IND vs BAN: ಟೀಮ್ ಇಂಡಿಯಾ ಮೊದಲ ಟೆಸ್ಟ್ ಗೆದ್ದರೆ, ರೋಹಿತ್ ಹೆಸರಿಗೆ ಹೊಸ ದಾಖಲೆ
ಗುರುವಾರದಿಂದ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೆಸ್ಟ್‌ಗೆ ಉಭಯ ತಂಡಗಳು ತಯಾರಿ ನಡೆಸಲಿವೆ. ತವರಿನಲ್ಲಿ ಟೀಮ್ ಇಂಡಿಯಾ ಅಬ್ಬರಿಸೋಕೆ ಪ್ಲ್ಯಾನ್ ಮಾಡಿಕೊಂಡಿದೆ. ಪಾಕ್ ತಂಡವನ್ನು ತವರಿನಲ್ಲಿ ಮಣಿಸಿದ ಮನೋ ಬಲ ಬಾಂಗ್ಲಾ ತಂಡಕ್ಕೆ ಇದ್ದರೆ, ಭಾರತಕ್ಕೆ ಅಭಿಮಾನಿಗಳ ಬಲವಿದೆ.
ಚೆನ್ನೈನ ಐತಿಹಾಸಿಕ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಜಿದ್ದಾಜಿದ್ದಿನ ಫೈಟ್ ನಿರೀಕ್ಷಿಸಬಹುದಾಗಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಅಂಗದಳದಲ್ಲಿ ನವ ಇತಿಹಾಸ ನಿರ್ಮಿಸುವ ಕನಸಿನಲ್ಲಿದ್ದಾರೆ. ಯಾವ ದಾಖಲೆ ನಿರ್ಮಿಸುತ್ತಾರೆ ಎಂಬ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಭಾರತದ ಅತ್ಯಂತ ಹಳೆಯ ಸ್ಟೇಡಿಯಂಗಳಲ್ಲಿ ಒಂದಾಗಿದೆ. ಈ ಮೈದಾನದಲ್ಲಿ 1934 ರಲ್ಲಿ ಇಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಾಯಿತು. ಇಲ್ಲಿಯವರೆಗೆ 34 ಟೆಸ್ಟ್ ಪಂದ್ಯಗಳು ಇಲ್ಲಿ ನಡೆದಿವೆ. ಈ ಪೈಕಿ 15 ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವಿನ ದಡವನ್ನು ದಾಟಿದರೆ, 11 ಪಂದ್ಯ ಡ್ರಾನಲ್ಲಿ ಅಂತ್ಯ ಗೊಂಡಿವೆ. ಆತಿಥೇಯ ಭಾರತ ತಂಡ 7 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು.
ಚೆನ್ನೈನಲ್ಲಿ ರೋಹಿತ್ ಇತಿಹಾಸ?
ಟೀಮ್ ಇಂಡಿಯಾ ಹಾಗೂ ಬಾಂಗ್ಲಾ ನಡುವಣ ಮೊದಲ ಟೆಸ್ಟ್‌ನಲ್ಲಿ ನಾಯಕ ರೋಹಿತ್ ಶರ್ಮಾ ದಾಖಲೆಯ ಸನಿಹದಲ್ಲಿ ನಿಂತಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಚೆನ್ನೈ ನೆಲದಲ್ಲಿ ಹೊಸ ಇತಿಹಾಸ ನಿರ್ಮಿಸುವುದು ಖಚಿತ. ಸೆಪ್ಟೆಂಬರ್ ತಿಂಗಳಿನಲ್ಲಿ ಟೀಮ್ ಇಂಡಿಯಾ ಚೆನ್ನೈನಲ್ಲಿ ಒಟ್ಟು 3 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಎರಡು ಪಂದ್ಯ ಡ್ರಾದಲ್ಲಿ ಅಂತ್ಯವಾದರೆ, ಒಂದು ಪಂದ್ಯ ಟೈ ಆಗಿತ್ತು. ಹೀಗಾಗಿ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಗೆಲುವಿನಲ್ಲಿ ಟೀಮ್ ಇಂಡಿಯಾ ಸಫಲವಾದರೆ, ಇತಿಹಾಸ ನಿರ್ಮಿಸಬಹುದು.
ಸೆಪ್ಟೆಂಬರ್ ಮಹಿಮೆ
1979ರಲ್ಲಿ ನಡೆದಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ಪಂದ್ಯ ಹಾಗೂ 1982ರಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿದ್ದವು. 1986 ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಟೈ ಆಗಿ ಉಳಿಯಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಚೆನ್ನೈನಲ್ಲಿ ಇತಿಹಾಸ ನಿರ್ಮಿಸುವ ಅವಕಾಶವಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಅಂಕಿ ಅಂಶಗಳ ಲೆಕ್ಕಾಚಾರಲ್ಲಿ ಟೀಮ್ ಇಂಡಿಯಾ ಬಲಾಢ್ಯವಾಗಿದ್ದು, ಮೊದಲ ಟೆಸ್ಟ್ ಗೆದ್ದು ಇತಿಹಾಸದ ಪುಟ ಸೇರುವ ಕನಸಿನಲ್ಲಿದೆ. ಟೀಮ್ ಇಂಡಿಯಾ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಲ್ಲಿ, ಸೋಲಿಗಿಂತ ಹೆಚ್ಚಿನ ಗೆಲುವು ದಾಖಲಿಸಿದ ಸಾಧನೆಯನ್ನು ಮಾಡಲಿದೆ. ಈ ಮೂಲಕ ಇತಿಹಾಸದಲ್ಲಿ ಎಂದೂ ಮಾಡದ ಸಾಧನೆಗೆ ಸಾಕ್ಷಿಯಾಗಲಿದೆ. ಇನ್ನು ಸರಣಿಯನ್ನು ವೈಟ್ ವಾಶ್ ಮಾಡಿದರೆ ದಕ್ಷಿಣ ಆಫ್ರಿಕಾದ ದಾಖಲೆ ಉಡೀಸ್ ಆಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications