For Quick Alerts
ALLOW NOTIFICATIONS  
For Daily Alerts
 

IND Vs BAN 2nd Test : ಟೀಂ ಇಂಡಿಯಾ ಬ್ಯಾಟಿಂಗ್ ಶೈಲಿ ಬಗ್ಗೆ ಸಬಾ ಕರೀಮ್ ಅಸಮಾಧಾನ

IND Vs BAN 2nd Test : Former Cricketer Saba Karim Unhappy With Team India Batting Approach

ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಭಾರತ ತಂಡ ಒತ್ತಡಕ್ಕೆ ಸಿಲುಕಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 145 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ 3ನೇ ದಿನದ ಅಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಮಾಜಿ ಕ್ರಿಕೆಟಿಗ ಸಬಾ ಕರೀಂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನೀತಿಯನ್ನು ಪ್ರಶ್ನಿಸಿದ್ದಾರೆ. ನಿಧಾನಗತಿಯಲ್ಲಿ ರಕ್ಷಣಾತ್ಮಕವಾಗಿ ಆಡುವ ವಿಧಾನವೇ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಅವರು ಹೇಳಿದ್ದಾರೆ.

145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಭಾರತೀಯ ಬ್ಯಾಟರ್‌ಗಳು ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು. 23 ಓವರ್‌ಗಳಲ್ಲಿ ಪ್ರತಿ ಓವರ್‌ಗೆ ಎರಡಕ್ಕಿಂತ ಕಡಿಮೆ ರನ್ ಗಳಿಸಿದರು. ಭಾರತ ತಂಡ ಬ್ಯಾಟರ್ ಗಳು ಅಷ್ಟೊಂದು ನಿಧಾನಗತಿಯಲ್ಲಿ ಆಡುವ ಅಗತ್ಯವಿರಲಿಲ್ಲ ಎಂದು ಸಬಾಕರೀಂ ಹೇಳಿದ್ದಾರೆ.

"ಬೇಡದ ಕಷ್ಟವನ್ನು ನಾವು ನಮ್ಮ ಮೇಲೆ ಹಾಕಿಕೊಂಡಿದ್ದೇವೆ. ನಮಗೆ ಈ ರೀತಿಯ ಬ್ಯಾಟಿಂಗ್ ವಿಧಾನ ಅಗತ್ಯವಿರಲಿಲ್ಲ. ಶುಭಮನ್ ಗಿಲ್‌ ಸುಲಭವಾಗಿ ರನ್ ಗಳಿಸುವ ಆಟಗಾರ, ಆದರೆ ಇಂದು ಅವರು ಕೂಡ ರಕ್ಷಣಾತ್ಮಕವಾಗಿ ಆಡಲು ಪ್ರಯತ್ನಪಟ್ಟರು, ಅವರು ರನ್ ಗಳಿಸುವ ಆಸಕ್ತಿಯನ್ನು ತೋರಿಸಲಿಲ್ಲ." ಎಂದು ಹೇಳಿದ್ದಾರೆ.

35 ಎಸೆತಗಳಲ್ಲಿ ಪ್ರಯಾಸದಾಯಕವಾದ ಏಳು ರನ್ ಗಳಿಸಿದ ನಂತರ ಶುಭಮನ್ ಗಿಲ್ ಮೆಹಿದಿ ಹಸನ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರು. ಚೇತೇಶ್ವರ ಪೂಜಾರ ಕೂಡ ಆಫ್-ಸ್ಪಿನ್ನರ್‌ನಿಂದ ಟ್ರ್ಯಾಕ್‌ನಲ್ಲಿ ಸಿಲುಕಿಕೊಂಡರು, ನೂರುಲ್ ಹಸನ್ ಮತ್ತೊಂದು ಸ್ಟಂಪಿಂಗ್ ಎಫೆಕ್ಟ್ ಮಾಡಿದರು.

IND Vs BAN 2nd Test : Former Cricketer Saba Karim Unhappy With Team India Batting Approach

ಭಾರತವೇ ಈ ಪಂದ್ಯವನ್ನು ಗೆಲ್ಲಲಿದೆ

ಭಾರತ ತಂಡವೇ 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲಲಿದೆ ಎಂದು ಸಬಾ ಕರೀಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಲ್ಕನೇ ದಿನದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ಭಾರತ ತಂಡ ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ ಎಂದು ಸಬಾ ಕರೀಂ ಎಚ್ಚರಿಕೆ ನೀಡಿದ್ದಾರೆ.

"ಭಾರತವು ತಮ್ಮ ಮೊದಲ ಇನ್ನಿಂಗ್ಸ್ ಮತ್ತು ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿನ ಜೊತೆಯಾಟದಿಂದ ಕಲಿಯಬೇಕಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅದ್ಭುತ ಜೊತೆಯಾಟವನ್ನು ಆಡಿದರು. ಈ ಜೋಡಿ ಪ್ರತಿ ಓವರ್‌ಗೆ 5.5 ರಿಂದ 6 ರನ್ ಗಳಿಸಿದರು. ರನ್ ದರವು ಐದಕ್ಕೆ ಹತ್ತಿರವಾಗಿತ್ತು. ಲಿಟ್ಟನ್ ದಾಸ್ ಮತ್ತು ಟಾಸ್ಕಿನ್ ಅಹ್ಮದ್ ನಡುವಿನ ಜೊತೆಯಾಟ ಕೂಡ ಅದೇ ರೀತಿ ಇತ್ತು" ಎಂದು ಹೇಳಿದರು.

ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಬೇಕಾಗಿದ್ದು, ಭಾರತ ಗೆಲ್ಲುವ ಸಾಧ್ಯತೆ ಇದೆ. ಆದರೆ ಭಾರತ ಮೊದಲ ಸೆಷನ್‌ನಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದರು.

Story first published: Saturday, December 24, 2022, 21:58 [IST]
Other articles published on Dec 24, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+