Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN 1st test: ಟೀಮ್ ಇಂಡಿಯಾ ಕಳಪೆ ಆರಂಭ: ಟಾಪ್ ಆರ್ಡರ್‌ ಬ್ಯಾಟರ್‌ಗಳಿಗೆ ಹಸನ್ ಕಾಟ

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್‌ ಚೆನ್ನೈನಲ್ಲಿ ನಡೆಯುತ್ತಿದೆ. ಮೊದಲು ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್‌ ಮಾಡಲು ಮುಂದಾಯಿತು. ಮೊದಲಾವಧಿಯ ಸಂಪೂರ್ಣ ಲಾಭ ಪ್ರವಾಸಿ ತಂಡದ ಪಾಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಬಾಂಗ್ಲಾ ಬೌಲರ್‌ಗಳ ಕಾರುವಾಕ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ.

ಚೆನ್ನೈನ ಕೆಂಪು ಮಣ್ಣಿನ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭದಲ್ಲಿ ಒತ್ತಡಕ್ಕೆ ಒಳಗಾಯಿತು. ತವರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್‌ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫರಾದರು. ಬಾಂಗ್ಲಾದೇಶದ ವೇಗಿಗಳ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ವಿಫಲರಾದರು. ಈ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು.

IND vs BAN 1st test Poor Start for Team India as Hasan Mahmood Dismantles Top Order

ರೋಹಿತ್ ಶರ್ಮಾಗೆ ಕಾಟ

ಟೀಮ್ ಇಂಡಿಯಾದ ಭರವಸೆಯ ಆಟಗಾರ ರೋಹಿತ್ ಶರ್ಮಾ ಅವರಿಗೆ ಹಸನ್‌ ಮಹಮೂದ್ ಕಾಟ ನೀಡಿದರು. ರೋಹಿತ್ ಅವರನ್ನು ಬಲಿ ಪಡೆಯಲು ಸೆಟಪ್‌ ಚೆನ್ನಾಗಿ ಮಾಡಿದರು. ಆಪ್‌ ಸ್ಟಂಪ್‌ ಆಚೆಗೆ ಚೆಂಡನ್ನು ಇರಿಸುತ್ತಾ ರೋಹಿತ್‌ಗೆ ಕಾಟ ನೀಡಿದರು. ಒಂದು ಹಂತದಲ್ಲಿ ರೋಹಿತ್‌ ಎಲ್‌ಬಿಡಬ್ಲ್ಯು ಬಲೆಗೆ ಬೀಳ ಬೇಕಿತ್ತು. ಆದರೆ ಅಂಪೈರ್‌ ಕಾಲ್‌ ಇದ್ದಿದ್ದರಿಂದ ರೋಹಿತ್‌ ಬಚಾವ್ ಆದರು. ಆದರೆ ಈ ಅವಕಾಶವನ್ನು ಬಳಸಿಕೊಂಡು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು.

ಹಸನ್‌ ಮಹಮೂದ್‌ ಅವರ ಆಫ್‌ ಸ್ಟಂಪ್‌ ಆಚೆಯ ಚೆಂಡನ್ನು ಕೆಣಕಿದ ರೋಹಿತ್‌ ಸೆಕೆಂಡ್‌ ಸ್ಲಿಪ್‌ನಲ್ಲಿ ಬಾಂಗ್ಲಾ ನಾಯಕನಿಗೆ ಕ್ಯಾಚ್ ನೀಡಿದರು. ಈ ಮೂಲಕ ಭಾರತಕ್ಕೆ ಮೊದಲ ಪೆಟ್ಟು ಬಿದ್ದಿತು.

ಗಿಲ್‌ ನಿರಾಸೆ

ಇನ್ನು ಟೀಮ್ ಇಂಡಿಯಾದ ಭರವಸೆಯ ಮಿಡ್ಲ್‌ ಆರ್ಡರ್‌ ಬ್ಯಾಟರ್‌ ಶುಭಮನ್‌ ಗಿಲ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು. ಇವರು ಮೊದಲ ಟೆಸ್ಟ್‌ ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿದರೂ ಸಹ ಒಂದೇ ಒಂದು ರನ್‌ ಬಾರಿಸಲಿಲ್ಲ. ಗಿಲ್‌ ಹಸನ್‌ ಅವರು ಎಸೆದ ಲೆಗ್‌ ಸೈಡ್‌ ಚೆಂಡನ್ನು ಕೆಣಕಿ ವಿಕೆಟ್‌ ಕೀಪರ್‌ ಅವರಿಗೆ ಕ್ಯಾಚ್‌ ನೀಡಿದರು. ಈ ಮೂಲಕ ಭಾರತ ಒತ್ತಡಕ್ಕೆ ಸಿಲುಕಿತು.

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆರಂಭದಲ್ಲಿ ಒಳ್ಳೆಯ ಟಚ್‌ನಲ್ಲಿ ಕಂಡರು. ಅಲ್ಲದೆ ತಮ್ಮ ಮೇಲೆ ಯಾವುದೇ ಒತ್ತಡ ಇಲ್ಲದಂತೆ ಬ್ಯಾಟ್ ಮಾಡುವ ಸೂಚನೆ ನೀಡಿದರು. ಆದರೆ ಇವರು ಸಹ ಹಸನ್‌ ಮಹಮೂದ್‌ ಅವರ ಎಸೆತಗಳನ್ನು ಅರಿಯುವಲ್ಲಿ ವಿಫಲರಾದರು. ಪರಿಣಾಮ ಆಫ್‌ ಸ್ಟಂಪ್‌ ಆಚೆಯ ಚೆಂಡನ್ನು ಡ್ರೈವ್‌ ಮಾಡಲು ಆಹ್ವಾನಿಸಿದ ಹಸನ್‌, ವಿರಾಟ್‌ ಅವರ ಬಲಿ ಪಡೆದರು.

ಮೊದಲಾವಧಿಯ ಆಟದಲ್ಲಿ ಬಾಂಗ್ಲಾ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಈ ಅವಧಿಯಲ್ಲಿ ಮೂರು ವಿಕೆಟ್‌ ಪಡೆದ ಪ್ರವಾಸಿ ತಂಡ ಭಾರತದ ಪ್ರಮುಖ ಮೂರು ವಿಕೆಟ್‌ ಪಡೆದು, ಈ ಅವಧಿಯನ್ನು ತನ್ನ ವಶಕ್ಕೆ ಮಾಡಿಕೊಂಡಿದೆ.

Story first published: Thursday, September 19, 2024, 13:02 [IST]
Other articles published on Sep 19, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+