Ind vs Ban: ಮತ್ತೊಂದು ಗೆಲುವಿನ ಹೊಸ್ತಿಲಲ್ಲಿ ಭಾರತ: ಸಾಧಾರಣ ಗುರಿ ನೀಡಿದ ಬಾಂಗ್ಲಾದೇಶ
ಪುಣೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸಾಧಾರಣ ಗುರಿ ನಿಗದಿಪಡಿಸಿದೆ ಬಾಂಗ್ಲಾದೇಶ. ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಬಾಂಗ್ಲಾ ದಾಂಡಿಗರು ಆರಂಭದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಬಳಿಕ ಅವರನ್ನು ಕಟ್ಟಿಹಾಕುವಲ್ಲಿ ಭಾರತೀಯ ಬೌಲರ್‌ಗಳು ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತ ತಂಡಕ್ಕೆ 256 ರನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ಈ ಪಂದ್ಯದಲ್ಲಿ ಅದ್ಭುತ ಆರಂಭವನ್ನು ಪಡೆಯಿತು. ಲಿಟನ್ ದಾಸ್ ಹಾಗೂ ತನ್ಜಿದ್ ಹಸನ್ ಮೊದಲ ವಿಕೆಟ್‌ಗೆ ಭರ್ಜರಿ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆರಂಭಿಕ ಆಟಗಾರರಿ ಇಬ್ಬರು ಕೂಡ ಅರ್ಧ ಶತಕವನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಈ ಪಂದ್ಯದಲ್ಲಿ ಬಾಂಗ್ಲಾದೇಶ ದೊಡ್ಡ ಮೊತ್ತವನ್ನು ಗಳಿಸುವ ಸೂಚನೆ ನೀಡಿತ್ತು.

ಆದರೆ 51 ರನ್‌ಗಳಿಸಿದ ತನ್ಜಿದ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿದೆ. ತನ್ಜಿದ್ 43 ಎಸೆತಗಳನ್ನು ಎದುರಿಸಿದ್ದು ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ ಬಳಿಕ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಮತ್ತೊಂದೆಡೆ ಲಿಟನ್ ದಾಸ್ 82 ಎಸೆತಗಳನ್ನು ಎದುರಿಸಿ 66 ರನ್‌ಗಳನ್ನು ಗಳಿಸಿದ್ದು 7 ಬೌಂಡರಿ ಬಾರಿಸಿದ್ದಾರೆ. ಇವರಿಬ್ಬರು ಔಟಾದ ಬಳಿಕ ಭಾರತದ ಬೌಲರ್‌ಗಳು ಸಂಪಊರ್ಣ ಮೇಲುಗೈ ಸಾಧಿಸಿದರು. ಮುಷ್ಫಿಕರ್ ರಹೀಮ್(38) ಹಾಗೂ ಮಹ್ಮದುಲ್ಲಾ 46 ರನ್ ಬಾರಿಸಿದ್ದು ತಂಡದ ಮೊತ್ತ 250ರ ಗಡಿದಾಟಲು ಕಾರಣವಾದರು.
ಇನ್ನು ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಈ ಪಂದ್ಯದಲ್ಲಿಯೂ ಸಂಘಟಿತ ಪ್ರದರ್ಶನ ನೀಡಿದೆ. ಬೂಮ್ರಾ, ಸಿರಾಜ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಇನ್ನು ಠಾಕೂರ್, ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ಶಕೀಬ್ ಅಲ್ ಹಸನ್, ತಂಜಿಮ್ ಹಸನ್ ಸಾಕಿಬ್, ಮಹೇದಿ ಹಸನ್, ತಸ್ಕಿನ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications