
ಅಂತಿಮ ಏಕದಿನದ ಬಳಿಕ ಟೆಸ್ಟ್ ಸರಣಿಗೂ ಅಲಭ್ಯ
ಅಂರಿಮ ಏಕದಿನ ಪಂದ್ಯದಿಒಂದ ಹೊರಗುಖಿದ ರೋಹಿತ್ ಶರ್ಮಾ ಭಲಿಕ ಮೊದಲ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದರು. ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಎರಡನೇ ಟೆಸ್ಟ್ ಪಂದ್ಯಕ್ಕೂ ರೋಹಿತ್ ಶರ್ಮಾ ಅಲಭ್ಯವಾಗಲಿದ್ದಾರೆ. ರೋಹಿತ್ ಶರ್ಮಾ ಬೆರಳಿನ ಗಾಯ ಸಂಪೂರ್ಣವಾಗಿ ಚೇತರಿಕೆ ಕಾರಣ ಕಾರಣದಿಂದಾಗಿ ಮತ್ತಷ್ಟು ವಿಶ್ರಾಂತಿ ನೀಡಲು ಮ್ಯಾನೇಜ್‌ಮೆಂಟ್ ಬಯಸಿದೆ.

ನಾಯಕನಾಗಿ ಮುಂದುವರಿಯಲಿದ್ದಾರೆ ರಾಹುಲ್
ಇನ್ನು ಮೊದಲ ಪಂದ್ಯದಲ್ಲಿ ರೋಹಿತ್ ಅಲಭ್ಯತೆಯಲ್ಲಿ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಇದೀಗ ಎರಡನೇ ಪಂದ್ಯಕ್ಕೂ ರೋಹಿತ್ ಅಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪಂದ್ಯವನ್ನು ಮುನ್ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ರಾಹುಲ್ ಬ್ಯಾಟಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿದ್ದರು ಕೂಡ ನಾಯಕತ್ವದಲ್ಲಿ ಗಮನಸೆಳೆದಿದ್ದರು. ಹೀಗಾಗಿ ಕೆಎಲ್ ರಾಹುಲ್‌ಗೆ ಮತ್ತೊಂದು ಅವಕಾಶ ದೊರೆತಿದೆ.

ಆರಂಭಿಕನಾಗಿ ಗಿಲ್‌ಗೆ ಮತ್ತೊಂದು ಅವಕಾಶ
ಇತ್ತ ಆರಭಿಕನಾಗಿ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಯುವ ಆಟಗಾರ ಶುಬ್ಮನ್ ಗಿಲ್ ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಗಿಲ್ ಭರ್ಜರಿ ಶತಕ ಸಿಡಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಲು ವಿಫಲವಾಗಿದ್ದ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೋಘ ಆಟವಾಡುವ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರ್ಣಗೊಳಿಸಿದ್ದರು. ರೋಹಿತ್ ಶರ್ಮಾ ಎರಡನೇ ಪಂದ್ಯಕ್ಕೆ ಲಭ್ಯವಾಗುದ್ದರೆ ಅನಿವಾರ್ಯವಾಗಿ ಗಿಲ್ ತಮ್ಮ ಸ್ಥಾನವನ್ನು ನಾಯಕನಿಗಾಗಿ ಬಿಟ್ಟುಕೊಡಬೇಕಿತ್ತು. ಆದರೆ ರೋಹಿತ್ ಮತ್ತೆ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಯುವ ಆಟಗಾರನಿಗೆ ತನ್ನ ಸಾಮರ್ಥ್ಯ ಪ್ರದರ್ಶಿಸಲು ಮತ್ತೊಂದು ಅವಕಾಶ ದೊರೆತಿದೆ.

ಶ್ರೀಲಂಕಾ ವಿರುದ್ಧದ ಸರಣಿಗೆ ಕಮ್‌ಬ್ಯಾಕ್ ಸಾಧ್ಯತೆ
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತೆ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಜನವರಿ ತಿಂಗಳಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ವೈಟ್‌ಬಾಲ್ ಸರಣಿಗೆ ರೋಹಿತ್ ಶರ್ಮಾ ತಂಡಕ್ಕೆ ವಾಪಾಸಾಗುವ ಸಾಧ್ಯತೆಯಿದೆ. ಜನವರಿ 3ರಿಂದ ಈ ಸರಣಿ ಆರಂಭವಾಗಲಿದ್ದು ಮೊದಲಿಗೆ ಮೂರು ಪಂದ್ಯಗಳ ಟ20 ಸರಣಿ ಆಯೋಜನೆಯಾಗಲಿದ್ದು ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.


Click it and Unblock the Notifications
