IND vs BAN 1st test: ವಿರಾಟ್ ಕೊಹ್ಲಿಯ ಅನಗತ್ಯ ದಾಖಲೆ ಸರಿಗಟ್ಟಿದ ಶುಮಭನ್ ಗಿಲ್
ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್‌ಗಳು ವಿಶೇಷವಾದದ್ದೇನೂ ಮಾಡಲಾಗಲಿಲ್ಲ.
ಬಾಂಗ್ಲಾದೇಶ ಬೌಲಿಂಗ್ ದಾಖಲಿಗೆ ಕಂಗಾಲಾದ ಟೀಮ್ ಇಂಡಿಯಾ ಟಾಪ್ ಬ್ಯಾಟರ್‌ಗಳು ರನ್ ಗಳಿಸದೆ ವಿಕೆಟ್ ಕಳೆದುಕೊಂಡರು. ಭಾರೀ ನಿರೀಕ್ಷೆಯಿಟ್ಟಿದ ಟೀಮ್ ಇಂಡಿಯಾ ಯುವ ಸ್ಟಾರ್ ಶುಭಮನ್ ಗಿಲ್ ಕೂಡ ತಮ್ಮ ಖದರ್ ತೋರಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಗಿಲ್ ಹೆಸರಿಗೆ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ.

ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಎಂಟು ಎಸೆತಗಳಲ್ಲಿ ಎದುರಿಸದ ಗಿಲ್ ಶೂನ್ಯಕ್ಕೆ ಔಟಾದರು. ಈ ಮೂಲಕ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅನಗತ್ಯ ದಾಖಲೆಯನ್ನು ಸರಿಗಟ್ಟಿದರು. ಈ ವರ್ಷ ತವರು ನೆಲದಲ್ಲಿ ಗಿಲ್ ಮೂರನೇ ಬಾರಿಗೆ ಶೂನ್ಯಕ್ಕೆ ಔಟಾಗಿರುವುದು.
ಕೊಹ್ಲಿಯ ಅನಗತ್ಯ ದಾಖಲೆಯನ್ನು ಸರಿಗಟ್ಟುವುದಲ್ಲದೆ, ಗಿಲ್ ಒಂದು ವರ್ಷದಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಡಕ್‌ಗಳಿಗೆ ಔಟಾದ ಆರನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮೊಹಿಂದರ್ ಅಮರನಾಥ್ 1983ರಲ್ಲಿ 5 ಬಾರಿ ಖಾತೆ ತೆರೆಯದೆ ಔಟಾಗಿ ಅಗ್ರಸ್ಥಾನದಲ್ಲಿದ್ದರೆ, ಮನ್ಸೂರ್ ಅಲಿ ಖಾನ್ ಪಟೌಡಿ (1969), ದಿಲೀಪ್ ವೆಂಗ್‌ಸರ್ಕರ್ (1979), ವಿನೋದ್ ಕಾಂಬ್ಲಿ (1994) ಮತ್ತು ಕೊಹ್ಲಿ (2021) ನಂತರದ ಸ್ಥಾನದಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಗೆದ್ದು ಬೀಗಿತ್ತು. ಈ ಸರಣಿ ಗೆಲುವಿನಲ್ಲಿ ಶುಭ್‌ಮನ್ ಗಿಲ್ ಅವರ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತ್ತು. ಈ ಸರಣಿಯಲ್ಲೂ ಗಿಲ್ ಎರಡು ಬಾರಿ ಡಕೌಟ್ ಆಗಿದ್ದರು. ಮೊದಲನೆಯದು ಹೈದರಾಬಾದ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತು ಎರಡನೆಯದು ರಾಜ್‌ಕೋಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗಿದ್ದರು. ಇದಾದ ನಂತರ ಟೀಮ್ ಇಂಡಿಯಾದಲ್ಲಿ ಅವರು ಗೆಲುವಿನ ಇನ್ನಿಂಗ್ಸ್ ಆಧಾರದ ಮೇಲೆ ಸ್ಥಾನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಆದರೆ ಬಾಂಗ್ಲಾದೇಶ ವಿರುದ್ಧ ಗಿಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವಲ್ಲಿ ಎಡುವಿದರು.
ಹಸನ್ ಮಹಮೂದ್ ಬೌಲಿಂಗ್‌ನಲ್ಲಿ ಗಿಲ್ ಲೆಗ್ ಸೈಡ್‌ನಲ್ಲಿ ವಿಕೆಟ್‌ಕೀಪರ್ ಲಿಟನ್ ದಾಸ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಬಲಗೈ ವೇಗದ ಬೌಲರ್ ಹಸನ್ ಮಹಮೂದ್ ಮೊದಲ ಸೆಷನ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಗಿಲ್ ಅವರಂತಹ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪ್ರವಾಸಿ ತಂಡದ ಹೀರೋ ಆಗಿ ಹೊರಹೊಮ್ಮಿದರು.
ಈ ಸಂದರ್ಭದಲ್ಲಿ ಪಂದ್ಯದ ಮೇಲೆ ಬಾಂಗ್ಲಾದೇಶ ಪ್ರಾಬಲ್ಯ ಸಾಧಿಸಿತ್ತು. ಆದರೆ ರಿಷಬ್ ಪಂತ್ (39) ಮತ್ತು ಯಶಸ್ವಿ ಜೈಸ್ವಾಲ್ (56) ಉತ್ತಮ ಅಡಿಪಾಯ ಹಾಕಿದರು. ಈ ಅಡಿಪಾಯದ ಮೇಲೆ ರವೀಂದ್ರ ಜಡೇಜಾ (86) ಮತ್ತು ರವಿಚಂದ್ರನ್ ಅಶ್ವಿನ್ (102) ಅದ್ಭುತ ಇನ್ನಿಂಗ್ಸ್ ಕಟ್ಟಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications