ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಮೊದಲಾವಧಿಯ ಆಟದಲ್ಲಿ ಆತಿಥೇಯ ತಂಡ ಮೇಲುಗೈ ಸಾಧಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಮನಮೋಹಕ ಆಟವನ್ನು ಆಡಿದರು. ಮೂರನೇ ದಿನದಾಟದ ಆರಂಭದಲ್ಲಿ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಅರ್ಧಶತಕ ಬಾರಿಸಿ ಮಿಂಚಿದರು.
ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಅವರ ಆಟ ಅಭಿಮಾನಿಗಳಿಗೆ ಗಾಬಾ ಟೆಸ್ಟ್‌ನ್ನು ನೆನಪಿಸಿತು. ಗಬ್ಬಾ ಟೆಸ್ಟ್‌ನಲ್ಲೂ ಪಂತ್ ಮತ್ತು ಗಿಲ್ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದ್ದರು. ಅಲ್ಲದೆ ಭಾರತ ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.

ಗುರುವಾರದಿಂದ ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭವಾಯಿತು. ಇಂದು ಮೂರನೇ ದಿನದ ಆಟ ನಡೆಯುತ್ತಿದೆ. ಎರಡನೇ ದಿನದಾಟದ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 81 ರನ್‌ಗಳಿಸಿದ್ದ ಭಾರತ, ಇಲ್ಲಿಂದ ಆಟವನ್ನು ಮುಂದುವರೆಸಿ ಮೊದಲಾವಧಿಯ ವೇಳೆಗೆ ಭಾರತ ಮೂರು ವಿಕೆಟ್ ಕಳೆದುಕೊಂಡು 205 ರನ್ ಸೇರಿಸಿತು.
ಮೂರನೇ ದಿನ ಭಾರತ ತಂಡದ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ಗಿಲ್ ಮತ್ತು ಪಂತ್ ವಹಿಸಿಕೊಂಡಿದ್ದಾರೆ. ಇಬ್ಬರೂ ಬಾಂಗ್ಲಾದೇಶದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ರಿಷಭ್ ಪಂತ್ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಇವರಿಬ್ಬರ ಆಟವನ್ನು ಕಂಡು ಅಭಿಮಾನಿಗಳು ಗಾಬಾ ಟೆಸ್ಟ್‌ನ್ನು ನೆನಪಿಸಿಕೊಂಡರು.

2021 ರಲ್ಲಿ ಗಬ್ಬಾದಲ್ಲಿ ನಡೆದ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು ಇತಿಹಾಸವನ್ನು ಸೃಷ್ಟಿಸಿತ್ತು. ಗಬ್ಬಾ ಟೆಸ್ಟ್‌ನಲ್ಲಿ ಭಾರತ ತಂಡದ ಪರ ಗಿಲ್ ಮತ್ತು ಪಂತ್ ಅದ್ಭುತ ಪ್ರದರ್ಶನ ನೀಡಿದ್ದರು. ಗಬ್ಬಾ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಗಿಲ್ ಮತ್ತು ಪಂತ್ ಭಾರತ ತಂಡಕ್ಕೆ ಆಧಾರವಾಗಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿ, ಗಿಲ್ ಈ ಪಂದ್ಯದಲ್ಲಿ 146 ಎಸೆತಗಳಲ್ಲಿ 91 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ರಿಷಭ್ ಪಂತ್ ಸಹ ಈ ಪಂದ್ಯದಲ್ಲಿ 138 ಎಸೆತಗಳಲ್ಲಿ 89 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಭಾರತ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು.
ಚೆನ್ನೈನಲ್ಲಿ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಅವರ ಆಟವನ್ನು ಕಂಡು ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಗಾಬಾ ಟೆಸ್ಟ್‌ನ ನೆನಪು ಮಾಡಿಕೊಂಡರು.