Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದ 3: ಏನಿದು? ಇಲ್ಲಿದೆ ಕಂಪ್ಲೀಟ್ ವರದಿ

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್‌ ಪಂದ್ಯಕ್ಕೆ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಡಿವೆ. ಮೊದಲ ಟೆಸ್ಟ್‌ಗೆ ಕೆಂಪು ಮಣ್ಣಿನ ಪಿಚ್‌ ಒದಗಿಸಲಾಗಿದೆ. ಹೀಗಾಗಿ ತಂಡದ ಸಂಯೋಜನೆ ನಿಜಕ್ಕೂ ದೊಡ್ಡ ತಲೆ ನೋವಾಗಿದೆ.

ಗುರುವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪಂದ್ಯ ಗೆಲ್ಲುವ ನೆಚ್ಚಿನ ತಂಡ. ಆದರೆ ಪ್ರವಾಸಿ ತಂಡವನ್ನು ಕಡೆಗಣಿಸುವಂತೆ ಇಲ್ಲ. ಬಾಂಗ್ಲಾ ತಂಡ ಪಾಕ್‌ ತಂಡವನ್ನು ತವರಿನಲ್ಲಿ ಮಣಿಸಿ ಅಬ್ಬರಿಸಿದೆ. ಹೀಗಾಗಿ ಉಭಯ ತಂಡಗಳ ನಡುವಣ ಮೊದಲ ಟೆಸ್ಟ್‌ ರೋಚಕತೆ ಹೆಚ್ಚಿಸಿದೆ.

IND vs BAN India Playing XI Concerns Ahead of First Test Against Bangladesh in Chennai

ಪ್ಲೇಯಿಂಗ್ ಇಲೆವೆನ್‌ ದೊಡ್ಡ ತಲೆ ನೋವು

ಟೀಮ್ ಇಂಡಿಯಾ ಮೊದಲ ಟೆಸ್ಟ್‌ಗೆ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿದೆ. ಭಾರತ ತಂಡದಲ್ಲಿ ಸದ್ಯ ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಟಾಪ್‌ ಆರ್ಡರ್‌ನಲ್ಲಿ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಶುಭಮನ್‌ ಗಿಲ್‌, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟ್‌ ಮಾಡುವುದನ್ನು ಕಾಣಬಹುದು. ಆದರೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಯಾರು ಎಂಬ ಪ್ರಶ್ನೆಗೆ ಇನ್ನು ನಿಶ್ಚಿತ ಉತ್ತರ ಸಿಕ್ಕಿಲ್ಲ.

ಒಂದೇ ಸ್ಥಾನಕ್ಕೆ ಸರ್ಫರಾಜ್‌, ರಾಹುಲ್ ಫೈಟ್

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿರುವ ಸರ್ಫರಾಜ್ ಖಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಕ್ಷಮತೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡದ ಕೆಎಲ್ ರಾಹುಲ್ ಸಹ ಈಗ ತಂಡ ಸೇರಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಸರ್ಫರಾಜ್ ಹಾಗೂ ರಾಹುಲ್ ನಡುವೆ ಫೈಟ್ ಇದೆ. ಯಾರಿಗೆ ನಾಯಕ ಮಣೆ ಹಾಕುತ್ತಾರೆ ಎಂಬುದು ದೊಡ್ಡ ಪ್ರಶ್ನೆ ಆಗಿದೆ.

ರಿಷಭ್‌ ಪಂತ್‌ ಫಸ್ಟ್‌ ಚಾಯ್ಸ್‌

ರಿಷಭ್ ಪಂತ್ ಹಾಗೂ ಧ್ರುವ್ ಜುರೇಲ್‌ ಇಬ್ಬರೂ ಮೊದಲ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪ್ರಸಕ್ತ ಫಾರ್ಮ್‌ನ್ನು ಕನ್ಸಿಡರ್ ಮಾಡಿದರೆ, ರಿಷಭ್ ಪಂತ್‌ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್‌ ಸಿಗುವುದು ಹೆಚ್ಚಿದೆ.

ಬಗೆಹರಿಯದ ಮೂರರ ಗೊಂದಲ

ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಚಿಂತೆಯನ್ನು ಹೆಚ್ಚಿಸಿದ್ದು ಮೂರು. ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್ ನಿರ್ಮಿಸಲಾಗಿದೆ. ಈ ಪಿಚ್‌ ವೇಗದ ಬೌಲರ್‌ಗಳಿಗೆ ಕೊಂಚ ಸಹಾಯ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಚೆನ್ನೈನ ಪಿಚ್‌ನ ಸಂಪ್ರದಾಯವನ್ನು ನೋಡಿದರೆ, ಈ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತದೆ. ಹೀಗಾಗಿ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೂವರು ವೇಗಿಗಳಿಗೆ ಆಡುವ ಹನ್ನೊಂದರಲ್ಲಿ ಅವಕಾಶ ನೀಡಬೇಕೋ. ಅಥವಾ ಮೂರು ಸ್ಪಿನ್ ಬೌಲರ್‌ಗಳಿಗೆ ಅವಕಾಶ ನೀಡಬೇಕು ಎಂಬ ಚಿಂತೆ ಮನೆ ಮಾಡಿದೆ.

ಸ್ಟಾರ್ ಆಟಗಾರರ ಬಲ

ಬಾಂಗ್ಲಾ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಇವರು ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಅಂಗಳ ಪ್ರವೇಶಿಸಲಿದ್ದಾರೆ. ಈಗಾಗಲೇ ಕೌಂಟಿಯಲ್ಲಿ ಅಬ್ಬರಿಸಿರುವ ಶಕೀಬ್ ಅಲ್ ಹಸನ್ ಅವರು ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಕಟ್ಟಿ ಹಾಕಬಲ್ಲರು. ಉಳಿದ ಆಟಗಾರರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಆಡುವ ಭರವಸೆ ಮೂಡಿಸಿದ್ದಾರೆ.

Story first published: Wednesday, September 18, 2024, 13:27 [IST]
Other articles published on Sep 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+