IND vs BAN 1st Test: ಚೆನ್ನೈನಲ್ಲಿ ಅಶ್ವಿನ್ ಶತಕದ ಸೊಬಗು: ಒಂದೇ ಇನಿಂಗ್ಸ್‌ನಲ್ಲಿ ಹಲವು ದಾಖಲೆ ನಿರ್ಮಾಣ
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ತಮ್ಮ ಅಮೋಘ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಆಧಾರವಾಗಿದ್ದಾರೆ. ಒತ್ತಡದಲ್ಲಿದ್ದ ತಂಡಕ್ಕೆ ನೆರವಾದ ಅಶ್ವಿನ್, ಸ್ಟಾರ್ ಬ್ಯಾಟರ್‌ಗಳು ಮಾಡದ ಸಾಧನೆಯನ್ನು ಮಾಡಿ ಅಬ್ಬರಿಸಿದ್ದಾರೆ. ಅಲ್ಲದೆ ಒತ್ತಡವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬ್ಯಾಟಿಂಗ್‌ಗೆ ಕೊಂಚ ಕಠಿಣವಾಗಿದ್ದ ಪಿಚ್‌ನಲ್ಲಿ ಅಶ್ವಿನ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೆಎಲ್ ರಾಹುಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಅಶ್ವಿನ್, ತಮ್ಮಲ್ಲಿ ಇನ್ನು ಕ್ರಿಕೆಟ್ ಸಾಕಷ್ಟಿದೆ ಎಂಬುದನ್ನು ಸಾರಿ ಹೇಳಿದ್ದಾರೆ. ಅಲ್ಲದೆ ತವರಿನ ಅಂಗಳದಲ್ಲಿ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಇವರ ನೈಜ ಆಟಕ್ಕೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.

ವೇಗದ ಶತಕ
ಅಶ್ವಿನ್ ಬ್ಯಾಟಿಂಗ್ ಧಾಟಿಯನ್ನು ಕಂಡು ನಂಬರ್ ಜಸ್ಟ್ ಎ ನಂಬರ್ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅಶ್ವಿನ್ ಕ್ರೀಸ್‌ಗೆ ಎಂಟ್ರಿ ಆದರು. ತಮ್ಮ ತವರು ನೆಲದಲ್ಲಿ ಅಶ್ವಿನ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಶ್ವಿನ್ ತಮ್ಮ ಟೆಸ್ಟ್ ಕ್ರಿಕೆಟ್‌ನ ಆರನೇ ಶತಕ ಬಾರಿಸಿ ಅಬ್ಬರಿಸಿದರು. ಅಲ್ಲದೆ ಇದು ಅವರ ಟೆಸ್ಟ್ ಕ್ರಿಕೆಟ್‌ನ ವೇಗದ ಶತಕವಾಗಿದೆ.
ಅಶ್ವಿನ್ ಇದಕ್ಕೂ ಮೊದಲು 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 117 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದು ಅವರ ವೇಗದ ಶತಕವಾಗಿತ್ತು. ಆದರೆ ಗುರುವಾರ ಅಶ್ವಿನ್ 108 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. 112 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 102 ರನ್ ಬಾರಿಸಿದ ಅಶ್ವಿನ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರಾಹುಲ್, ಅಯ್ಯರ್ ಮಾಡದ ಸಾಧನೆ
ಅಸಲಿಗೆ ಆರ್ ಅಶ್ವಿನ್ ನುರಿತ ಬ್ಯಾಟರ್ ಅಲ್ಲ. ಅವರು ಒಬ್ಬ ಸ್ಟಾರ್ ಸ್ಪಿನ್ ಬೌಲರ್. ಇವರು ತಮ್ಮ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳಿಗಿಂತಲೂ ಹೆಚ್ಚಿನ ರನ್ ಕಲೆ ಹಾಕಿದ್ದಾರೆ. ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕಿದ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾದ ಬ್ಯಾಟರ್‌ಗಳಾದ ಕೆಎಲ್ ರಾಹುಲ್ 17 ಪಂದ್ಯಗಳಲ್ಲಿ 974 ರನ್ ಮತ್ತು ಶ್ರೇಯಸ್ ಅಯ್ಯರ್ 14 ಪಂದ್ಯಗಳಲ್ಲಿ 811 ರನ್ ಗಳಿಸಿದ್ದಾರೆ.
ಧೋನಿ ದಾಖಲೆ ಸರಿಗಟ್ಟಿದ ಅಶ್ವಿನ್
ಚೆನ್ನೈನಲ್ಲಿ ಆರ್ ಅಶ್ವಿನ್ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ತಂಡಕ್ಕೆ ಆಧಾವಾದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಒತ್ತಡದ ಸನ್ನಿವೇಶದಲ್ಲಿ ಹಲವು ಬಾರಿ ಬ್ಯಾಟ್ ಮಾಡಿರುವ ಅಶ್ವಿನ್ ತಂಡಕ್ಕೆ ನೆರವಾಗಿದ್ದಾರೆ. ಚೆನ್ನೈ ಟೆಸ್ಟ್ ಪಂದ್ಯದ ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆರನೇ ಶತಕವನ್ನು ಪೂರ್ಣಗೊಳಿಸಿದರು. ಮತ್ತು ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಶತಕಗಳ ಸಂಖ್ಯೆಯ ಸಮಕ್ಕೆ ನಿತರು. ದಿನದಾಟದಂತ್ಯಕ್ಕೆ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.
ಮತ್ತೊಂದು ಮೈಲಿಗಲ್ಲು
ಅಶ್ವಿನ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತು 20 ಬಾರಿ ಐವತ್ತು ಹೆಚ್ಚು ರನ್ ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ವಿಷಯದಲ್ಲಿ ಅಶ್ವಿನ್ ನಂತರ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಎರಡನೇ ಸ್ಥಾನದಲ್ಲಿದ್ದು, ಟೆಸ್ಟ್‌ನಲ್ಲಿ ಅವರು 604 ವಿಕೆಟ್ ಪಡೆದಿದ್ದು, 14 ಬಾರಿ ಐವತ್ತಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications