ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ
ಹೈದರಾಬಾದ್: ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೂರನೇ ಟಿ20 ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈ ಗೊಂಡಿದೆ.
ಟೀಮ್ ಇಂಡಿಯಾ ಪರ ಆಡುವ ಕನಸು ಕಾಣುತ್ತಿದ್ದ ಹರ್ಷಿತ್ ರಾಣಾ, ಜಿತೇಶ್ ಶರ್ಮಾ ಅವರಿಗೆ ಮತ್ತೊಮ್ಮೆ ನಿರಾಸೆ ಆಗಿದೆ. ಎರಡನೇ ಪಂದ್ಯದಲ್ಲಿ ಇದ್ದ ತಂಡವನ್ನೇ ಉಳಿಸಿಕೊಳ್ಳುವಲ್ಲಿ ಸೂರ್ಯಕುಮಾರ್ ಯಾದವ್ ಸಫಲರಾಗಿದ್ದಾರೆ. ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ಜಿತೇಶ್ ಶರ್ಮಾ
ಟೀಮ್ ಇಂಡಿಯಾದ ಪರ ಕಣಕ್ಕೆ ಇಳಿಯುವ ಕನಸು ಕಂಡಿದ್ದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ನಿರಾಸೆ ಆಗಿದೆ. ಈ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸ್ಥಾನದಲ್ಲಿ ಜಿತೇಶ್‌ಗೆ ಸ್ಥಾನ ನೀಡಲಾಗುತ್ತದೆ ಎಂಬ ಲೆಕ್ಕಾಚಾರಗಳು ಇದ್ದವು. ಆದರೆ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆಗಿದೆ.
ಹರ್ಷಿತ್ ರಾಣಾಗೆ ನಿರಾಸೆ
ಟೀಮ್ ಇಂಡಿಯಾದ ಪರ ಆಡುವ ಇರಾದೆಯನ್ನು ಹೊಂದಿದ್ದ ಭರವಸೆಯ ಆಟಗಾರ ಹರ್ಷಿತ್ ರಾಣಾ ಅವರಿಗೆ ನಿರಾಸೆ ಆಗಿದೆ. ಭಾರತದ ಪರ ಪದಾರ್ಪಣೆ ಮಾಡುವ ಆಸೆಯನ್ನು ಕಂಡಿದ್ದ ವೇಗದ ಬೌಲರ್ ಹರ್ಷಿತ್ ರಾಣಾ ಮೂರನೇ ಟಿ20 ಪಂದ್ಯದಲ್ಲಿ ಅಖಾಡಕ್ಕೆ ಇಳಿಯುವ ಆಸೆ ಹೊಂದಿದ್ದರು. ಆದರೆ ತಂಡದಲ್ಲಿ ಯಾವುದೇ ಬದಲಾವಣೆ ಕಾಣದೇ ಇರುವುದರಿಂದ ಮತ್ತೊಮ್ಮೆ ಬೆಂಚ್ ಕಾಯಬೇಕಾಯಿತು. ಹೀಗಾಗಿ ಐಪಿಎಲ್‌ನಲ್ಲಿ ಚಾಂಪಿಯನ್ ತಂಡ ಅಲಂಕರಿಸಿದ್ದ ಕೆಕೆಆರ್ ತಂಡದ ವೇಗಿಗೆ ನಿರಾಸೆ ಆಗಿದೆ.
ಭಾರತದ ತಂಡ: ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ನಿತೀಶ್ ರೆಡ್ಡಿ, ಹಾರ್ದಿಕ್ ಪಾಂಡ್ಯ, ರಯಾನ್ ಪರಾಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮಯಾಂಕ್ ಯಾದವ್.
ಬಾಂಗ್ಲಾದೇಶದ ತಂಡ: ಪರ್ವೇಜ್ ಹೊಸೈನ್ ಎಮೋನ್, ಲಿಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ತನ್ಜಿದ್ ಹಸನ್, ತಾಹಿದ್ ಹೃದಯ್, ಮಹಮ್ಮದುಲ್ಲಾ, ಮೆಹದಿ ಹಸನ್, ತಸ್ಕಿನ್ ಅಹ್ಮದ್, ರಿಶಾದ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಸಾಕಿಬ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications