IND vs BNG 2nd Test: ಎರಡನೇ ದಿನದಾಟ ಮಳೆಗೆ ಆಹುತಿ
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಮಳೆಗೆ ಆಹುತಿ ಆಗಿದೆ. ಶುಕ್ರವಾರ ಕೇವಲ 35 ಓವರ್‌ಗಳ ಪಂದ್ಯ ನಡೆಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 3 ವಿಕೆಟ್‌ಗೆ 107 ರನ್ ಸೇರಿಸಿದ್ದಾಗ ಮಳೆ ಬಂದಿತು. ಶನಿವಾರ ಮಳೆ ಕಾಟ ನೀಡಿದ್ದರಿಂದ ಎರಡನೇ ದಿನದ ಆಟವನ್ನು ರದ್ದು ಗೊಳಿಸಲಾಗಿದೆ.
ಶನಿವಾರ ಮುಂಜಾನೆಯಿಂದಲೂ ವರಣ ತನ್ನ ನರ್ತನವನ್ನು ಕಾನ್ಪುರದಲ್ಲಿ ಪ್ರದರ್ಶಿಸುತ್ತಲೇ ಬಂದಿದ್ದ. ಈಗ ಆರಂಭವಾಗುತ್ತದೇ ಆಮೇಲೆ ಆರಂಭವಾಗುತ್ತದೆ ಎಂದು ಕಾದು ಕಾದು ಕುಳಿತ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಮಧ್ಯಾಹ್ನದ ವರೆಗೆ ಕಾಯ್ದ ಅಂಪೈರ್ ಬಳಿಕ ಎರಡನೇ ದಿನದಾಟವನ್ನು ರದ್ದು ಗೊಳಿಸಿದರು.

ಭಾರತ ತಂಡ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈಗ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಇತಿಹಾಸದ ಪುಟದಲ್ಲಿ ಸ್ಥಾನ ಪಡೆಯುವ ಕನಸು ಟೀಮ್ ಇಂಡಿಯಾದ್ದಾಗಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ನಾಲ್ಕನೇ ತಂಡ ಎಂಬ ಕೀರ್ತಿ ತನ್ನದಾಗಿಸಿಕೊಳ್ಳಲಿದೆ. ಎರಡನೇ ಟೆಸ್ಟ್‌ನಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ಮುಂದಾಯಿತು.
ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮೊದಲ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗೆ 107 ರನ್ ಸೇರಿಸಿದೆ. ಅಲ್ಲದೆ 35 ಓವರ್ ಮಾತ್ರ ಆಟ ನಡೆದಿದೆ. ಆ ಮೇಲೆ ಮಳೆ ಬಿಟ್ಟು ಬಿಡದೆ ಬಂದಿದ್ದರಿಂದ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಬಾಂಗ್ಲಾ ಬ್ಯಾಟರ್‌ಗಳಿಗೆ ಆಕಾಶ್ ದೀಪ್ ಕಾಟ ನೀಡಿದರು. ಇವರು ಮೊದಲ ಟೆಸ್ಟ್‌ನಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಈಗ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಎರಡು ವಿಕೆಟ್‌ಗಳನ್ನು ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಎರಡನೇ ದಿನದ ಆಟ ರದ್ದಾಗುವ ಮುನ್ನವೇ ಟೀಂ ಇಂಡಿಯಾ ಆಟಗಾರರು ಹೋಟೆಲ್‌ಗೆ ತೆರಳಿದರು. ಬಾಂಗ್ಲಾದೇಶದ ಆಟಗಾರರೂ ಟೀಂ ಇಂಡಿಯಾ ಹೊಗುತ್ತಿದ್ದಂತೆ ಬಸ್‌ನತ್ತ ಮುಖ ಮಾಡಿದರು. ಮಳೆ ನಿಂತ ನಂತರ ಗ್ರೀನ್‌ಪಾರ್ಕ್ ಕ್ರೀಡಾಂಗಣದ ಮೈದಾನ ಸಿಬ್ಬಂದಿ ನೀರು ತೆಗೆದು ಹಾಕಲು ಮುಂದಾದರು. ಆದರೆ ಮತ್ತೆ ಮಳೆ ಆರಂಭವಾದ ನಂತರ ಪಂದ್ಯವನ್ನು ನಿಲ್ಲಿಸಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications