆ 4 ವಿಕೆಟ್ ಅಗತ್ಯ: ಕುತೂಹಲ ಮೂಡಿಸಿದ ಅಂತಿಮ ದಿನದಾಟ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದು ನಿಂತಿದೆ. ಅಂತಿಮ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಆರಂಭದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ ಭಾರತದ ಬೌಲಿಂಗ್ ವಿಭಾಗ ಮತ್ತೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ನಾಲ್ಕನೇ ದಿನದಾಟದ ಅಂತ್ಯಕ್ಕೆ ಬಾಂಗ್ಲಾದೇಶದ 6 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದೆ.
ಬಾಂಗ್ಲಾದೇಶದ ಆರಂಭಿಕ ಆಟಗಾರರು ಮೊದಲ ವಿಕೆಟ್‌ಗೆ ಭರ್ಜರಿ ಶತಕದ ಜೊತೆಯಾಟವನ್ನು ನೀಡಿದರು. ನಜ್ಮುಲ್ ಹುಸೈನ್ ಶಂಟೋ ಹಾಗೂ ಚೊಚ್ಚಲ ಪಂದ್ಯವನ್ನು ಆಡುತ್ತಿರುವ ಜಾಕಿರ್ ಹಸನ್ ಜೋಡಿ 124 ರನ್‌ಗಳ ಅದ್ಭುತ ಆರಂಭವನ್ನು ಬಾಂಗ್ಲಾದೇಶ ತಂಡಕ್ಕೆ ನೀಡಿದರು. ಶಂಟೋ 67 ರನ್‌ಗಳಿಗೆ ವಿಕೆಟ್ ಕಳೆದುಕೊಂಡರಾದರೂ ಜಾಕಿರ್ ಹಸನ್ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

ಆರಂಭಿಕ ಪಂದ್ಯದಲ್ಲಿ ಜಾಕಿರ್ ಶತಕ
ಬಾಂಗ್ಲಾದೇಶದ ಯುವ ಆಟಗಾರ ಜಾಕಿರ್ ಹಸನ್ ಈ ಪಂದ್ಯದ ಮೂಲಕ ಬಾಂಗ್ಲಾದೇಶ ತಂಡಕ್ಕೆ ಪದಾರ್ಪಣೆ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 20 ರನ್‌ಗಳ ಕೊಡುಗೆ ನೀಡಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದರು. 224 ಎಸೆತಗಳನ್ನು ಎದುರಿಸಿದ ಅವರು ಭರ್ಜರಿ 100 ರನ್‌ಗಳಿಸಿದ ಬಳಿಕ ವಿಕೆಟ್ ಕಳೆದುಕೊಂಡರು. ನಂತರ ಬಾಂಗ್ಲಾದೇಶ ತಂಡ ಹೇಳಿಕೊಳ್ಳುವಂತಾ ಜೊತೆಯಾಟವನ್ನು ಪಡೆಯಲು ವಿಫಲವಾಯಿತು.

ಅಂತಿಮ ದಿನ ಬಾಂಗ್ಲಾ ಪಡೆಗೆ ಶಕೀಬ್, ಮೆಹಿದಿ ಹಸನ್ ಆಸರೆ
ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ ಬಾಂಗ್ಲಾದೇಶ 6 ವಿಕೆಟ್ ಕಳೆದುಕೊಂಡಿದೆ. ಆದರೆ ನಾಯಕ ಶಕೀಬ್ ಅಲ್ ಹಸನ್ ಕ್ರೀಸ್‌ನಲ್ಲಿದ್ದು ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ. ಇನ್ನು ಏಕದಿನ ಸರಣಿಯಲ್ಲಿ ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದ ಮೆಹಿದಿ ಹಸನ್ ಮಿರಾಜ್ ಕೂಡ ಕ್ರಿಸ್‌ನಲ್ಲಿದ್ದಾರೆ. ಈ ಜೋಡಿಯ ಜೊತೆಯತಾಟ ಬಾಂಗ್ಲಾದೇಶಕ್ಕೆ ಮಹತ್ವದ್ದಾಗಿದ್ದು ಪವಾಡದ ನಿರೀಕ್ಷೆಯಲ್ಲಿದೆ.

ಗೆಲುವಿನ ಸನಿಹ ಟೀಮ್ ಇಂಡಿಯಾ
ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ಸಂಪೂರ್ಣ ಒಂದು ದಿನದಾಟ ಬಾಕಿಯಿದ್ದು ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ಭಾರತ ತಂಡ ಕಬಳಿಸಿಸುವ ಸವಾಲು ಹೊಂದಿದೆ. ಸದ್ಯ ಕ್ರೀಸ್‌ನಲ್ಲಿರುವ ಮೆಹಿಸಿ ಹಸನ್ ಹಾಗೂ ಶಕೀಬ್ ಅಲ್ ಹಸನ್ ಜೋಡಿಯನ್ನು ಬೇರ್ಪಡಿಸಿದರೆ ಭಾರತದ ಬೌಲರ್‌ಗಳ ಕಾರ್ಯ ಬಹುತೇಕ ಮುಗಿದಂತೆ ಹೀಗಾಗಿ ಅಂತಿಮ ದಿನದಾಟದಲ್ಲಿ ಭಾರತ ಎಷ್ಟು ಬೇಗನೆ ಬಾಂಗ್ಲಾದ ಉಳಿದ ದಾಂಡಿಗರನ್ನು ಕಟ್ಟಿ ಹಾಕಲಿದೆ ಎಂಬುದು ಮಾತ್ರ ಕುತೂಹಲವಾಗಿದೆ. ಇನ್ನು ಎರಡನೇ ಇನ್ನಿಂಗ್ಸ್ನಲ್ಲಿ ಅಕ್ಷರ್ ಪಟೇಲ್ ಮಿಂಚಿದ್ದು ಮೂರು ವಿಕೆಟ್ ಪಡೆದುಕೊಂಡಿದ್ದಾರೆ.
ಬಾಂಗ್ಲಾದೇಶ ಆಡುವ ಬಳಗ: ಝಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್ ಬೆಂಚ್: ಮಹಮ್ಮದುಲ್ ಹಸನ್ ಜಾಯ್, ಮೊಮಿನುಲ್ ಹಕ್, ಶೋರಿಫುಲ್ ಇಸ್ಲಾಂ, ಅನಾಮುಲ್ ಹಕ್, ರೆಜೌರ್ ರೆಹಮಾನ್ ರಾಜ
ಟೀಮ್ ಇಂಡಿಯಾ ಆಡುವ ಬಳಗ: ಶುಬ್ಮನ್ ಗಿಲ್, ಕೆಎಲ್ ರಾಹುಲ್ (ನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಬೆಂಚ್: ಶ್ರೀಕರ್ ಭರತ್, ನವದೀಪ್ ಸೈನಿ, ಅಭಿಮನ್ಯು ಈಶ್ವರನ್, ಸೌರಭ್ ಕುಮಾರ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications