Ind vs Ban: ವಿಶ್ವಕಪ್ ಇತಿಹಾಸದಲ್ಲಿ ಬಾಂಗ್ಲಾ ಪರ ಐತಿಹಾಸಿಕ ಸಾಧನೆ ಮಾಡಿದ ಆರಂಭಿಕ ಜೋಡಿ
ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಅದ್ಭುತ ಆರಂಭವನ್ನು ಪಡೆದುಕೊಂಡಿದ್ದು ನಂತರ ಭಾರತದ ಬೌಲಿಂಗ್ ವಿಭಾಗ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಪಂದ್ಯದಲ್ಲಿ ಬಾಂಗ್ಲಾದೇಶದ ಆರಂಭಿಕ ಆಟಗಾರರು ವಿಶ್ವಕಪ್ ಇತಿಹಾಸದಲ್ಲಿ ತಮ್ಮ ದೇಶದ ಪರವಾಗಿ ಐತಿಹಾಸಿಕ ದಾಖಲೆಯೊಂದನ್ನು ಬರೆದಿದ್ದಾರೆ.
ಬಾಂಗ್ಲಾದೇಶದ ಆರಂಭಿಕರಾದ ಲಿಟನ್ ದಾಸ್ ಹಾಗೂ ತನ್ಜಿದ್ ಹಸನ್ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಪರವಾಗಿ ಅತಿ ದೊಡ್ಡ ಜೊತೆಯಾಟ ನೀಡಿದ ಆರಂಭಿಕ ಜೋಡಿ ಎಂಬ ದಾಖಲೆ ಬರೆದಿದ್ದಾರೆ. ಮೊದಲ ವಿಕೆಟ್‌ಗೆ ಇವರಿಬ್ಬರು ಭರ್ಜರಿ 93 ರನ್‌ಗಳ ಜೊತೆಯಾಟ ನೀಡುವ ಮೂಲಕ ಈ ದಾಖಲೆ ಬರೆದಿದ್ದಾರೆ. ಕುಲ್‌ದೀಪ್ ಯಾದವ್ ತನ್ಜಿದ್ ಹಸನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಈ ಜೋಡಿಯನ್ನು ಬೇರ್ಪಡಿಸಿದರು.

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶದ ಈ ಆರಂಭೀಕ ಜೊಡಿ ಅತ್ಯಂತ ಎಚ್ಚರಿಕೆಯ ಆರಂಭವನ್ನು ನೀಡಿದರು. ಮೊದಲ ಐದು ಓವರ್‌ಗಳಲ್ಲಿ ಕೇವಲ 10 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿದ್ದರು. ಆದರೆ ಅದಾದ ಬಳಿಕ ರನ್‌ವೇಗವನ್ನು ಹೆಚ್ಚಿಸಿದರು. ಹತ್ತು ಓವರ್‌ಗಳ ಮೊದಲ ಪವರ್‌ಪ್ಲೇ ಮುಗಿಯುವ ವೇಳೆಗೆ ಈ ಜೋಡಿ 63 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಇನ್ನು ಈ ಪಂದ್ಯದಲ್ಲಿ ತನ್ಜಿದ್ ತಮ್ಮ ಚೊಚ್ಚಲ ಅರ್ಧ ಶತಕವನ್ನು 41 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದೆ. ಇನ್ನು ಲಿಟನ್ ದಾಸ್ ಈ ಪಂದ್ಯದಲ್ಲಿ 66 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಆರಂಭಿಕ ಜೋಡಿಯ ಅಬ್ಬರ ಅಂತ್ಯವಾಯಿತು. ಇನ್ನು ಅದಾದ ಬಳಿಕ ಟೀಮ್ ಇಂಡಿಯಾದ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದ್ದ ಮೇಲುಗೈ ಸಾಧಿಸಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ಶಕೀಬ್ ಅಲ್ ಹಸನ್, ತಂಜಿಮ್ ಹಸನ್ ಸಾಕಿಬ್, ಮಹೇದಿ ಹಸನ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications