For Quick Alerts
ALLOW NOTIFICATIONS  
For Daily Alerts
 

Ind vs Ban: ಅಭ್ಯಾಸ ಮಾಡಿದ ಕೊಹ್ಲಿ, ವಿಶ್ರಾಂತಿ ಪಡೆದ ರೋಹಿತ್ ಶರ್ಮಾ ಮತ್ತು ತಂಡ

Ind vs Ban: Virat Kohli Practice In Nets, Rohit Sharma And Others Skip Training Session

ಭಾರತ-ಬಾಂಗ್ಲಾದೇಶದ ಏಕದಿನ ಸರಣಿಗೆ ದಿನಗಣನೆ ಆರಂಭವಾಗಿದೆ. ಭಾರತ ತಂಡ ಈಗಾಗಲೇ ಢಾಕಾಗೆ ಪ್ರಯಾಣ ಮಾಡಿದ್ದು, ಶುಕ್ರವಾರ ವಿರಾಟ್ ಕೊಹ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಆದರೆ, ರೋಹಿತ್ ಶರ್ಮಾ ಮತ್ತು ಇತರೆ ಆಟಗಾರರು ವಿಶ್ರಾಂತಿ ಪಡೆದರು.

ಶನಿವಾರ ಟೀಂ ಇಂಡಿಯಾ ಆಟಗಾರರು ಅಭ್ಯಾಸದ ಅವಧಿ ಹೊಂದಲಿದ್ದಾರೆ. ಡಿಸೆಂಬರ್ 4ರ ಭಾನುವಾರದಂದು ಏಕದಿನ ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಗುರುವಾರ ಢಾಕಾ ತಲುಪಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ತಂಡವನ್ನು ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.

ನ್ಯೂಜಿಲೆಂಡ್ ಪ್ರವಾಸಕ್ಕೆ ಹೋಗದ ಭಾರತದ ಹಿರಿಯ ಆಟಗಾರರು ಮತ್ತು ಕೋಚ್ ರಾಹುಲ್ ದ್ರಾವಿಡ್ ಮತ್ತು ಸಿಬ್ಬಂದಿ ಮುಂಬೈನಿಂದ ಢಾಕಾಗೆ ಪ್ರಯಾಣ ಮಾಡಿದ್ದು, ನ್ಯೂಜಿಲೆಂಡ್‌ ಪ್ರವಾಸದಲ್ಲಿದ್ದ ಶಿಖರ್ ಧವನ್ ಮತ್ತು ಇತರ ಆಟಗಾರರು ಶುಕ್ರವಾರ ಢಾಕಾಗೆ ಬಂದಿಳಿದಿದ್ದಾರೆ. ಏಕದಿನ ಸರಣಿಯ ನಂತರ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೂಡ ಆಡಲಿದೆ.

2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಭಾರತ ತಂಡ ಈಗ ಏಕದಿನ ಸರಣಿಗಳತ್ತ ಗಮನ ಹರಿಸಿದೆ. ಪ್ರಮುಖ ಆಟಗಾರರು ಇನ್ನುಮುಂದೆ ಏಕದಿನ ಸರಣಿಗಳನ್ನು ಸತತವಾಗಿ ಆಡುವ ಗುರಿಹೊಂದಿದ್ದಾರೆ. ನ್ಯೂಜಿಲೆಂಡ್ ಪ್ರವಾಸಕ್ಕಾಗಿ ವಿಶ್ರಾಂತಿ ಪಡೆದಿದ್ದ ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ.

 ಶತಕ ಗಳಿಸುವ ವಿಶ್ವಾಸದಲ್ಲಿ ವಿರಾಟ್

ಶತಕ ಗಳಿಸುವ ವಿಶ್ವಾಸದಲ್ಲಿ ವಿರಾಟ್

ಏಷ್ಯಾಕಪ್‌ ಮತ್ತು ಟಿ20 ವಿಶ್ವಕಪ್‌ನಲ್ಲಿ ಉತ್ತಮವಾಗಿ ರನ್ ಗಳಿಸುವ ಮೂಲಕ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿ ಈಗ ಏಕದಿನ ಕ್ರಿಕೆಟ್‌ನತ್ತ ಗಮನ ಹರಿಸಲಿದ್ದಾರೆ. ಟಿ20 ಮಾದರಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶತಕ ಗಳಿಸಿ ತಮ್ಮ 71ನೇ ಶತಕ ದಾಖಲಿಸಿದ್ದರು.

ಅವರು ಈಗ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಶತಕವನ್ನು ಗಳಿಸುವ ಉತ್ಸಾಹದಲ್ಲಿದ್ದಾರೆ. ಬಿಸಿಸಿಐ ಕೂಡ ಹಲವು ಪ್ರಮುಖ ಆಟಗಾರರಿಗೆ ಟಿ20 ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದು ಏಕದಿನ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುವಂತೆ ಕೇಳಿಕೊಳ್ಳಲು ಚಿಂತನೆ ನಡೆಸಿದೆ.

