For Quick Alerts
ALLOW NOTIFICATIONS  
For Daily Alerts
 

IND vs BAN: ಪಂತ್, ಗಿಲ್ ಶತಕ, 2ನೇ ಇನಿಂಗ್ಸ್‌ನಲ್ಲಿ ಭಾರತ 4 ವಿಕೆಟ್‌ಗೆ 287 ಡಿಕ್ಲೇರ್‌: ಬಾಂಗ್ಲಾಗೆ 515 ರನ್‌ಗಳ ಗುರಿ

ಚೆನ್ನೈ: ಭರವಸೆಯ ಆಟಗಾರರಾದ ಶುಭಮನ್‌ ಗಿಲ್‌ ಹಾಗೂ ರಿಷಭ್‌ ಪಂತ್‌ ಶತಕದ ನೆರವಿನಿಂದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 287 ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ 515 ರನ್‌ಗಳ ಸವಾಲಿನ ಗುರಿ ನೀಡಿದೆ.

ಶನಿವಾರ ಮೂರನೇ ದಿನದವಾಟವನ್ನು ಭಾರತ ಮೂರು ವಿಕೆಟ್‌ಗೆ 81 ರನ್‌ಗಳಿಂದ ಮುಂದುವರೆಸಿತು. 4 ವಿಕೆಟ್‌ಗೆ 287 ರನ್‌ಗಳಿಸಿದ್ದಾಗ ರೋಹಿತ್ ಶರ್ಮಾ ಡಿಕ್ಲೇರ್‌ ಮಾಡಿಕೊಂಡರು. ಈ ಮೂಲಕ ಭಾರತ ಬಾಂಗ್ಲಾಗೆ ಕಠಿಣ ಗುರಿಯನ್ನು ನೀಡಿದೆ.

IND vs BAN India declare at 287 4 set 515-run target for Bangladesh in Chennai

4ನೇ ವಿಕೆಟ್‌ಗೆ 167 ರನ್‌ ಜೊತೆಯಾಟ

ಭಾರತದ ಪರ ಮೂರನೇ ದಿನದಾಟವನ್ನು ಆರಂಭಿಸಿದ ಟೀಮ್ ಇಂಡಿಯಾದ ಭರವಸೆಯ ಆಟಗಾರರಾದ ರಿಷಭ್‌ ಪಂತ್‌ ಹಾಗೂ ಶುಭಮನ್‌ ಗಿಲ್‌ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿಯನ್ನು ಕಟ್ಟಿಹಾಕಲು ಬಾಂಗ್ಲಾ ಬೌಲರ್‌ಗಳು ವಿಫಲರಾದರು. ಪಿಚ್‌ನ ಮರ್ಮವನ್ನು ಅರಿತು ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು.

ನಾಲ್ಕನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ಶುಭಮನ್‌ ಗಿಲ್‌ ಜೋಡಿ 217 ಎಸೆತಗಳಲ್ಲಿ 167 ರನ್‌ ಸಿಡಿಸಿದರು. ಈ ಮೂಲಕ ಭಾರತ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.

IND vs BAN India declare at 287 4 set 515-run target for Bangladesh in Chennai

ಗಿಲ್‌ ಶತಕ

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶುಭ್‌ಮನ್‌ ಗಿಲ್ ಅಬ್ಬರಿಸಿದರು. ಮೊದಲ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದ ಗಿಲ್‌ ಎರಡನೇ ಇನಿಂಗ್ಸ್‌ನಲ್ಲಿ ರನ್‌ ಮಹಲ್ ಕಟ್ಟಿದರು. ಇವರು ಸತತ ಎರಡನೇ ಟೆಸ್ಟ್‌ನ, ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಇದಕ್ಕೂ ಮೊದಲು ಇವರು ಧರ್ಮಶಾಲದಲ್ಲಿ ನಡೆದಿದ್ದ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ನಲ್ಲೂ ಗಿಲ್‌ ಶತಕ ಬಾರಿಸಿದ್ದರು.

ಶುಭಮನ್‌ ಗಿಲ್‌ 176 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್‌ ಸೇರಿದಂತೆ 119 ರನ್‌ ಬಾರಿಸಿದರು. ಇದು ಗಿಲ್‌ ಅವರ ಟೆಸ್ಟ್‌ ಜೀವನದ ಆರನೇ ಶತಕವಾಗಿದೆ.

ರಿಷಭ್‌ ಪಂತ್‌ ಶತಕ

ಇನ್ನು ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ ರಿಷಭ್ ಪಂತ್‌ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 129 ಎಸೆತಗಳಲ್ಲಿ 23 ಬೌಂಡರಿ, 4 ಸಿಕ್ಸರ್‌ ಸೇರಿದಂತೆ 109 ರನ್‌ ಬಾರಿಸಿ ಅಬ್ಬರಿಸಿದರು. ಇದು ರಿಷಭ್ ಪಂತ್‌ ಟೆಸ್ಟ್‌ ಜೀವನದ ಆರನೇ ಶತಕವಾಗಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು.

ಬಾಂಗ್ಲಾದೇಶದ ಪರ ಮೆಹದಿ ಹಸನ್‌ ಮಿರ್ಜಾ 2, ನಹೀದ್ ರಾಣಾ, ತಸ್ಕಿನ್‌ ಅಹ್ಮದ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

Story first published: Saturday, September 21, 2024, 13:41 [IST]
Other articles published on Sep 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+