ವಿಶ್ವಕಪ್ ಟೂರ್ನಿಯಲ್ಲಿ ಸತತ ನಾಲ್ಕನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿ ಅಬ್ಬರಿಸಿದಿದೆ. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನ ಬಳಿಕ ಬ್ಯಾಟಿಂಗ್‌ನಲ್ಲಿಯೂ ಅಬ್ಬರದ ಪ್ರದರ್ಶನ ನೀಡಿದ್ದು ಅಮೋಘ ಗೆಲುವು ಸಾಧಿಸಿದೆ. ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನದ ಬಳಿಕ ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಅಮೋಘ ಪ್ರದರ್ಶನಕ್ಕೆ ಬಾಂಗ್ಲಾ ಅಕ್ಷರಶಃ ಧ್ವಂಸವಾಗಿದೆ. ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 78ನೇ ಶತಕ ಪೂರ್ಣಗೊಳಿಸಿದ್ದಾರೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 262 ರನ್‌ಗಳ ಗುರಿಯನ್ನು ಬಾಂಗ್ಲಾದೇಶ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಟೀಮ್ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಅದ್ಭುತ ಆರಂಭ ನೀಡಿದರು. ನಾಯಕ ರೋಹಿತ್ ಸ್ಪೋಟಕ ಪ್ರದರ್ಶನ ನಿಡಿದರೂ ಅರ್ಧ ಶತಕದ ಂಚಿನಲ್ಲಿ ಎಡವಿದರು. ಆದರೆ ಶುಬಮ್ನ ಗಿಲ್ ಚೊಚ್ಚಲ ವಿಶ್ವಕಪ್ ಅರ್ಧ ಶತಕ ಸಿಡಿಸಿ ಗಮನ ಸೆಳೆದರು.

ನಂತರ ಟೀಮ್ ಇಂಡಿಯಾದ ಇನ್ನಿಂಗ್ಸ್ ಕಟ್ಟಿದ್ದು ದಿಗ್ಗಜ ವಿರಾಟ್ ಕೊಹ್ಲಿ. ಮೊದಲಿಗೆ ಶ್ರೇಯಸ್ ಐಯ್ಯರ್ ಜೊತೆಗೆ ಸಣ್ಣ ಜೊತೆಯಾಟದಲ್ಲ ಭಾಗಿಯಾದ ವಿರಾಟ್ ಕೊಹ್ಲಿಗೆ ಮತ್ತೊಂದು ಅದ್ಭುತ ಜೊತೆಯಾಟದಲ್ಲಿ ಭಾಗಿಯಾದವರು ಕೆಎಲ್ ರಾಹುಲ್. ಈ ಜೋಡಿ ಈ ಪಂದ್ಯದಲ್ಲಿ 83 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಂತಿಮವಾಗಿ ಸಿಕ್ಸರ್ ಸಿಡಿಸುವ ಮೂಲಕ ಅಮೋಘ ಶತಕವನ್ನು ಪೂರ್ಣಗೊಳಸಿದ್ದಾರೆ. ಈ ಮೂಲಕ ಭಾರತ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ಈ ಪಂದ್ಯದಲ್ಲಿ ಅದ್ಭುತ ಆರಂಭವನ್ನು ಪಡೆಯಿತು. ಲಿಟನ್ ದಾಸ್ ಹಾಗೂ ತನ್ಜಿದ್ ಹಸನ್ ಮೊದಲ ವಿಕೆಟ್‌ಗೆ ಭರ್ಜರಿ 93 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಆರಂಭಿಕ ಆಟಗಾರರಿ ಇಬ್ಬರು ಕೂಡ ಅರ್ಧ ಶತಕವನ್ನು ದಾಖಲಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಈ ಪಂದ್ಯದಲ್ಲಿ ಬಾಂಗ್ಲಾದೇಶ ದೊಡ್ಡ ಮೊತ್ತವನ್ನು ಗಳಿಸುವ ಸೂಚನೆ ನೀಡಿತ್ತು.
ಆದರೆ 51 ರನ್‌ಗಳಿಸಿದ ತನ್ಜಿದ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿದೆ. ತನ್ಜಿದ್ 43 ಎಸೆತಗಳನ್ನು ಎದುರಿಸಿದ್ದು ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ ಬಳಿಕ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಮತ್ತೊಂದೆಡೆ ಲಿಟನ್ ದಾಸ್ 82 ಎಸೆತಗಳನ್ನು ಎದುರಿಸಿ 66 ರನ್‌ಗಳನ್ನು ಗಳಿಸಿದ್ದು 7 ಬೌಂಡರಿ ಬಾರಿಸಿದ್ದಾರೆ. ಇವರಿಬ್ಬರು ಔಟಾದ ಬಳಿಕ ಭಾರತದ ಬೌಲರ್‌ಗಳು ಸಂಪಊರ್ಣ ಮೇಲುಗೈ ಸಾಧಿಸಿದರು. ಮುಷ್ಫಿಕರ್ ರಹೀಮ್(38) ಹಾಗೂ ಮಹ್ಮದುಲ್ಲಾ 46 ರನ್ ಬಾರಿಸಿದ್ದು ತಂಡದ ಮೊತ್ತ 250ರ ಗಡಿದಾಟಲು ಕಾರಣವಾದರು.
ಇನ್ನು ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಈ ಪಂದ್ಯದಲ್ಲಿಯೂ ಸಂಘಟಿತ ಪ್ರದರ್ಶನ ನೀಡಿದೆ. ಬೂಮ್ರಾ, ಸಿರಾಜ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದ್ದಾರೆ. ಇನ್ನು ಠಾಕೂರ್, ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್
ಬಾಂಗ್ಲಾದೇಶ ಆಡುವ ಬಳಗ: ಲಿಟನ್ ದಾಸ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೋ (ನಾಯಕ), ಮೆಹಿದಿ ಹಸನ್ ಮಿರಾಜ್, ತೌಹಿದ್ ಹೃದಯ್, ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ಶಕೀಬ್ ಅಲ್ ಹಸನ್, ತಂಜಿಮ್ ಹಸನ್ ಸಾಕಿಬ್, ಮಹೇದಿ ಹಸನ್, ತಸ್ಕಿನ್ ಅಹ್ಮದ್