Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್‌ಮ್ಯಾನ್ ಕ್ಯಾಚ್ ಪಡೆದ ರವೀಂದ್ರ ಜಡೇಜಾ: ಫಿಲ್ಡಿಂಗ್ ಕೋಚ್‌ಗೆ ಕಳುಹಿಸಿದ ಸಂದೇಶವೇನು?

ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಟೀಮ್ ಇಂಡಿಯಾದ ಅದ್ಭುತ ಪ್ರದರ್ಶನ ನೀಡಿದೆ. ಟಾಸ್ ಸೋತ ಭಾರತ ಮೊದಲಿಗೆ ಬೌಲಿಂಗ್ ದಾಳಿ ನಡೆಸಿದ್ದು ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಸಾಧಾರಣ ಮೊತ್ತಕ್ಕೆ ಆಲೌಟ್ ಮಾಡಿದೆ. ಇನ್ನು ಈ ಪಂದ್ಯದಲ್ಲಿ ಭಾರತದ ಬೌಲಿಂಗ್‌ ಜೊತೆಗೆ ಫೀಲ್ಡಿಂಗ್ ಕುಡ ಅದ್ಭುತವಾಗಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ.

ಅದರಲ್ಲೂ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಪಡೆದ ಕ್ಯಾಚ್ ಎಲ್ಲರನ್ನೂ ನಿಬ್ಬೆರಗಾಗಿಸಿದೆ. ಫಿಲ್ಡಿಂಗ್‌ನಲ್ಲಿ ಯಾವಾಗಲೂ ಅಮೋಘ ಪ್ರದರ್ಶನ ನೀಡುವ ಜಡೇಜಾ ಈ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೂಪರ್ ಮ್ಯಾನ್ ರೀತಿಯಲ್ಲಿ ಕ್ಯಾಚ್ ಪಡೆದುಕೊಂಡಿದ್ದಾರೆ.

Ind vs Ban: Superman Ravindra take stunning catch then sends unique message to fielding Coach

ಜಸ್ಪ್ರೀತ್ ಬೂಮ್ರಾ ಎಸೆತದಲ್ಲಿ ಬಾಂಗ್ಲಾದೇಶದ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್ ಅವರು ಬೌಂಡರಿ ಬಾರಿಸುವ ಪ್ರತ್ನ ನಡೆಸಿದ್ದರು. ಆದರೆ ಜಡೇಜಾ ಅದ್ಭುತವಾಗಿ ಅದನ್ನು ಕ್ಯಾಚ್ ಪಡೆಯುವ ಮೂಲಕ ಪೆವಿಲಿಯನ್‌ಗೆ ಹಾದಿ ತೋರಿಸಿದರು. ಈ ಸಂದರ್ಭದಲ್ಲಿ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ಫೆವಿಲಿಯನ್‌ನತ್ತ ವಿಶೇಷ ಸನ್ನೆಯೊಂದನ್ನು ಸಂಭ್ರಮಿಸಿದ್ದಾರೆ. ಈ ಸನ್ನೆ ಏನು ಅನ್ನುವುದು ಟೀಮ್ ಇಂಡಿಯಾದ ಫಿಲ್ಡಿಂಗ್ ಕೋಚ್‌ಗೆ ಅರ್ಥವಾಗಿದ್ದು ಫಿಲ್ಡಿಂಗ್ ಕೋಚ್ ಕೂಡ ಶಬ್ಬಾಶ್‌ಗಿರಿ ನೀಡಿದ್ದಾರೆ.

ಅಂದಹಾಗೆ ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯದ ಮುಕ್ತಾಯದ ಬಳಿಕ ಟೀಮ್ ಇಂಡಿಯಾದ ಡ್ರೆಸ್ಸಿಂಗ್‌ರೂಮ್‌ನಲ್ಲಿ ಅದ್ಭುತ ಫೀಲ್ಡಿಂಗ್ ಮಾಡಿದ ಆಟಗಾರನಿಗೆ ಪದಕವನ್ನು ನೀಡಲಾಗುತ್ತದೆ. ಹಾಗಾಗಿಯೇ ರವೀಂದ್ರ ಜಡೇಜಾ ಈ ಅದ್ಭುತ ಕ್ಯಾಚ್ ಪಡೆದ ಬಳಿಕ ಫಿಲ್ಡಿಂಗ್ ಕೋಚ್‌ಗೆ ಸಂದೇಶ ಕಳುಹಿಸಿದ್ದಾರೆ. ನಾನು ಕೂಡ ಉತ್ತಮ ಫಿಲ್ಡಿಂಗ್‌ಗಾಗಿ ಪ್ರಶಸ್ತಿಯ ರೇಸ್‌ನಲ್ಲಿ ಇದ್ದೇನೆ ಎನ್ನುವ ಸಂದೇಶವನ್ನು ಜಡೇಜಾ ಕಳುಹಿಸಿದ್ದಾರೆ.

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್

ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ಶಕೀಬ್ ಅಲ್ ಹಸನ್, ತಂಜಿಮ್ ಹಸನ್ ಸಾಕಿಬ್, ಮಹೇದಿ ಹಸನ್, ತಸ್ಕಿನ್ ಅಹ್ಮದ್

Story first published: Thursday, October 19, 2023, 20:32 [IST]
Other articles published on Oct 19, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+