Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND Vs BAN 2nd Test : ಭಾರತ ತಂಡದ ಫೀಲ್ಡಿಂಗ್ ತಂತ್ರವನ್ನು ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್

IND Vs BAN 2nd Test : Former Cricketer Sunil Gavaskar Unhappy With Team India Fielding

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೂರನೇ ದಿನ ಭಾರತ ತಂಡ ಕಳಪೆ ಫೀಲ್ಡಿಂಗ್ ಮಾಡುವ ಮೂಲಕ ಟೀಕೆಗೆ ಗುರಿಯಾಯಿತು. ಮೀರ್‌ಪುರದಲ್ಲಿ ಬಾಂಗ್ಲಾದೇಶ ಭಾರತಕ್ಕೆ 145 ರನ್ ಗುರಿ ನೀಡಿದೆ. ಲಿಟ್ಟನ್ ದಾಸ್ 73 ರನ್‌ ಗಳಿಸುವ ಮೂಲಕ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು.

ಆದರೆ, ಭಾರತ ತಂಡ ಫೀಲ್ಡಿಂಗ್‌ ಪ್ರಮಾದಗಳು ಬಾಂಗ್ಲಾದೇಶ ಮುನ್ನಡೆ ಪಡೆಯಲು ಕಾರಣವಾಯಿತು. ಲಿಟ್ಟನ್ ದಾಸ್‌ ಹಲವು ಬಾರಿ ಜೀವದಾನ ಪಡೆದರು. ವಿರಾಟ್ ಕೊಹ್ಲಿ ಎರಡು ಬಾರಿ ಕ್ಯಾಚ್‌ ಕೈಚೆಲ್ಲಿದರು. ಸ್ಲಿಪ್‌ನಲ್ಲಿ ಫಿಲ್ಡಿಂಗ್‌ ಮಾಡುತ್ತಿದ್ದ ಕೊಹ್ಲಿ ಅವಕಾಶಗಳನ್ನು ಕೈಚೆಲ್ಲಿದರು. ನಂತರ ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಕೂಡ ಎರಡು ಕ್ಯಾಚ್ ಬಿಟ್ಟರು.

ಸ್ಲಿಪ್‌ನಲ್ಲಿ ಹಲವು ಕ್ಯಾಚ್‌ಗಳನ್ನು ಕೈಬಿಟ್ಟ ಟೀಂ ಇಂಡಿಯಾ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಕೋಚ್ ರಾಹುಲ್‌ ದ್ರಾವಿಡ್ ಉತ್ತಮ ಕ್ಯಾಚರ್, 200ಕ್ಕೂ ಹೆಚ್ಚು ಕ್ಯಾಚ್ ಪಡೆದಿದ್ದಾರೆ. ಆದರೆ, ಅವರ ತರಬೇತಿಯಲ್ಲಿ ತಂಡದ ಫೀಲ್ಡಿಂಗ್ ಕಳಪೆಯಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಸ್ಟಂಪ್‌ ಔಟ್ ಆದ ಬಗ್ಗೆ ಕೂಡ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪಿನ್‌ಗೆ ಆಡುವಾಗ ಸಾಮಾನ್ಯವಾಗಿ ಕ್ರೀಸ್ ಬಿಟ್ಟು ಮುಂದೆ ಬಂದು ಆಡುವುದಿಲ್ಲ, ಯಾವಾಗಲೂ ಸ್ವೀಪ್ ಮಾಡಲು ನೋಡಬೇಕು, ಅದೇ ಉತ್ತಮ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

IND Vs BAN 2nd Test : Former Cricketer Sunil Gavaskar Unhappy With Team India Fielding

ಫೀಲ್ಡಿಂಗ್‌ನಲ್ಲಿ ಸಾಕಷ್ಟು ಸುಧಾರಿಸಬೇಕು

ಇದೇ ರೀತಿ ಫೀಲ್ಡಿಂಗ್ ಮಾಡಿದರೆ ತಂಡಕ್ಕೆ ಮುಂದೆ ಭಾರಿ ಸಮಸ್ಯೆಯಾಗಲಿದೆ. ಕ್ಯಾಚ್‌ಗಳನ್ನು ಕೈಬಿಟ್ಟರೆ ಬೌಲರ್ ನ ವಿಶ್ವಾಸ ಕಡಿಮೆಯಾಗುತ್ತದೆ. ಅದರಲ್ಲೂ ಕೊಹ್ಲಿಯಂತ ಆಟಗಾರ ಕ್ಯಾಚ್ ಬಿಡುವುದು ಉತ್ತಮ ಬೆಳವಣಿಗೆಯಲ್ಲ.

145 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಚ್ಚರಿ ಎನ್ನುವಂತೆ ವಿರಾಟ್‌ ಕೊಹ್ಲಿಗಿಂತ ಮೊದಲು ಅಕ್ಷರ್ ಪಟೇಲ್‌ ಬ್ಯಾಟಿಂಗ್‌ ಮಾಡಲು ಬಂದರು.

ಅಕ್ಷರ್ ಪಟೇಲ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು, ಕೊಹ್ಲಿಗಿಂತ ಮೊದಲು ಬಂದಿದ್ದು ಅಚ್ಚರಿಯೇನಲ್ಲ. ಆದರೆ, ಇದನ್ನು ವಿರಾಟ್ ಕೊಹ್ಲಿ ಗಂಭೀರವಾಗಿ ಯೋಚಿಸಬೇಕು, ವಿಶ್ವದ ಅತ್ಯುತ್ತಮ ಬ್ಯಾಟರ್ ಅವರು ಎಂದರು.

ಮೊದಲ ಟೆಸ್ಟ್ ಅನ್ನು ಗೆದ್ದ ನಂತರ ಭಾರತವು ಪ್ರಸ್ತುತ 1-0 ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Story first published: Sunday, December 25, 2022, 9:34 [IST]
Other articles published on Dec 25, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+