Dwayne Bravo : ಐಪಿಎಲ್‌ಗೆ ನಿವೃತ್ತಿ ಘೋಷಿಸಿ ಪೊಲಾರ್ಡ್‌ ದಾರಿ ಹಿಡಿದ ಸಿಎಸ್‌ಕೆ ಮಾಜಿ ಆಟಗಾರ!

ಏಕದಿನ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಸಿದ್ಧತೆ

ಏಕದಿನ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಸಿದ್ಧತೆ

2023ರಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳಲು ಭಾರತ ತಂಡಕ್ಕೆ ಈ ಸರಣಿ ಮಹತ್ವದ್ದಾಗಿದೆ. ಮುಂದಿನ ವರ್ಷದ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಮುನ್ನ ಭಾರತ ಸುಮಾರು 25 ಏಕದಿನ ಪಂದ್ಯಗಳನ್ನು ಆಡಲಿದೆ.

ಈ ವರ್ಷದ ಜುಲೈ ನಂತರ ಭಾರತ ತಂಡ ಇದೇ ಮೊದಲ ಬಾರಿ ಪರಿಪೂರ್ಣ ಸಾಮರ್ಥ್ಯದೊಂದಿಗೆ ಏಕದಿನ ಸರಣಿಯನ್ನು ಆಡಲು ಸಿದ್ಧವಾಗಿದೆ. ಟಿ20 ವಿಶ್ವಕಪ್‌ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರಿಂದ, ಭಾರತ ತಂಡದ ಪ್ರಮುಖ ಆಟಗಾರರನ್ನು ಹೊರತುಪಡಿಸಿ ಉಳಿದ ಆಟಗಾರರು ಹಲವು ಏಕದಿನ ಸರಣಿಗಳನ್ನು ಆಡಿದ್ದರು.

 ಹಲವು ಆಟಗಾರರಿಗೆ ಸರಣಿ ಪರೀಕ್ಷೆ

ಹಲವು ಆಟಗಾರರಿಗೆ ಸರಣಿ ಪರೀಕ್ಷೆ

ಏಕದಿನ ವಿಶ್ವಕಪ್‌ ಸಿದ್ಧತೆಗೆ ಈ ಸರಣಿಗಳನ್ನು ಆಯೋಜನೆ ಮಾಡುತ್ತಿರುವ ಕಾರಣ ಹಲವು ಆಟಗಾರರಿಗೆ ಈ ಸರಣಿ ಅಗ್ನಿಪರೀಕ್ಷೆಯಾಗಲಿದೆ. ತಮ್ಮ ಕಳಪೆ ಫಾರ್ಮ್‌ಗಾಗಿ ಟೀಕೆಗೆ ಗುರಿಯಾಗಿರುವ ರಿಷಬ್ ಪಂತ್, ಶಿಖರ್ ಧವನ್, ಕೆಎಲ್ ರಾಹುಲ್‌ ಮತ್ತಿತ್ತರ ಆಟಗಾರರಿಗೆ ಈ ಸರಣಿ ಬಹಳ ಮುಖ್ಯವಾಗಲಿದೆ.

ರೋಹಿತ್ ಶರ್ಮಾ ಕೂಡ ಟಿ20 ವಿಶ್ವಕಪ್‌ನಲ್ಲಿ ರನ್ ಗಳಿಸದೆ ವೈಫಲ್ಯ ಅನುಭವಿಸಿದ್ದರು. ಟಿ20 ಸರಣಿಯಲ್ಲಿ ಮಿಂಚಿದ ಸೂರ್ಯಕುಮಾರ್ ಯಾದವ್, ಅದೇ ಆಟವನ್ನು ಏಕದಿನ ಕ್ರಿಕೆಟ್‌ನಲ್ಲಿ ಆಡಲು ವಿಫಲರಾಗಿದ್ದಾರೆ. ಈಗ ಇವರೆಲ್ಲರಿಗೂ ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ರನ್ ಗಳಿಸಲೇಬೇಕಾದ ಅನಿವಾರ್ಯತೆ ಇದೆ.

ಏಕದಿನ ಸರಣಿಗಾಗಿ ಭಾರತ, ಬಾಂಗ್ಲಾದೇಶ ತಂಡ

ಏಕದಿನ ಸರಣಿಗಾಗಿ ಭಾರತ, ಬಾಂಗ್ಲಾದೇಶ ತಂಡ

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಹಬಾಜ್ ಅಹ್ಮದ್, ಕೆಎಲ್ ರಾಹುಲ್, ರಿಷಬ್ ಪಂತ್, ಇಶಾನ್ ಕಿಶನ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್.

ಬಾಂಗ್ಲಾದೇಶ: ಯಾಸಿರ್ ಅಲಿ, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಅಫೀಫ್ ಹೊಸೈನ್, ಮಹ್ಮುದುಲ್ಲಾ, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ಅನಾಮುಲ್ ಹಕ್, ಮುಶ್ಫಿಕರ್ ರಹೀಮ್, ನೂರುಲ್ ಹಸನ್, ಮುಸ್ತಾಫಿಜುರ್ ರಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಎಬಾಡೊಟ್ ಹೊಸೈನ್, ನಸುಮ್ ಅಹ್ಮದ್.

Story first published: Friday, December 2, 2022, 18:19 [IST]
Other articles published on Dec 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+