For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಗೆಲ್ಲಬೇಕಾದರೆ ಬೌಲರ್‌ಗಳು ಆಕ್ರಮಣಕಾರಿಯಾಗಬೇಕು: ಬಾಂಗ್ಲಾದೇಶ ಕೋಚ್ ಅಲನ್ ಡೊನಾಲ್ಡ್

Ind vs Ban: Bangladesh coach Allan Donald said seamers to be more aggressive against India in last Test

ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಟೆಸ್ಟ್ ಸರಣಿಯ ಎಡನೇ ಹಾಗೂ ಅಂತಿಮ ಪಂದ್ಯ ಗುರುವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡದ ಬೌಲಿಂಗ್ ಕೋಚ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ವಿರುದ್ಧ ಬಾಂಗ್ಲಾದೇಶ ತಂಡ ಯಶಸ್ಸು ಸಾಧಿಸಬೇಕಾದರೆ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶದ ಬೌಲಿಂಗ್ ವಿಭಾಗ ಹೆಚ್ಚು ಆಕ್ರಮಣಕಾರಿಯಾಬೇಕಿದೆ ಎಂದಿದ್ದಾರೆ.

ಢಾಕಾದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿರುವ ಅಲನ್ ಡೊನಾಲ್ಡ್ ಈ ಪಂದ್ಯದಲ್ಲಿ 350-380 ರನ್‌ಗಳನ್ನು ಗಳಿಸುವ ಸಾಧ್ಯತೆಯಿದೆ. ಇಲ್ಲಿನ ಪಿಚ್ ವೇಗದ ಬೌಲಿಂಗ್‌ಗೆ ಹೆಚ್ಚಾಗಿ ಸಹಾಯ ಮಾಡುವುದಿಲ್ಲ. ಹೀಗಾಗಿ ಸಹಜವಾಗಿಯೇ ಇಲ್ಲಿ ಆಡುವ ತಂಡಗಳು ಸ್ಪಿನ್ ಮೇಲೆ ಹೆಚ್ಚಿನ ಗಮನ ನೀಡುತ್ತವೆ. ಆದರೆ ಡೊನಾಲ್ಡ್ ಅವರು ಈ ಪಂದ್ಯದಲ್ಲಿ ಬಾಂಗ್ಲಾದೇಶದ ವೇಗಿಗಳು ಮೊದಲ ಪಂದ್ಯದಲ್ಲಿ ಭಾರತದ ವೇಗಿಗಳು ನೀಡಿದಷ್ಟೇ ಪರಿಣಾಮಕಾರಿಯಾದ ಪ್ರದರ್ಶನ ನಿಡಬೇಕು ಎಂದಿದ್ದಾರೆ.

"ಚಿತ್ತಗಾಂಗ್‌ನಲ್ಲಿ ಭಾರತದ ಬೌಲರ್‌ಗಳಾರ ಸಿರಾಜ್ ಹಾಗೂ ಉಮೇಶ್ ಯಾದವ್ ಅವರ ಬೌಲಿಂಗ್ ನೀವು ಗಮನಿಸಿರಬಹುದು. ಬಹಳ ಆಕ್ರಮಣಕಾರಿಯಾಗಿ ಬೌಲಿಂಗ್ ನಡೆಸುತ್ತಿದ್ದರು ಮೂವರು ಸ್ಪಿನ್ನರ್‌ಗಳು ಇದ್ದರು ಕೂಡ ವೇಗದ ಬೌಲಿಂಗ್‌ನಲ್ಲಿಯೂ ಪರಿಣಾಮಕಾರಿಯಾಗಿದ್ದರು. ಶಾರ್ಟ್ ಹಾಗೂ ಆಕ್ರಮಣಕಾರಿ ದಾಳಿ ನಡೆಸಿ ಕ್ಯಾಚ್‌ಗೆ ಅವಕಾಶ ಮಾಡುತ್ತಿದ್ದರು. ಇಂಥಾ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರ ನಿರ್ಣಾಯಕವಾಗಿದ್ದರೂ ವೇಗುಗಳು ಕೂಡ ತಮ್ಮ ದಾಳಿಯಿಂದ ಎದುರಾಳಿಗೆ ಒತ್ತಡವನ್ನುಂಟು ಮಾಡಬಹುದು" ಎಂದಿದ್ದಾರೆ ಬಾಂಗ್ಲಾದೇಶದ ಕೋಚ್ ಅಲನ್ ಡೊನಾಲ್ಡ್.

ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 150 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 404 ರನ್‌ಗಳನ್ನು ಗಳಿಸಿದ್ದ ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 254 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ ಜಾಕಿರ್ ಹಸನ್ ಅವರ ಶತಕದ ನೆರವಿನಿಂದಾಗಿ 324 ರನ್‌ಗಳನ್ನು ಗಳಿಸಿತಾದರೂ ಬಾಂಗ್ಲಾದೇಶ ಭಾರತದ ವಿರುದ್ಧ 188 ರನ್‌ಗಳ ಅಂತರದ ಸೋಲು ಅನುಭವಿಸಿದೆ. ಇದೀಗ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಎರಡನೇ ಪಂದ್ಯಕ್ಕೆ ಸಜ್ಜಾಗಿದ್ದು ಸರಣಿ ಕುತೂಹಲ ಮೂಡಿಸಿದೆ.

ಟೀಮ್ ಇಂಡಿಯಾ ಸಂಭಾವ್ಯ ಆಡುವ ಬಳಗ: ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

ಬಾಂಗ್ಲಾದೇಶ ಸಂಭಾವ್ಯ ಆಡುವ ಬಳಗ: ನಜ್ಮುಲ್ ಹುಸೇನ್ ಶಾಂಟೋ, ಅನಾಮುಲ್ ಹಕ್, ಜಾಕಿರ್ ಹುಸೇನ್, ಶಾಕಿಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಟನ್ ದಾಸ್, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಖಲೇಲ್ ಮಹಮೂದ್, ತೈಜುಲ್ ಇಸ್ಲಾಂ

Story first published: Wednesday, December 21, 2022, 16:16 [IST]
Other articles published on Dec 21, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+